ನಗುವೆಂಬ ಆಭರಣ ಬಳಸಲಿ ಒಲವೆಂಬ ಆವರಣದಿ ನುಸುಳದಿರಲಿ ದ್ವೇಷದ ಹೊಗೆಯು ದುರುಳ ತನಕೆ ಕಿಚ್ಚು ಹಚ್ಚುತ.
ಮರುಳ ಮಾನವನೆದೆಗೆ ಮೋಡಿ ಮಾಡುತ ಕರುಣೆ ಕೋಡಿ ಹರಿಸಿ ಸೈರಣೆಯ ಉಡುಗೊರೆ ನೀಡುತ ಮುಂದಡಿಗೆ ಪ್ರೆರಣೆಯಾಗುತ.
ಬಿರುಕಿನ ಗೋಡೆಗೆ ಗಾರೆ ಮಂಕು ಕವಿದ ಬುದ್ದಿಗೆ ಸವರಿ ಪರಿಚಯಿಸುವ ರಹದಾರಿ ಮುಗುಳು ನಗೆಯೆಂಬ ಸಂಚಾರಿ.
ಸಂತೈಸಿ ಬಿಡೊಮ್ಮೆ ಭ್ರಾಂತಿಯ ತಳ್ಳಿ ಕ್ರಾಂತಿಗೂ ಹುಚ್ಚು ಹಿಡಿಸಿ ನಸುನಗೆಯ ಬೆಳಕು ಚೆಲ್ಲಿ.
ಅಭೇದ್ಯ ಉದಿಯಿಸಿ ದೇವನೊಲಿಸುವ ನೈವೇದ್ಯ ಕಮರಿದ ಬಳ್ಳಿಯ ಚಿಗುರು ನವಿರು ಚಾಮರದಂತೆ ಬೀಸುವ.
🔆🔆🔆
✍️ ರೇಷ್ಮಾ ಕಂದಕೂರ, ಸಿಂಧನೂರ