ಮುಖ ಗಂಟಿಕ್ಕಿ ನಡೆವ ಜನರೇ
ಒಮ್ಮೆ ನಕ್ಕು ಬಿಡಿ
ನಿಮ್ಮ ನಗುವಿನಿಂದ
ನಮ್ಮ ಹಸಿವು ತಣ್ಣಗಾಗದಿರಬಹುದು
ಮನ ಹಿಗ್ಗಿ ಶಾಂತವಾಗುವದು.

ನಿಮ್ಮ ನಗುವಿನಿಂದ
ಬರದ ನಾಡಲ್ಲಿ
ಮಳೆ ಸುರಿಯದೇ ಇರಬಹುದು
ಈ ನೆಲ ಕ್ಷಣವಾದರೂ ತಂಪಾಗಬಹುದು.

ನಿಮ್ಮ ನಗುವಿನಿಂದ ಮುಗಿಯದೇ ಇರಬಹುದು
ನಡೆಯುವ ಯುದ್ಧಗಳು
ಆದರೆ
ಬಂದೂಕಿನ ತುಪಾಕಿಗಳು
ಕ್ಷಣವಾದರೂ ಸ್ಥಬ್ಧವಾಗಬಹುದು.

ನಮ್ಮ ಅಸಹಾಯಕ ನಗುವಿಗೆ
ನಿಮ್ಮ ದುರ್ಬಲ ಕ್ಷಣವು
ನಂದಿ ಹೋಗುವ ಮುಂಚೆ ಹೊತ್ತಿಸಿರಿ ನಿಮ್ಮೆದೆಯ ಗೂಡಲ್ಲಿ
ನಗುವಿನ ಹಣತೆ ………

(ವಿಶ್ವ ನಗುವಿನ ದಿನದ ನಿಮಿತ್ತ ಈ ಕವನ)

            🔆🔆🔆

✍️ ಪ್ರಕಾಶ ಕಡಮೆ, ನಾಗಸುಧೆ ಹುಬ್ಬಳ್ಳಿ