ನಗು  ಎಲ್ಲಾ ಸಮಸ್ಯೆಗಳ ಪರಿಹಾರದ ಕೀಲಿ ಕೈ, ಆದ್ದರಿಂದ ಸುಮ್ಮನೆ ನಕ್ಕು ಬಿಡಿ.
ಇತ್ತೀಚೆಗೆ ನಗಿಸುವುದಕ್ಕಾಗಿ ಹಾಸ್ಯ ಕಾರ್ಯ ಕ್ರಮಗಳಷ್ಟೇ ಅಲ್ಲದೆ ತರಗತಿಗಳನ್ನೂ ಕೂಡ ನಡೆಸಲಾಗುತ್ತಿದೆ. ಕಾರಣ ನಮ್ಮ ಒತ್ತಡದ ಬದುಕಿನಲ್ಲಿ ಸಹಜನಗು ಮಾಯವಾಗಿ ಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ನನ್ನು ಒತ್ತಡದಿಂದ, ಖಿನ್ನತೆಯಿಂದ ಹೊ‌ರ ತರಲು ನಗು ಬಹಳ ಮುಖ್ಯವಾದ ಸಾಧನ ವಾಗಿದೆ. ಆದರೆ ಇತ್ತೀಚೆಗೆ ಮಾತ್ರ ಇದು ದುಬಾರಿಯೂ ಆಗಿಬಿಟ್ಟಿದೆ. ಆದ್ದರಿಂದ ನಗುವುದನ್ನು ಎಲ್ಲರಿಗೂ ನೆನಪುಮಾಡಲು ಮತ್ತು ಎಲ್ಲರ ಮಾನಸಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಗೆ   ದಿನವನ್ನು ಆರಂಭಿಸಲಾಯಿತು.     ಎಲ್ಲರೂ  ವಿಶ್ವದಾದ್ಯಂತ ಇಂದು ನಕ್ಕು ನಲಿಯುತ್ತಾರೆ.ಇತ್ತೀಚೆಗಂತೂ ಯೋಗ ತರಗತಿಗಳಲ್ಲಿ ಈ ಇದನ್ನು ಒಂದು ಆಸನವೆಂದೇ ಪರಿಗಣಿಸಿ ಎಲ್ಲರೂ ಮನೆಗೆ ಹೋಗುವಾಗ ನಕ್ಕು ನಲಿದು ಹೋಗುವುದು ವಾಡಿಕೆಯಾಗಿ ಬಿಟ್ಟಿದೆ.ಮೇ ತಿಂಗಳ ಮೊದಲ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.    ಇಂದಾದರೂ ಎಲ್ಲಾ ಒತ್ತಡಗಳನ್ನು ನಾವು ಪಕ್ಕ ಕ್ಕಿಟ್ಟು ಮನ:ಪೂರ್ವಕವಾಗಿ ಇಡೀ ದಿನ ನಗುನಗುತ್ತಾ   ಇದ್ದು  ಬಿಡೋಣ.  ಹೌದು ನಮಗೆ ನೊಂದುಕೊಳ್ಳಲು, ಸಂಕಟ ಪಡಲು,  ‌‌ಗೋಳಾಡಲು,   ಕಣ್ಣೀರು ಸುರಿಸಲು, ಬೇಸರಿಸಿಕೊಳ್ಳಲು ಹಲವಾರು ಕಾರಣ ಗಳುಂಟು, ಆದರೆ ನಗುವುದಕ್ಕೆ ಮಾತ್ರ ನಮಗೆ ಕಾರಣಸಿಗುವುದಿಲ್ಲ ಎಂದಾದರೆ ಖಂಡಿತಾ ನಮ್ಮ  ಬದುಕು    ನಕಾರಾತ್ಮಕ ವಾಗಿದೆ  ಎಂದು ಅರ್ಥ. ಇರುವ ಒಂದೇ ಒಂದು ಬದುಕನ್ನು ನಾವ್ಯಾಕೆ ನಕಾರಾತ್ಮಕವಾಗಿ ಕಳೆಯಬೇಕು? ಹೀಗೆ ಮಾಡದೆ ಬೇಕಾದ್ದು ಆಗಲಿ  ಬಿಡು  ನಾನು ಈ ಕ್ಷಣ ಆನಂದವಾಗಿರುತ್ತೇನೆ ಎಂದು ನಿರ್ಧರಿಸಿ ಬಿಡಿ. ಹೌದು ಆಧುನಿಕ ಜಗತ್ತು ಬರೀ ಸ್ಪರ್ಧೆಗಳಿಂದ ಕೂಡಿದೆ. ನಗು ತಾನಾಗಿಯೇ ನಮ್ಮ ಬಳಿ ಬರದೆ ಅದನ್ನೇ ನಾವು ಹುಡುಕಿ ಕೊಂಡು  ಹೋಗಬೇಕಾದ ಪರಿಸ್ಥಿತಿ ಈಗ ತಲೆದೋರಿದೆ.  ಇಂತಹ ಪರಸ್ಥಿತಿಯಲ್ಲಿ ನಾವು ಅಯ್ಯೋ ಎಂದು ಕುಸಿದು ಕುಳಿತು ಕೊಳ್ಳದೆ ಎದುರಾಗುವ ಸಮಸ್ಯೆಗಳನ್ನೆಲ್ಲಾ ಸಾರಾಸಗಟಾಗಿ ತಳ್ಳಿ ಕೊಂಡು ನಕ್ಕು ಬಿಡೋಣ. ಈ ನಗುವಿಕೆ ಯಿಂದ ಎಂತಹ ದೊಡ್ಡ ಸಮಸ್ಯೆಗಳೂ ಚಿಕ್ಕವಾಗಿಕಾಣುತ್ತವೆ. ಮತ್ತು ಎಲ್ಲಾ ಕೆಲಸಗಳೂ ನಮಗೆ ಅರಿವಿಲ್ಲದಂತೆ ತನ್ನಿಂತಾನೆ ಸುಲಭವಾಗಿಬಿಡುತ್ತವೆ. ಬದುಕು ತುಂಬಾ ಸರಳವಾಗಿ ಪರಿಣಮಿಸು ತ್ತದೆ. ಆದ್ದರಿಂದ ಪುಟ್ಟ ಬದುಕಿನಲ್ಲಿ ಹೆಚ್ಚು ಹೆಚ್ಚು ನಗೋಣ,  ನಗುತ್ತಲೇ ಇರೋಣ.


ನಗುಕೂಡ ಒಂದುರೀತಿ ಸಾಂಕ್ರಾಮಿಕ ರೋಗವಿದ್ದಂತೆ,ಒಬ್ಬರು ನಕ್ಕರೆ ಸಾಕು ಎಲ್ಲರೂ ನಗಲು ಶುರುಮಾಡುತ್ತಾರೆ. ಇಂದು ವಿಶ್ವ ನಗುವಿನ ದಿನ, ಎಲ್ಲರೂ ಮನ ಬಿಚ್ಚಿ ನಕ್ಕು ಬಿಡಿ. ಕುಟುಂಬದಲ್ಲೂ ಕೂಡ ಅಷ್ಟೆ ಒಬ್ಬರು ನಗುತ್ತಿದ್ದರೆ ಎಲ್ಲರೂ ನಗಲು ಶುರು ಮಾಡುತ್ತಾರೆ.  ಆದ್ದರಿಂದ  ನಾವು  ಎಷ್ಟೇ ಕಷ್ಟಗಳು ಬಂದರೂ ಅವುಡುಗಚ್ಚಿ ಸಹಿಸಿಕೊಂಡು ನಕ್ಕು ಬಿಡೋಣ. ಎಲ್ಲಾ ಸಮಸ್ಯೆಗಳಿಗೂ ನಗು ಅತ್ಯುತ್ತಮ ಔಷಧ ವಾಗಿದೆ.  ನಾವು   ಸಂತೋಷವಾಗಿದ್ದಾಗ ಮಾತ್ರ ನಮ್ಮ ಶರೀರವೂ ಅತ್ಯಮೋಘ ರೀತಿಯಲ್ಲಿ ಕೆಲಸ ಮಾಡುತ್ತದೆ.ಅದೆಂತ ಹುದೆ ಬೇಜಾರು ನಮಗೆ ಆಗಿರಲಿ, ಒಂದು ನಗು ಎಲ್ಲವನ್ನೂ ದೂರ ಮಾಡಿ ಬಿಡುತ್ತದೆ. ನಗುವಿನಲ್ಲಿ ಸಕಾರಾತ್ಮಕ ಶಕ್ತಿ ಇದೆ ಎನ್ನುವುದು ಅಕ್ಷರಶಃ ಸತ್ಯ.


ಮೊದಲಬಾರಿಗೆ ವಿಶ್ವ ನಗುದಿನವನ್ನು 1998ರ ಜನವರಿ10ರಂದು ಮುಂಬೈ ಯಲ್ಲಿ ಆಚರಿಸಲಾಯಿತು.           ಇದನ್ನು ಮೊದಲ ಬಾರಿಗೆ ಆರಂಭಿಸಿದವರು  ಡಾ.ಮದನ್ ಕಟಾರಿಯ ಎಂಬುವವರು. ವಿಶ್ವ ನಗುಯೋಗ ಅಭಿಯಾನದ ಸಂಸ್ಥಾಪಕರಾದ  ಇವರು   ನಗುವಿಗಿರುವ  ಅನನ್ಯ   ಶಕ್ತಿಯನ್ನು   ಗಮನಿಸಿ  ಇಂತಹ ದ್ದೊಂದು  ದಿನವನ್ನು ಆರಂಭಿಸಿದರು. ನಗುವಿನಿಂದ  ಇಡೀ ವಿಶ್ವವನ್ನೇ  ಶಾಂತಿ   ಯುತವಾಗಿ ಮತ್ತು ಪಾಸಿಟಿವ್ಆಗಿ ಬದಲಾಯಿಸಬಹುದು ಎಂಬ ನಂಬಿಕೆ ಇವರದ್ದಾಗಿತ್ತು.   ಈಗ   ವಿಶ್ವದ   ಎಲ್ಲಾ   ರಾಷ್ಟ್ರಗಳೂ ಈದಿನವನ್ನು ಆಚರಿಸುತ್ತವೆ.


ನಿತ್ಯದ ಬದುಕಿನಲ್ಲೂ ಹಾಗೆ ನಮಗೆ ನಮ್ಮ ಮನಸ್ಸಿಗೆ   ಸಂತೋಷ  ತರುವ ಮತ್ತು ಮುಜುಗರ ತರುವ ಎರಡೂ ರೀತಿಯ ಸನ್ನಿವೇಷಗಳು ನಡೆಯುತ್ತಿರುತ್ತವೆ.     ನಾವು ಮುಜುಗರ ಉಂಟುಮಾಡಿದ,         ಬೇಸರವುಂಟುಮಾಡಿದ ಸನ್ನಿವೇಷಗ‌‌  ಳನ್ನು ಸರಳವಾಗಿ ತೆಗೆದುಕೊಳ್ಳುವ ಮತ್ತು ಹಾಸ್ಯವಾಗಿ ಪರಿಗಣಿಸುವ ಮನೋಭಾವ ಬೆಳಿಸಿಕೊಳ್ಳಬೇಕು. ಇಲ್ಲಿ  ಮುಖ್ಯವಾಗಿ ಬದಲಾಗಬೇಕಾಗಿರುವುದು   ನಮ್ಮ       ಮನಸ್ಥಿತಿಗಳು. ಹೌದು ನಮಗೆ ಬೇಸರ ತರುವ ಸನ್ನಿವೇಶಗಳನ್ನು ನಾವು ಮರೆತು ಮನಸ್ಸಿಗೆ ಮುದ ನೀಡುವ  ಸಂದರ್ಭಗ ಳನ್ನು  ನೆನಪಿನಲ್ಲಿಟ್ಟುಕೊಳ್ಳ ಬೇಕು. ಇದರಿಂದ ಬದುಕು ಆನಂದಮಯವಾಗು ತ್ತದೆ.  ಆದರೆ  ಹೆಚ್ಚು ಜನ ಹೀಗೆ ಮಾಡದೆ ತಮಗೆ ಬದುಕಿನಲ್ಲಿ ಅಹಿತಮಾಡಿದ  ಘಟನೆಗಳನ್ನೆ ಹೆಚ್ಚು ನೆನಪಿನಲ್ಲಿಟ್ಟು ಕೊಂಡು ನೊಂದುಕೊಳ್ಳುತ್ತಾರೆ.  ಇವೇ ಅಸಹನೆ,  ದುಖಃ,  ಕೋಪಗಳಿಗೆ ಕಾರಣವಾಗುತ್ತವೆ.  ಆದ್ದರಿಂದ   ನಾವು   ಪ್ರತಿಕ್ಷಣ ಎದುರಾಗುವ ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಬಗ್ಗೆ ನಾವೇ   ಒಂದು    ಪೂರ್ವಪರ    ಸಿದ್ದತೆಯಲ್ಲಿದ್ದು ಸಮರ್ಥವಾಗಿ ನಿಭಾಯಿಸಬೇಕು.  ಹಿತವಾಗಿದ್ದರೆ ಅದನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಸಿಕೊಂಡು, ಅಹಿತವಾಗಿದ್ದರೆ ಅದನ್ನು ಹಾಸ್ಯಕ್ಕೆ ಪರಿವರ್ತಿಸಿ  ಅದನ್ನು   ಸವಿನೆನಪಾಗಿ ಬದಲಾಯಿಸಿಕ್ಕೊಳ್ಳುವುದು ನಮ್ಮ ಕೈಯಲ್ಲಿದೆ.


ಸಾವಿನಂತಹ ಗಂಭೀರ ಸಮಸ್ಯೆಯನ್ನು  ಹೊರತಾಗಿ  ಉಳಿದೆಲ್ಲವೂ  ಕೂಡ ಬದುಕಿನಲ್ಲಿ ಸಾಮಾನ್ಯ ಸಂಗತಿಗಳೇ. ಹೌದು ಬದುಕಿನಲ್ಲಿ ಪರಿಹಾರವಿಲ್ಲದ ಸಮ‌ ಸ್ಯೆಗಳು ಇಲ್ಲವೇ ಇಲ್ಲ. ಕಾರಣ ಬದುಕಿನಲ್ಲಿ ಎಂತಹ ಬಿರುಗಾಳಿಯೇ ಎದುರಾದರೂ   ನಾನು ಸಮಚಿತ್ತದಿಂದ ನಗುತ್ತಾ ಇದ್ದು ಬಿಡುತ್ತೇನೆ ಎಂದು ಈ ಕ್ಷಣ ನಿರ್ಧರಿಸಿ ಮತ್ತು ಭಗವದ್ಗೀತೆಯ ಮಾತು ನಿಮಗೆ ನೆನಪಿರಲಿ, ಪರಿವರ್ತನೆ ಜಗದ ನಿಯಮ ಎಲ್ಲವೂ ಬದಾಲಾಗುವಂತಹದ್ದು.

ನಗುನಗುತ್ತಾ ಇದ್ದು ಬಿಡೋಣ ಇರುವ ಒಂದೇ ಒಂದು ಅಮೂಲ್ಯ ಬದುಕಲ್ಲಿ.
     ‌‌‌‌‌            🔆🔆🔆.                      ✍️ಶ್ರೀಮತಿ. ಗಿರಿಜಾ ಮಾಲಿಪಾಟೀಲ್                ವಿಜಯಪೂರ