ಒಂದು ಹುಲ್ಲು ಕಡ್ಡಿಯು ಕೂಡ ಅಗೋಚರ ಶಕ್ತಿಯ ಸಂಕಲ್ಪವಿಲ್ಲದೆ ಅಲುಗದು.ಬೀಸೋ ಗಾಳಿಯು ಯಾವ ಕ್ಷಣದಲ್ಲಾದರೂ ತನ್ನ ದಿಕ್ಕನ್ನು ಬದಲಿಸಬಹುದು.ಅದು ಶಾಂತ ವೋ ಉಗ್ರವೋ ಉಹಿಸಲು ಸಾಧ್ಯವಿಲ್ಲ. ಅಷ್ಟೇ ಎಕೆ? ಒಂದು ಬೀಜ ಮೊಳಕೆಯೊಡೆ ಯಲು ಪೂರಕ ಪರಿಸರ ಇರಬೇಕು. ಹಾಗೆ ಯೇ ಬದುಕಿನ ಪ್ರತಿಯೊಂದು ಘಟನೆಗಳು ತನ್ನ ನಡುವನ ವಾಸ್ತವತೆಗೆ ಹೊಂದಿದರೆ ಮಾತ್ರ ಅದು ಪೂರಕವಾಗಿ ಹೊರಹೊಮ್ಮು ವುದು.ಇಲ್ಲವಾದರೆ ಮಾರಕವಾಗಿ ಮಾರ್ಪಾ ಡಾಗುವುದು.   ಅದು  ಕೂಡ   ಅವನ ಮನದಿಂಗಿತಕ್ಕೆ ಹೊರತಾಗಿಲ್ಲ.

ಮನಸ್ಸನ್ನು ಹಿಡಿದಿಡುವ ಕೆಲಸ,ಗಾಳಿಯನ್ನು ಬಂಧಿಸುವಂತೆ.ಚಂಚಲ ಮನಸ್ಸು ಯಾವ ಸಾಧನೆಯನ್ನು ಮಾಡಲಾರದು.ಪ್ರತಿಕ್ಷಣ ಬದಲಾಗುವ ನಿರ್ಧಾರಗಳು‌‌‌ ಆ ವ್ಯಕ್ತಿಯ ಮನೋವಿಕಾರತೆಯನ್ನು ಬಿಂಬಿಸುತ್ತದೆ. ಹಾಗೆಂದ ಮಾತ್ರಕ್ಕೆ ಗಳಿಸಿದ ಸಿದ್ದಿಗಳು ವ್ಯರ್ಥವಲ್ಲ.ಅವು ಸಮಯೋಚಿತವಾಗಿ ದಕ್ಕದಿರುವುದು ದುರಂತವೇ ಸರಿ.


ರಾಮಾಯಣದಲ್ಲಿ  ರಾವಣ  ಪ್ರಚಂಡ ಅದಮ್ಯ ಶಕ್ತಿಹೊಂದಿದ ಮಹಾನ್ ಶಿವಭಕ್ತ. ಸಾಕ್ಷಾತ್ ಪರಶಿವನ‌ ಆತ್ಮ ಲಿಂಗವನ್ನು ತನ್ನ ತಾಯಿಗೊಸ್ಕರ ಉಗ್ರತಪಸ್ಸುಮಾಡಿ ಶಿವನ ಪ್ರೀತಿಗೆ ಪಾತ್ರನಾದವ.ಅಂತಹ ಸತ್ ಕರ್ಮ ವ್ಯಕ್ತಿ ಸೀತೆಯನ್ನು ಅಪಹರಿಸಿದ. ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ಧರ್ಮ ಮಾರ್ಗ ದಲ್ಲಿ ನಡೆಯಬೇಕೆಂದು ಬುದ್ದಿಹೇಳಿದವರ ಮಾತು ನಿರ್ಲಕ್ಷಿಸಿ ಅವನತಿಯನ್ನು ಹೊಂದಿ ದನು. ಇದು ಮನಸ್ಸಿನ ಚಂಚಲತೆ, ನಾನು ನನ್ನಿಂದ ನನ್ನ ಮುಂದೆ ಬೇರಾರಿಲ್ಲ ಎಂಬ ದುರಹಂಕಾರ    ಮೈಗೂಡಿಸಿಕೊಂಡಿದ್ದಕ್ಕೆ  ಬೇಡವೆಂದರೂ  ಅನಾಹುತ   ತಪ್ಪಿಸಲಾಗ ಲಿಲ್ಲ.

ದೃಢಸಂಕಲ್ಪ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮೂರು ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.

1) ಮೊದಲು ತಾನು ಏನಾಬೇಕು?  
      
2) ಎನು ಮಾಡಬೇಕು?

3) ಏನು ಸಾಧಿಸಬೇಕು ಜೀವನದಲ್ಲಿ?

ಎಂಬುದನ್ನು ಮೊದಲು‌ ನಿರ್ಧರಿಸುವುದು ಬಹು ಮುಖ್ಯ.ಕಾರಣ ಏನೇ ಸಾಧಿಸುವ ಮೊದಲು ಮನಸ್ಸಿನ ನಿಯಂತ್ರಣ,ಎಕಾಗ್ರತೆ ಅತಿ ಮುಖ್ಯ. 
         

“ಚಂಚಲಂ ಹಿ ಮನಃ ಕೃಷ್ಣ ಪ್ರಮಾಥೆ ಫಲವತ್ ದೃಡಂ”                    

ಹಿರಿಯರು ಹೇಳಿದಂತೆ ಮನಸ್ಸೆಂಬುದು ಮರ್ಕಟವಯ್ಯ ಬಹಳಷ್ಟು ಮಕ್ಕಳಿಗೆ ಯಾವ ಗುರಿಯು ಇರದೇ ತಾನು ಏನಾಗ ಬೇಕೆಂದು ಕೇಳಿದಾಗ ಅಪ್ಪ ಅಮ್ಮ ಹೇಗೆ ಹೇಳುವರು ಅದನ್ನು ಕಲಿಯುವುದು.. ಎಂಬ ನಿರಸ ಪ್ರತಿಕ್ರಿಯೆ ನೀಡಿದಾಗ, ಸ್ವಂತ ನಿರ್ಧಾರಕ್ಕೆ ಬರದ ಮಕ್ಕಳುನಮ್ಮಮುಂದೆ.. ಅಚಲ   ನಿರ್ಧಾರಗಳನ್ನು  ಕೈಗೊಳ್ಳುವ ತಾಕತ್ತು ಇರದಿರುವುದಕ್ಕೆ ಮನಸ್ಸಿನ ಚಂಚ ಲತೆಯೇ ಮುಖ್ಯಕಾರಣ. ಹೊಯ್ದಾಟದ ಮನವನ್ನು ನಿಯಂತ್ರಿಸಿದ ಮೇಲೆ ಸಾಧನಾ ಸಿದ್ದಿ ಒಲಿಯಲು ಸಾಧ್ಯ.


ಒಮ್ಮೆ ಪ್ರಾನ್ಸ್ ದೇಶದ ಮಿಲಿಟರಿ ತರಬೇತಿ ಶಾಲೆಯಲ್ಲಿ ಒಬ್ಬ ಬಡತನದಲ್ಲಿ ಬೆಂದೆದ್ದ ಸಾಧಾರಣ ಎತ್ತರದ ಹುಡುಗ ಕಲಿಯುತ್ತಿದ್ದ. ಅಲ್ಲಿರುವ ವಿದ್ಯಾರ್ಥಿಗಳ ಹೋಲಿಸಿದರೆ ಈ ಹುಡುಗ ಸಣ್ಣವ. ಒಮ್ಮೆ ಆ ತರಬೇತಿ ಪರಿ ಶೀಲನೆಗೆ ಹಿರಿಯ ಅಧಿಕಾರಿ ಬಂದಿದ್ದರು. ಅವರು‌  ಪ್ರತಿಯೊಬ್ಬರನ್ನು  ಜೀವನದಲ್ಲಿ ಮುಂದೆ ಏನಾಗಬಯಸುವಿರೆಂದು ಪ್ರಶ್ನಿಸು ತ್ತಿದ್ದರು.ಒಬ್ಬೊಬ್ಬರುಲೆಫ್ಟಿನೆಂಟ, ಕ್ಯಾಪ್ಟನ್, ಮೇಜರ್….ಹೀಗೆ ಹೇಳುತ್ತಿದ್ದರು ಅಪ್ಪಿತಪ್ಪಿ ಯು ಸೇನಾಪತಿ ಆಗುತ್ತೇನೆ ಅಂತ ಒಬ್ಬರೂ ಹೇಳಲಿಲ್ಲ.ಹಾಗೆ ಮುಂದುವರೆದು ಈ ಸಣ್ಣ ಹುಡುಗ ನ ಹತ್ತಿರ ಬಂದು ನೀನು ಏನಾಗ ಬಯಸುತ್ತಿಯಾ ಅಂತ ಕೇಳಿದರು…      ಆಗ ಆ ಹುಡುಗ:
“ನಾನು ಯುರೋಪ್ ಖಂಡದ ಸಾಮ್ರಾಟನಾಗಬೇಕೆಂದಿದ್ದೇನೆ!” ಅಂದ.ಆಗ ಅಧಿಕಾರಿ ನೀ ಇರೋದೆ ಇಷ್ಟು ಕನಸು ಬೇರೆ ಕಾಣತಿಯಾ? ಆ ಹುಡುಗ ನಾನು ನಿರ್ಧಾರ ಮಾಡಿಯಾಗಿದೆ.ಇಂದಲ್ಲ ನಾಳೆ ಅದು ನಿಶ್ಚಿತವೆಂದು‌ ದೃಢಮನಸ್ಸಿಂದ ಹೇಳಿದ ಬಾಲಕ ಮತ್ಯಾರು‌ ಅಲ್ಲ…. “ನೆಪೋಲಿಯನ್ ಬೋನಾಪಾರ್ಟೆ” “ಅಸಾಧ್ಯ ಎಂಬುದು ನನ್ನ ಪದಕೋಶದಲ್ಲೇ ಇಲ್ಲ” ಎಂದು ಹೇಳಿ ಅದರಂತೆ ಬದುಕಿದ ಮಹಾನ್ ಸಾಧಕ. ಇದನ್ನು ಕೇಳಲು ಎಷ್ಟು ಚಂದ..!


ಇದು ನಮ್ಮ ಮಕ್ಕಳಿಗೆ ತಮಾಷೆಯೆನಿಸಬ ಹುದು.ಆದರೆ ಸಾಧಕರ ಪಟ್ಟಿಯಲ್ಲಿ ಅವರ ಜೀವನ ಕ್ರಮಗಳನ್ನು ಓದುವ  ತುಡಿತ ಮೊದಲು ಪಾಲಕರಿಗೆ ಬರಬೇಕು.ಕೇವಲ ಸೋಲನ್ನು ಕಾಣದವರ ಯಶೋಗಾಥೆ ಯನ್ನು ಮಾತ್ರವಲ್ಲ, ಸೋತು  ಗೆದ್ದವರ ಯಶೋಗಾಥೆಯನ್ನೂ ಮಕ್ಕಳಿಗೆ ಸ್ವಯಂ ಅಧ್ಯಯನಕ್ಕೆ ಕೊಡಬೇಕು. ರೆಡಿಮೇಡ್ ಊಟ ನೀಡಿದರೆ ಕಷ್ಟಪಡುವುದು ಅರಿವಾ ಗುವುದಿಲ್ಲ.  ರೈತನ ದುಡಿಮೆಯ  ಶ್ರಮ ನಿರರ್ಥಕವಾಗುತ್ತದೆ. ಅವನು ನಂಬಿರು ವುದು ಭೂಮಾತೆಯನ್ನು, ನೇಗಿಲನ್ನು.ತನ್ನ ತೋಳಲ್ಲಿರುವ ತಾಕತ್ತಿನಿಂದ ಉಳುವು ದನ್ನು,  ಆತ  ಶ್ರದ್ಧೆಯಿಂದ   ಕೃಷಿ ಕೆಲಸ ಮಾಡುವುದನ್ನು, ಬಿತ್ತಿ ಬೆಳೆಯುವುದನ್ನು ಪ್ರಾಯೋಗಿಕವಾಗಿ ಅನುಭವಿಸಿದವರಿಗೇ ಗೊತ್ತು ಒಂದು ಅನ್ನದ ಅಗುಳಿನ ಮಹತ್ವ.


ಒಂದು ಚಿಕ್ಕ ಗಾತ್ರದ ಪಕ್ಷಿ “ಗಾಡವಿಟ್ ಬರ್ಡ” ಇದುಅಲಾಸ್ಕದಿಂದ ಒಮ್ಮೆ ಹಾರಿತೆಂದರೆ ಸಾಗರಗಳನ್ನು ದಾಟಿ ಬರೋಬ್ಬರಿ ೧೧,೨೫೦/ ಸಾವಿರ ಕಿ.ಮೀ‌ ಎಲ್ಲಿಯೂ ಇಳಿಯದೇ ವಿಶ್ರಮಿಸದೇ ಆಹಾರ ಸೇವಿಸದೇ ತನ್ನ ಪುಟ್ಟದೇಹ ವನ್ನು ಪುಟ್ಟ ರೆಕ್ಕೆಪುಕ್ಕ ಹೊತ್ತು ಸಾಗರದ ಮೇಲೆ ಉಂಟಾಗುವ ವಾತಾವರಣದ ವಿರೋಧಗಳನ್ನುಎದುರಿಸಿ ಎದೆಗುಂದದೆ ನ್ಯೂಜಿಲೆಂಡ್ ‘ ಗೆ ಬಂದು ತಲುಪುತ್ತದೆ.


ಅದರ    ಮನೋಬಲ, ಇಚ್ಚಾಶಕ್ತಿ, ದೃಢ    ಸಂಕಲ್ಪ ಇವೆಲ್ಲ ಆ ಪುಟ್ಟ ಹಕ್ಕಿಯಲ್ಲಿವೆ ಎಂದಮೇಲೆ, ನಮಗೇನಾಗಿದೆ?   ನಮ್ಮ ಯೋಚನೆಗೂ ಆಲೋಚನೆಗೂ,ನಾವು ಮಾಡುವ ಕಾರ್ಯಕ್ಕೂ ಒಂದಕ್ಕೊಂದು ಸಂಬಂಧವಿಲ್ಲದಂತೆ ಬದುಕ ಹೆಣೆದು,  ಅದರ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದೇವೆ..

ಸಾಧನೆಗೆ ನೂರು ವಿಘ್ನ.ಆ ನೂರು ವಿಘ್ನ ಗಳನ್ನು ದಾಟಿ ಬದುಕು ಕಟ್ಟುವ ಸಾಮರ್ಥ್ಯ ಇರುವವರು ಮಾತ್ರ ಸಾಧಿ ಸಲು ಸಾಧ್ಯ. ಮಗುವಲ್ಲಿ ಆತ್ಮ ವಿಶ್ವಾಸ,ನಂಬಿಕೆ, ಏಕಾಗ್ರ ತೆಯ ಬಗ್ಗೆ ಹೆಚ್ಚಿಸುವುದತ ಬಗ್ಗೆ ಚಿಂತಿಸು ವುದು ಅನಿವಾರ್ಯ. ಎಲ್ಲದ್ದಕ್ಕೂಮೊಬೈಲ್ ಅನಿವಾರ್ಯವಲ್ಲ, ಪರಿಹಾರವು ಅಲ್ಲ. ಮಗುವನ್ನು ಸುಮ್ಮನಿರಿಸಲು ಮೊಬೈಲ್ ಕೊಟ್ಟು ಸುಮ್ಮನಿರಿಸುವ ಪಾಲಕರು ಸಾಕಷ್ಟಿದ್ದಾರೆ.

ಪ್ರತಿಮಗು ದೈಹಿಕವಾಗಿ,ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಬಲಾಡ್ಯ ರನ್ನಾಗಿ ಮಾಡುವ ನಿಟ್ಟಿನಲ್ಲಿ ಮೊದಲು ಪಾಲಕರು ಸಿದ್ದವಾಗಬೇಕು. ಮಗು ಅನು ಸರಿಸುವ  ವಾತಾವರಣ  ಮನೆಯಲ್ಲಿ ನಿರ್ಮಾಣ  ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಮೋಡಗಳಿಗೆ ಎಲ್ಲಿ‌ ತಂಪು ತಗುಲುವುದೋ ಅಲ್ಲಿ ಮಳೆಯಾಗು ವಂತೆ. ಸಮಾಜಕ್ಕೆ  ಎಂತಹ  ಪ್ರಜೆಬೇಕು ಎಂಬುದನ್ನು ಮೊದಲು ಮನೆ‌‌ಯಿಂದಲೇ  ನಿರ್ಧರಿಸುವಂತಾದರೆ ಸಮಾಜ ಪರಿವರ್ತನೆ ಯಾಗಲು ಪ್ರಾರಂಭಿಸಿದಂತೆ…

✍️ಶ್ರೀಮತಿ.ಶಿವಲೀಲಾ ಹುಣಸಗಿ        ಶಿಕ್ಷಕಿ,ಯಲ್ಲಾಪೂರ ಜಿ:ಉ.ಕನ್ನಡ