ವಿಲಿಯಮ್ ವರ್ಡ್ಸ್ ವರ್ಥ್ ಜಗದ್ವಿಖ್ಯಾತ
“ರೋಮ್ಯಾಂಟಿಕ್ ” ಕವಿ.
ಜನನ : 7 April 1770, Cockermouth,
United Kingdom
ಮರಣ : 23 April 1850, Rydal, UK
ಅವನ ಶ್ರೇಷ್ಠ ಕೃತಿಗಳಲ್ಲೊಂದಾದ
“Daffodils” ( I Wandered Lonely Like a Cloud)
ಎಂಬ ಕವನದ ಭಾವಾನುವಾದಕ್ಕೆ ಪ್ರಯತ್ನಿಸಿದ್ದೇನೆ.

ಕಣಿವೆ ಶಿಖರಗಳ ಮೇಲೆ ತೇಲುವ
ಮೋಡದಂತೆ ನಾ ಒಂಟಿಯಾಗಿ ಅಲೆದೆನು,
ಆಗ ಒಮ್ಮೆಲೇ ನೋಡಿದೆ ಹೊನ್ನ ಬಣ್ಣವ
ಹೊತ್ತ ಡ್ಯಾಫೊಡಿಲ್ಗಳ ಸಾಲನು;
ಕೆರೆಯ ತಟದಲಿ ಮರಗಳಡಿಯಲಿ
ಬೀಸುತಲಿ ನಲಿಯುತಿದ್ದವು ಗಾಳಿಯಲಿ.

ಹೊಳೆವ ತಾರೆಗಳ ಸಾಲಿನಂತೆ
ಕ್ಷೀರಪಥದಲಿ ಮಿನುಗುವ ತೆರದಲ್ಲಿ,
ಹರಡಿದ್ದವು ಎಂದೂ ಮುಗಿಯದಂತೆ
ಕೊಲ್ಲಿಯೊಂದರ ತೀರದಂಚಲ್ಲಿ;
ಸಾವಿರಾರ ಗಮನಿಸಿದೆ ಒಂದೇ ನೋಟದಲಿ
ತಲೆದೂಗುತ್ತಲಿದ್ದವು ಚುರುಕಾಗಿ ನಲಿವಿನಲಿ.

ಅಲೆಗಳ ಪಕ್ಕದಲಿ ಅವು ನರ್ತಿಸುವಾಗ
ಹೊಳೆವಲೆಗಳನೆ ಸಂತಸದಿ ಚಕಿತಗೊಳಿಸಿರಲು,
ಕವಿಯೊಬ್ಬ ಹೇಗಿರಲಿ ಪಡದೆ ಸಂತಸವಾಗ
ಅಂತಹ ಮುದದ ಸಹವಾಸವಿರಲು;
ನಾ ನೋಡೇ ನೋಡಿದೆ – ಆದರೆ ತುಸು ಯೋಚಿಸಿದೆ
ಯಾವ ಸಂಪದವ ಅದು ತಂದು ತೋರಿಸಿದೆ

ಒಮ್ಮೊಮ್ಮೆ ನಾ ನನ್ನ ಮಂಚದ ಮೇಲೊರಗಿ
ಖಾಲಿ ಕುಳಿತಾಗ ಅಥವಾ ಚಿಂತನಾಲಹರಿಯಲಿ,
ಆ ನನ್ನ ಒಳಗಣ್ಣಿಗವು ನೆನಪಾಗಿ
ಏಕಾಂತದ ಮಹದಾನಂದದಲಿ;
ಮರಳಿ ನನ್ನೆದೆ ಮುದಗೊಳುವುದು
ಮತ್ತು ಡ್ಯಾಫೊಡಿಲ್ಗಳೊಡನೆ ನರ್ತಿಸುವುದು.

I Wandered Lonely as a Cloud

BY WILLIAM WORDSWORTH

—-

I wandered lonely as a cloud

That floats on high o’er vales and hills,

When all at once I saw a crowd,

A host, of golden daffodils;

Beside the lake, beneath the trees,

Fluttering and dancing in the breeze.

Continuous as the stars that shine

And twinkle on the milky way,

They stretched in never-ending line

Along the margin of a bay:

Ten thousand saw I at a glance,

Tossing their heads in sprightly dance.

The waves beside them danced; but they

Out-did the sparkling waves in glee:

A poet could not but be gay,

In such a jocund company:

I gazed—and gazed—but little thought

What wealth the show to me had brought:

For oft, when on my couch I lie

In vacant or in pensive mood,

They flash upon that inward eye

Which is the bliss of solitude;

And then my heart with pleasure fills,

And dances with the daffodils.

            🔆🔆🔆

ಆಂಗ್ಲದಲ್ಲಿ- ವಿಲಿಯಂ ವರ್ಡ್ಸ್ ವರ್ಥ್
✍️ಕನ್ನಡಕ್ಕೆ- ಕವಿತಾ ಹೆಗಡೆ,ಹುಬ್ಬಳ್ಳಿ