ಮಕ್ಕಳೇ..
ಈ ವಾರ ಮುದ್ದು ಮನದ ಜೋಡಿಹಕ್ಕಿಗಳ ಕಥೆಯ ಜೊತೆ ನಿಮ್ಮೆದುರು ಬಂದಿದ್ದೇನೆ.. ಕಥೆ ಶುರು ಮಾಡ್ಲಾ…

ಒಂದು ಬಯಲಿನಲ್ಲಿ ಒಂದು ವಿಶಾಲ ಹಣ್ಣಿನ ಮರವಿತ್ತು. ಆ ಮರದ ವಿಶೇಷತೆ ಯೆಂದರೆ ಅದು ವರ್ಷಪೂರ್ತಿ ಫಲಕೊಡು ತ್ತಿತ್ತು. ಆ ಮರದ ಮೇಲೆ ಒಂದು ಜೋಡಿ ಹಕ್ಕಿಗಳೂ ಸಹ ವಾಸವಾಗಿದ್ದವು. ಅವುಗ ಳಿಗೆ ಸದಾಕಾಲ ಹಣ್ಣು ದೊರೆಯುವುದ ರಿಂದ ಅವು ಆಹಾರಕ್ಕಾಗಿ ಎಲ್ಲಿಯೂ ವಲಸೆ ಹೋಗಬೇಕಾಗಿರಲಿಲ್ಲ.

ಹೀಗಿರುವಾಗ ಹೆಣ್ಣು ಹಕ್ಕಿ ಮೊಟ್ಟೆಗಳನ್ನು ಇಟ್ಟಿತು.ಕಾವು ಕೊಟ್ಟಾಗ ಸುಂದರವಾದ ಮರಿಗಳು ಹೊರ ಬಂದವು. ಅಪ್ಪ ಹಕ್ಕಿ ಮರದಿಂದ ತಾಜಾ ಹಣ್ಣುಗಳನ್ನು ಕಿತ್ತು ಮರಿಗಳಿಗೆ ಗುಟುಕು ನೀಡುತ್ತಿತ್ತು. ಹಕ್ಕಿಮರಿಗಳು ಖುಷಿಯಿಂದ ಆಡಿ ಬೆಳೆ ಯುತ್ತಿದ್ದವು. ಜೋಡಿಹಕ್ಕಿಗಳು ತಮಗೆ ಆಹಾರ,ಆಶ್ರಯನೀಡಿದ ಮರವನ್ನು ತುಂಬಾ ಪ್ರೀತಿಸುತ್ತಿದ್ದವು.

ಒಂದು ದಿನ ಅಪ್ಪ ಹಕ್ಕಿಗೆ ಆ ಮರದ ಹಣ್ಣು ಬಿಡುವಿಕೆಯಲ್ಲಿ ಇಳಿಕೆಯಾಗಿದ್ದು ಗಮನಕ್ಕೆ ಬಂದು, ‘ಈ ಮರಕ್ಕೆ ಮುಪ್ಪುಆವರಿಸುತ್ತಿದೆ’ ಎನ್ನಿಸಿತು.ಈ ಮರಕ್ಕೆ ಮುಪ್ಪಾವರಿಸಿದರೆ ತನ್ನ ಮಕ್ಕಳ. ವಾಸಕ್ಕೆ, ಆಹಾರಕ್ಕೆ ಗತಿಯೇನು …?’ಎಂದು ಹಕ್ಕಿಯೋಚಿಸಿತು. ಸುತ್ತಮುತ್ತ ಎಲ್ಲಿಯೂ ಆ ಜಾತಿಯ ಮರ ವಿರಲಿಲ್ಲ. ನಾವು ಹಣ್ಣು ತಿಂದು ಬಿಸಾಕಿದ ಬೀಜಗಳು ಏಕೆ ಮೊಳೆಯುತ್ತಿಲ್ಲ …? ಎಂದು ಮರದ ಸುತ್ತ ಮುತ್ತ ಹಣಕಿ ನೋಡಿದಾಗ ಇರುವೆಗಳ ಸಾಮ್ರಾಜ್ಯವೇ ಮರದ ಸುತ್ತ ಹರಡಿಕೊಂಡಿದ್ದು, ಅವು ಬೀಜಗಳನ್ನು ತಿನ್ನುವುದು ಮತ್ತು ಹೊತ್ತೊಯ್ಯುವುದು ಕಾಣಿಸಿತು. ಆಗ ಎರಡು ಹಕ್ಕಿಗಳು ಈ ಹಣ್ಣಿನ ಮರದ ಬೀಜವನ್ನು ದೂರದಲ್ಲೆಲ್ಲಾ ದರೂ ಬಿತ್ತುವ ವಿಚಾರಮಾಡಿದವು. ಬೀಜ ಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ದೂರ ಹಾರಿದವು.

ಸ್ವಲ್ಪ ದೂರ ಸಾಗಿದಾಗ ಅವರಿಗೆ ನದಿ ತೀರ ಎದುರಾಯಿತು. ನದಿ ತೀರ ಹಸಿಯಾಗಿದ್ದು ದ್ದನ್ನು ಕಂಡು ಅಲ್ಲಿ ಬೀಜವೂರಲು ಯತ್ನಿಸಿ ದರು. ಆಗ ನದಿ. ..”ಹಕ್ಕಿಗಳೇ ಇಲ್ಲಿ ಬೀಜ ವೂರಬೇಡಿ‌ . ಮಳೆಗಾಲದಲ್ಲಿ ನಾನು ಉಕ್ಕಿ ಹರಿವಾಗ ತೀರಗಳೆಲ್ಲ ಕೊಚ್ಚಿಹೋಗುತ್ತವೆ‌. ಆಗ ನಿಮ್ಮ ಬೀಜ ಇಲ್ಲಿ ನಿಲ್ಲುವು ದಿಲ್ಲ..” ಎಂದಿತು.

ಆಗ ಹಕ್ಕಿಗಳು ಮತ್ತೂ ಮುಂದೆ ಹಾರಿದವು. ಮುಂದೆ ಅವಕ್ಕೆ ಒಂದು ಒಣ ಬಯಲು ಪ್ರದೇಶ ಕಾಣಿಸಿತು. “ಇಲ್ಲಿ ಬೀಜ ಬಿತ್ತಬ ಹುದೇ..?” ಎಂದು ಬಯಲನ್ನು ಕೇಳಿದಾಗ “ಇಲ್ಲಿ ಮಳೆ ಬರುವುದೇ ಅಪರೂಪ, ಇಲ್ಲಿ ಯಾವ ಮರಗಳೂ ಕೂಡ ಚೆನ್ನಾಗಿ ಬೆಳೆಯ ಲಾರವು ..”ಎಂದಿತು.

ಛಲ ಬಿಡದ ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಬಲವಾಗಿ ಬೀಸುತ್ತಾ ತುಂಬಾ ದೂರ ದೂರ ಹಾರಿದವು.ಆಗಅವುಗಳಿಗೆಪರ್ವತವೊಂದು ಎದುರಾಯಿತು.

ಹಕ್ಕಿಗಳು ಅಲ್ಲಿ ಬೀಜವನ್ನು ಹಾಕಲು ಮುಂದಾದಾಗ ಪರ್ವತವು ” ಹಕ್ಕಿಗಳೇ.. ನಾನು ತುಂಬಾ ತಂಪಿನಿಂದ ಕೂಡಿದ್ದೇನೆ. ನನ್ನ ಮೇಲೆ ಬೀಳುವ ಹಿಮದಿಂದಾಗಿ ಈ ಬೀಜವು ಇಲ್ಲಿ ಮೊಳಕೆಯೊಡೆಯುವುದಿಲ್ಲ” ಎಂದಿತು. ಆಗ ಹಕ್ಕಿಗಳು ನಿರಾಶರಾದರೂ ಇನ್ನೊಂದು ಮಾರ್ಗದಲ್ಲಿ ಸರಿಯಾದ ಸ್ಥಳ ಹುಡುಕುತ್ತಾ ವಾಪಸ್ಸು ಬರತೊಡಗಿದವು. ತುಸು ಹೊತ್ತಿನ ಪಯಣದ ನಂತರ ಅವುಗಳಿಗೆ ಸೂಕ್ತ ಪ್ರದೇಶವೊಂದು ಕಾಣಿಸಿತು. “ಈ ಪ್ರದೇಶವು ತಾವು ವಾಸವಿರುವ ಪ್ರದೇಶದಂತೆ ಇದೆಯಲ್ಲ..” ಎಂದು ಅವು ಗುರುತಿಸಿದವು. ಅಲ್ಲಿನ ನೆಲವು ಆ ಬೀಜವನ್ನು ಸ್ವಾಗತಿಸಿ ತನ್ನೊಳಗೆ ಹುದುಗಿಸಿಕೊಂಡಿತು. ಹಕ್ಕಿಗಳು ಹರುಷ ದಿಂದ ತಮ್ಮ ಗೂಡಿನೆಡೆಗೆ ತೆರಳಿದವು.

ಕೆಲದಿನಗಳ ನಂತರ ತಮ್ಮ ಮರಿಹಕ್ಕಿಗಳ ಜೊತೆಗೆ ಆ ಹೊಸ ನೆಲೆಗೆ ಬಂದವು. ಆಗ ಬೀಜ ಊರಿದ ಜಾಗದಲ್ಲಿ ಪುಟ್ಟ ಗಿಡ ವೊಂದು ತಲೆ ಎತ್ತಿದ್ದು ಕಾಣಿಸಿತು. ಮರಿ ಹಕ್ಕಿಗಳಿಗೆ ಆ ಗಿಡವನ್ನು ತೋರಿಸಿ ” ನಮ್ಮ ಮುಂದಿನ ತಲೆಮಾರಿಗೆ ಇದು ವಾಸಯೋಗ್ಯ ನೆಲೆ…” ಎಂದು ಪರಿಚಯಿಸಿದವು. ಮರಿ ಹಕ್ಕಿಗಳಿಗೂ ಆ ಗಿಡದ ಮೇಲೆ ವಿಶೇಷ ಪ್ರೀತಿಯುಂಟಾಯಿತು. ಆಗಾಗ ಅವರ ಹಾಜರಿ ಗಿಡದ ಕಡೆಗೆ ಇರುತ್ತಿತ್ತು. ಮರಿ ಹಕ್ಕಿಗಳು ಬೆಳೆದು ದೊಡ್ಡದಾದವು. ಅವು ಕೂಡಾ ಸಂಗಾತಿಯನ್ನು ಹೊಂದಿ ಜೋಡಿ ಹಕ್ಕಿಗಳಾದವು. ಹೀಗಿರುವಾಗ ಒಂದು ದಿನ ಮುದಿಹಕ್ಕಿಗಳು ಮರಣ ಹೊಂದಿದವು.

ಆಗ ಹಿರಿಯರು ತಮಗಾಗಿ ಸೃಷ್ಟಿಸಿ ಹೋದ ಮರದ ಕುರಿತಾಗಿ ತನ್ನ ಮಕ್ಕಳಿಗೆ ತಿಳಿಸುತ್ತ , ಆ ಪ್ರದೇಶಕ್ಕೆ ಕರೆದುಕೊಂಡು ಹೋದವು. ಆ ಗಿಡದ ಮೇಲೆ ಹಕ್ಕಿಮರಿಗಳ ನಲಿದವು.
ಹೀಗೆ ವರ್ಷಗಳು ಉರುಳಿದಾಗ ಗಿಡವು ದೊಡ್ಡದಾಗಿ ಫಲ ನೀಡಲಾರಂಬಿಸಿತು. ಹಕ್ಕಿಗಳ ಕುಟುಂಬ ಹಳೆಯ ಮರಕ್ಕೆ ಶುಭವಿದಾಯ ಹೇಳಿ ಹೊಸ ಗಿಡದಲ್ಲಿ ತಮ್ಮ ಸಂಸಾರ ಶುರು ಮಾಡಿತು.

ಕೊನೆಯಲ್ಲಿ ಏನಾಯ್ತು ಗೊತ್ತಾ… !? ಅಮ್ಮ ಹಕ್ಕಿ , ಅಪ್ಪ ಹಕ್ಕಿಗೂಡು ಕಟ್ಟಿ ಮೊಟ್ಟೆಯಿಡುವುದರ ಜೊತೆಗೆ ಆ ಗಿಡದ ಬೀಜಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ದೂರದ ಊರುಗಳಲ್ಲಿ ಬಿತ್ತುತ್ತಲೇ ಇದ್ದವು… ಗಿಡ ಬೆಳೆಸುತ್ತಲೇ ಇದ್ದವು.. !

ನಮಗಾಗಿ ಹಾಗೂ ನಮ್ಮ ಮುಂದಿನ ಪೀಳಿಗೆಯ ಸುಂದರ ಬದುಕಿಗಾಗಿ ರಾಶಿ ರಾಶಿ ಗಿಡಗಳನ್ನು ನೆಡಬೇಕು ಎನ್ನುವ ಕಿವಿಮಾತನ್ನು ಹೇಳುತ್ತಲೇ ಇದ್ದವು.

🔆🔆🔆

✍️ ರೇಖಾ ಭಟ್‌, ಯಲ್ಲಾಪುರ