ಬುವಿ ಬಯಲಲಿ ಸಾರ್ಥವಾಗಿ
ಹೇಗೆ ಬದುಕಬೇಕು ಎಂದು
ಕೇಳಿ ತಿಳಿಯುವುದು ಶೋಧನೆ.!
ಹೇಗೆ ಬದುಕಬೇಕು ಎಂದು
ತಿಳಿದು ಹೇಳುವುದು ಬೋಧನೆ.!
ಹೇಗೆ ಬದುಕಬೇಕು ಎಂದು
ಬದುಕಿ ತೋರುವುದು ಸಾಧನೆ.!

ಹುಡುಕಿ ನೋಡಿ ಮನೆಗೊಬ್ಬರು
ಶೋಧಕರು ಸಿಕ್ಕೇ ಸಿಗುತ್ತಾರೆ.!
ತಡಕಿ ನೋಡಿ ಬೀದಿಗೊಬ್ಬರು
ಬೋಧಕರು ಇದ್ದೇ ಇರುತ್ತಾರೆ.!
ಅದೆಷ್ಟು ಹುಡುಕಿ ತಡಕಿದರೂ
ಊರಿಗೇ ಊರೇ ಸುತ್ತಿದರೂ
ಬಬ್ಬರಾದರು ಸಾಧಕರು ಸಿಗುವರೆ,?

ಸುಖಾಸುಮ್ಮನೆ ಶೋಧನೆಯಲ್ಲೇ
ಕಾಲಕಳೆವ ಪೊಳ್ಳು ಶೋಧಕರಿಂದ
ಕಪೋಕಲ್ಪಿತ ಬೋಧನೆಯಲ್ಲೇ
ಮುಳುಗಿಹ ಹುಸಿ ಬೋಧಕರಿಂದ
ನಲುಗುತ್ತಾ ನರಳುತ್ತಿದೆ ಬದುಕು
ಕಾಣುತ್ತಿಲ್ಲ ನಡೆನುಡಿಯೊಂದಾಗಿಸಿ
ದಾರಿ ತೋರುವ ಸಾಧಕರ ಬೆಳಕು.!

‌‌‌‌‌‌ 🔆🔆🔆

✍️ಎ.ಎನ್.ರಮೇಶ್. ಗುಬ್ಬಿ.