ಎನ್ನೊಂದಿಗಿನ
ನಿನ್ನ ಮುನಿಸು
ಸೂಜಿಮೊನೆಗಿಂತ
ಮೊನಚು….
ಚುಚ್ಚುತಿರಲಿ
ಹೀಗೆಯೇ ಎನ್ನೆದೆಗೆ
ನೋವಲ್ಲ ನಲಿವು….
ಕಾರಣವಿಷ್ಟೇ
ಚುಚ್ಚಿದಷ್ಟು ನಿನ್ನ
ಪ್ರೇಮದ ಹಚ್ಚೆಯು
ಅಚ್ಚೊತ್ತಿ ಕಂಗೊಳಿಸುವ
ಖುಷಿನೇ ಎದೆಯಾಗ…
ನೀ ನೋಯದಿರು
ಎನ್ನೊಲವೇ….

                🔆🔆🔆

✍️ ಶಿವಾನಂದ. ನಾಗೂರ, ಶಿಕ್ಷಕರು ಧಾರವಾಡ.