ನಲುಮೆಯ ನಸು ನಗು ಜಾರುತಿದೆ
ನಲ್ಲೆಯ ಮೊಗದಲಿ ಮೆಲ್ಲ ಮೆಲ್ಲನೆ
ಝರಿಯಂತೆ ಜುಳುಜುಳು ಮಂಜುಳ ವದನೆ
ಅರಿವಿಲ್ಲದ ಮನ ಝರಿಯೊಂದಿಗೆ ಹರಿಯುತಿದೆ

ಹೂ ಬಾಣದ ಕಣ್ಣೋಟ ಸೆಳೆಯುತಿದೆ
ಕ್ಷಣ ಕ್ಷಣಕೂ ತನುಮನವ ಕೆರಳಿಸುತಿದೆ
ಸೊಲ್ಲು ಸೊಲ್ಲಿಗೂ ತಿರುಗಿ ನೋಡುತಿದೆ
ಮನವು ಹೃದಯದ ಹಿಡಿತದಿ ಜಾರುತಿದೆ

ಪಟ ಪಟನೆ ಅರಳು ಹುರಿದಂತೆ
ಮಾತಿನ ತೋರಣದಲಿ ಮಂದಸ್ಮಿತ
ನಸು ನಗುವಿನ ಬಾಣದ ತೀಕ್ಷ್ಣತೆಗೆ
ಹೃದಯ ವಿಲವಿಲನೇ ತಳಮಳಿಸುತಿದೆ

ದುಂಡು ಮಲ್ಲಿಗೆಯ ಮೊಗ್ಗಿನಂತೆ
ಹದವಾದ ಘಮಘಮ ಪರಿಮಳದಂತೆ ಪ್ರೇಮವೆಂಬ ಎರಡಕ್ಷರವು ಬೆಸೆದಿದೆ ಹೃದಯಗಳೆರಡನು ಒಂದಾಗಿಸಿದೆ

😀ವಿಶ್ವ ನಗುವ ದಿನದ ಶುಭಾಶಯ ಗಳೊಂದಿಗೆ..ನನ್ನ ನುಡಿನಮನ😀

🔆🔆🔆

✍️ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ