ಕೆಲವು ಸಂಗತಿಗಳು ಮನದಿಂದ ಮರೆಯಾ ಗುವದೇ ಇಲ್ಲ. ನನ್ನ ದೇಶ ವಿದೇಶಗಳ ಸುತ್ತಾಟದಲ್ಲಿ ಇಂತಹ ಕೆಲವು ಘಟನೆಗಳು ಮನದಲ್ಲಿ ಅಚ್ಚೊತ್ತಿವೆ. ಈ ಅಂಕಣದ ಮೂಲಕ ನನ್ನ ಪ್ರವಾಸದ ಪ್ರವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ದುರಿತಕಾಲದ ಬಂಧಿಯಾಗಿರುವ ನಮ್ಮ ಮನ ಸ್ವಲ್ಪವಾದರೂ ಹಗುರಗೊಳ್ಳಲಿ ಎಂಬ ಆಶಯವಲ್ಲದೇ ಬೇರೇನೂ ಇಲ್ಲ. ಹಾಗೆಯೇಇವನ್ನೆಲ್ಲ ನೈತಿಕ ಪೋಲಿಸ್ ಆಗಿ ನೋಡುವ ಅಗತ್ಯವಂತೂ ಇಲ್ಲ ಅಂದುಕೊಂಡಿದ್ದೇನೆ. ಈ ಬರಹಗಳನ್ನು ಬೆನ್ನುಹತ್ತಿ ಬರೆಸುತ್ತಿರುವ ತಾಯಿಕರುಳಿನ ಗುರುಸಮಾನ ಶ್ರೀಪ್ರಕಾಶ ಕಡಮೆ ಮತ್ತು ಶ್ರಾವಣದ ರೂವಾರಿ, ಲವಲವಿಕೆಯ ಶ್ರೀರವಿಶಂಕರ್ ಅವರಿಗೆ ನನ್ನ ಅನಂತ ನಮನ.
ನನ್ನ ಮೊದಲ ಜರ್ಮನಿಯಾತ್ರೆ ಕೇವಲ ಜರ್ಮನಿಯ ಅತಿದೊಡ್ಡ ರಾಜ್ಯವಾದ ಬವೇರಿಯಕ್ಕೆ ಮಾತ್ರ ಸೀಮಿತವಾಗಿತ್ತು. ಬವೇರಿಯದ ವಿಶಿಷ್ಟ ಆಚರಣೆಗಳು, ಹಬ್ಬ ಹರಿದಿನಗಳು,ವಿಹಂಗಮ ಪ್ರಕೃತಿ, ಮೋಹಕ ಕ್ಯಾಸಲ್ ಗಳು ಅದಕ್ಕೊಂದು ಜನಪ್ರಿಯತೆ, ಟೂರಿಸಂ ವ್ಯಾಲ್ಯೂ ತಂದುಕೊಡುತ್ತವೆ. ಮ್ಯುನಿಕ್ ನ ವಿಶ್ವವಿಖ್ಯಾತ ಅಕ್ಟೊಬರ್ ಫೆಸ್ಟ ಎನ್ನುವ ಬಿಯರ್ ಹಬ್ಬದಿಂದ ಹಿಡಿದು ಈ ರಾಜ್ಯದ ಪ್ರತಿಯೊಂದು ಪಟ್ಟಣ ವೂ ತನ್ನದೇ ಆದ ಜಾನಪದ ಆಚರಣೆಗ ಳನ್ನು ವರ್ಷಪೂರ್ತಿ ಮಾಡುತ್ತದೆ.
ಭಾಷೆ ಬರದ, ಚರಿತ್ರೆ ಗೊತ್ತಿರದ ಅಪರಿಚಿತ ಜಾಗಗಳಲ್ಲಿನೆಟ್ಟಗೆಇಂಗ್ಲಿಷ್ ಮಾತನಾಡುವ ವ ಸ್ಥಳೀಯ ಗೆಳತಿಯೊಬ್ಬಳು ಜತೆಗೂಡಿ ದರೆ ನನ್ನಂತ ತಿರುಗಾಲ ತಿಪ್ಪಿಯರ ಜನ್ಮವೇ ಪಾವನವಾಗಿಬಿಡುತ್ತದೆ.ಆಸಲದ ತಿರುಗಾಟ ಬವೇರಿಯದ ಸಮಗ್ರ ದರ್ಶನ ಮಾಡಿಸಿದ್ದ ಲ್ಲದೇ ಗ್ಲೊರಿಯಾಳನ್ನು ಜೀವದ ಗೆಳತಿ ಯನ್ನಾಗಿ ಕಾಣಿಕೆಯಾಗಿ ಕೊಟ್ಟಿತು. ನನ್ನ ಗ್ಲೊರಿಯ ಗೆಳೆತನದ ಕತೆಯನ್ನು ಇನ್ನೊಮ್ಮೆ ಕೇಳೋಣವಂತೆ. ಈಗ ಅಸಲು ನಾನು ಹೇಳಹೊರಟಿದ್ದು ಮ್ಯೂನಿಕ್ ನ ಟೌನ್ ಹಾಲ್ ಹತ್ತಿರ ಇರುವ ಜ್ಯೂಲಿಯೆಟ್ ಪ್ರತಿಮೆಯ ಬಗ್ಗೆ.‘ಸಾಯ್ದೆ ಇದ್ರೆ ಸಾವಿರ ಚೋದ್ಯ ನೋಡು!’ ಎನ್ನುವದು ನನ್ನಮ್ಮ ನ ಫೇವ್ರಿಟ್ ಗಾದೆ. ಇದು ಥೇಟ್ ಅದರ ವಿಸ್ತರಣೆ!
ಅಂದು ಮ್ಯುನಿಕನಲ್ಲಿ ನನ್ನ ಎರಡನೇ ದಿನ. ಮೊದಲ ದಿನ ಗ್ಲೊರಿಯಾ ನನ್ನನ್ನು ಅಲ್ಲಿನ ಬಿಯರ್ಗಾರ್ಟನ್ ( ಸುಂದರ ಪ್ರಕೃತಿಯ ನಡುವೆ ಬಿಯರ್ ಕುಡಿಯಲು ಮಾಡಿ ಕೊಂಡ ವ್ಯವಸ್ಥೆ) ನಲ್ಲಿ ವಿಹಾರ ಮಾಡಿಸಿ ದ್ದಳು. ಅಂದಹಾಗೆ ಬೇಸಿಗೆಯ ಬಿಯರ್ ಗಾರ್ಡನ್ ಕಟಗುಡುವಚಳಿಯಲ್ಲಿ ಬಿಯರ್ ಹಾಲ್ ಆಗಿ ಒಳಾಂಗಣಕ್ಕೆ ಶಿಪ್ಟ್ ಆಗುತ್ತದೆ.
‘ಇಂದು ಮ್ಯುನಿಕ್ ಸಿಟಿವಾಕ್ ಮಾಡೋಣ ಡಿಯರ್’ ಎಂದುತನ್ನ heavilyGerman accented ಇಂಗ್ಲಿಷ್ ನಲ್ಲಿ ಉಲಿದಳು.
ಬವೇರಿಯಾದ ರಾಜಧಾನಿ ಮ್ಯುನಿಕ್ ಎಷ್ಟೇ ಸುಂದರವಾಗಿ ಮುಗ್ಧತೆಯ ಮಖವಾಡ ಹಾಕಿ ರಾರಾಜಿಸಿದರೂ ಅದು ಒಂದು ಕಾಲದಲ್ಲಿ ಹಿಟ್ಲರನ ನಾಝಿ ಅಮಾನುಷತೆಯ ಕೇಂದ್ರಸ್ಥಳ ಎಂಬುದು ನನ್ನ ಮನದಲ್ಲಿ ಹೊಗೆಯಾಡು ತ್ತಲೇ ಇತ್ತು.
ನಾ ನೋಡಿದಂತೆ ಯಾವುದೇ ಯುರೋಪಿ ಯನ್ ಸಿಟಿ ಎಂದರೆ…… ಕೊಬಲ್ ಸ್ಟೊನ್ಡ ಪೇವ್ ಮೆಂಟುಗಳು, ಇಕ್ಕಟ್ಟಾದ ಗಲ್ಲಿಗಳು, ನಗರದ ಮಧ್ಯೆ ಹರಿಯುವ ಸ್ವಚ್ಛವಾದ ನದಿ ಕಾಲುವೆಗಳು, ನೂರಾರು ವರುಷಗಳ ಇತಿಹಾಸ ಸಾರುವ ಜೋಪಾನವಾಗಿ ಕಾಪಿಟ್ಟುಕೊಂಡಿರುವ ಕಟ್ಟಡಗಳು, ಅವಶೇಷಗಳು ಮ್ಯೂಸಿಯಮ್ ಗಳು, ಒಂದೆರಡು ಸುಂದರ ಸ್ಕ್ವೇರ್ ಗಳು, ಅಮೃತ ಶಿಲೆಯ,ಹಿತ್ತಾಳೆಯ ಪ್ರತಿಮೆಗಳು, ರಸ್ತೆ ಬದಿಯ ಕೆಫೆಗಳು, ನೀಟಾದ ಮಾರ್ಕೆಟ್ ಗಳು, ಪ್ರಸಿದ್ಧ ಶಾಪಿಂಗ್ ಸ್ಟ್ರೀಟ್ ಗಳು, ಸುಮಾರಾಗಿ ಕಾಲ್ನಡಿಗೆ ಯಲ್ಲೇಸುತ್ತಿ ಮುಗಿಸಬಹುದಾದವಿಸ್ತೀರ್ಣ, ಎಲ್ಲಕ್ಕಿಂತ ಮಿಗಿ ಲಾಗಿ ಪರಮ ಅನಿಶ್ಚಿತ ಹವಾಮಾನ – ಇವೆಲ್ಲವುಗಳ ಹದವಾದ ಸಂಗಮ. ಮ್ಯೂನಿಕ್ ಕೂಡ ಹೊರತಲ್ಲ.
ಓರ್ವ ಅಪ್ಪಟ ಜರ್ಮನ್ ಮಹಿಳೆಯ ಪಾಂಡಿತ್ಯಪೂರ್ಣ ವಿವರಣೆಯ ಸೊಗಸು ನನ್ನ ಮ್ಯೂನಿಕ್ ನ ತಿರುಗಾಟದಮಜವನ್ನು ದ್ವಿಗುಣಗೊಳಿಸಿತು.ಹಾಗಯೇ ಓಡಾಡುತ್ತ ಸಿಟಿ ಸೆಂಟರ್ ನ ಒಂದು ಸಾಧಾರಣವಾಗಿ ಕಾಣುತ್ತಲಿದ್ದ ಒಂದು ಕಂಚಿನ ಪ್ರತಿಮೆಯ ಮುಂದೆ ನನ್ನ ಹಿಡಿದು ನಿಲ್ಲಿಸಿದಳು.ಆಗಲೇ ಸುಮಾರು ಜನರು ಸರದಿಯಲ್ಲಿ ಅದರ ಮುಂದೆ ಜಮಾಯಿಸಿದ್ದರು. ನನ್ನ ಪ್ರಶ್ನಾ ರ್ಥಕ ಚಿಹ್ನೆಗೆ ಸುಮ್ಮನೆ ಮುಂದೆ ನೋಡು ವಂತೆ ಸನ್ನೆ ಮಾಡಿದಳು.
ಲಕ್ಷಗೊಟ್ಟು ನೋಡಲಾಗಿ ಅದೊಂದು ತೆಳ್ಳನೆ ಗೌನ್ ಧರಿಸಿದ, ಸುಂದರ ಯುವತಿ ಯ ಪುತ್ಥಳಿ! ಗಂಡು ಹೆಣ್ಣು ಎನ್ನದೇ ಒಬ್ಬಬ್ಬರೇ ಅದರ ಬಳಿ ಸಾರಿ ಪ್ರತಿಮೆಯ ಎದೆಯ ಮೇಲೆ ಕೈ ಇಟ್ಟು ಏನೋ ಮಣ ಮಣ ಅನ್ನುತ್ತಿದ್ದಾರೆ….ಹಾಗೆಯೇ ಫೋಟೋಕ್ಕೆ ಪೋಸು ಬೇರೆ..! What’s wrong with these Germans? ಮಹಾಸಭ್ಯತನದ ಮುಖವಾಡ ತೊಟ್ಟು third world countries ಬಗ್ಗೆ ಅಲ್ಲಿನ ಜನರ ಅಂಧಾನುಕರಣೆಗಳ ಬಗ್ಗೆ, ಅಸಮಾ ನತೆಯ ಕುರಿತು ನಾಜೂಕಾಗಿ ಅವಹೇಳನೆ ಮಾಡುವವರು ಇದ್ಯಾಕೆ ಇಲ್ಲಿ ಹೀಗೆ.. ?ನನ್ನ ಮನಸ್ಸಿನ ಕಸಿವಿಸಿ ಮರೆಮಾಚಲಾಗಲಿಲ್ಲ. ಜಗತ್ತಿನ ಯಾವ ಮೂಲೆಗೋದರೂ ಹೆಣ್ಣಿನ ಸಮಾನಾರ್ಥಕ ಪದಗಳು ಬದಲಾಗುವದಿಲ್ಲ…ಶೋಷಣೆ, ಭೋಗದ ವಸ್ತು, ಸುಖ ಕೊಡುವ ಸಾಧನ, ಲಘು ಮನರಂಜನೆ…etc..etc…
What is going on here… why does everyone touch her breast?
‘ಈಪ್ರತಿಮೆ ಇಟಲಿಯ ವೆರೋನಾದಿಂದ ಕೊಡುಗೆಯಾಗಿ ಬಂದಿದ್ದು.ಇವ ಳು ಸಾಕ್ಷಾತ್ ರೋಮಿಯೋ ಜೂಲಿಯೆಟ್ ನ ಜೂಲಿಯೆಟ್ .. ಪೂರ್ಣ ಹೆಸರು ಜೂಲಿಯೆಟ್ ಕ್ಯಾಪುಲೆಟ್ ‘ಮತ್ತೆ ಇವಳ ಎದೆ ಮುಟ್ಟಿ ಪ್ರಾರ್ಥಿಸಿದರೆ ಗುಡ್ ಲಕ್ ಬರುತ್ತೆ.. ಎಂಬ ಪ್ರತೀತೀ..’, ಎಂದು ಗ್ಲೋರಿಯಾ ಹೇಳುತ್ತಿದ್ದರೆ ನಾನು ‘ವಾವ್, ಈ ಯುರೋಪಿಯನ್ನರ ಕುರುಡು ನಂಬಿಕೆಗಳಿಗೆ ಕೊನೆಯೇ ಇಲ್ಲ’ ಎಂದು ಕೊಳ್ಳುತ್ತಿರುವಾಗಲೇ ನನ್ನ ಜರ್ಮನ್ ಗೆಳತಿ ನನ್ನಕೈಯೆಳೆದು ಜ್ಯೂಲಿಯೆಟ್ ನ ಮೇಲಿಟ್ಟು ಫೋಟೋ ಕ್ಲಿಕ್ಕಿಸಿದಳು! ಜ್ಯೂಲಿಯೆಟ್ಟಳ ಸವೆದು ಹೋದ ಎದೆಗೆ ನನ್ನ ಕೊಡುಗೆಯೂ ಸಂದಿತು!
ಮುಂದಿನ ಸಲ ಇನ್ನೊಂದು ದೇಶ; ಇನ್ನೊಂದು ಕತೆ…
🔆🔆🔆
✍️ ಸುಚಿತ್ರ ಹೆಗಡೆ, ಮೈಸೂರು
ತುಂಬ ಸುಂದರ ಬರಹ ಮತ್ತು ಶೈಲಿ. ಎಲ್ಲಕ್ಕಿಂತ ಭಿನ್ನ ಪ್ರವಾಸ ಕಥನ. ಇನ್ನಷ್ಟು ಓದಲು ಪ್ರೇರೇಪಿಸುತ್ತಿದೆ. ಥ್ಯಾಂಕ್ಯೂ ಸರ್
LikeLiked by 1 person