ಇಂದು ಮೇ ಒಂದು ಕಾರ್ಮಿಕರ ದಿನ
ಸಮಸ್ತ ಕಾರ್ಮಿಕ ಬಂಧುಗಳಿಗೆ ಶರಣು ಎಂದು ನೆನೆಯುತ್ತ ನನ್ನ ನುಡಿ ನಮನ..

ಕರ್ಮಯೋಗಿಯ ಕಸುವು
ಜಗಕೆ ನೀಡುತಿದೆ ಸೇವೆಯ
ನೋಗವೆತ್ತಿ ಕೆಳಗಿಡದೆಯೇ
ಶ್ರಮಿಸುತ ಹಗಲು ರಾತ್ರಿಯ
ಜಯ ಜಯ ಕಾರ್ಮಿಕ ಕಸುವು
ಜಯ ಜಯ ಕಾರ್ಮಿಕ ಕಸುವು

ಪ್ಯಾರಿಸ್ಸೇ ಬೇಕಿತ್ತೇ ದಿವಸವು
ಆಚರಿಸಕೊಳ್ಳಲು ಪ್ರತಿದಿನವು
ಕಾಯಕ ಕರ್ಮಜರ ಕಾಯವು
ಕೆಂಡದಲಿ ಪುಟವಿಟ್ಟ ಚಿನ್ನವು
ಜಯ ಜಯ ಕಾರ್ಮಿಕ ಕಸುವು
ಜಯ ಜಯ ಕಾರ್ಮಿಕ ಕಸುವು

ಗಾಂಧೀಜಿ ಅಹಿಂಸಾ ಸತ್ಯಾಗ್ರಹವು
ನ್ಯಾಯವ ಗಳಿಸಿತ್ತು ಭಾರತದಿ
ದುಡಿಯುವ ಕೈಗಳಿಗೆ ಕಂಕಣದಿ
ಶೃಂಗರಿಸಿ ಕೀಳರಿಮೆ ಕಿತ್ತೆಸೆದರು
ಜಯ ಜಯ ಕಾರ್ಮಿಕ ಕಸುವು
ಜಯ ಜಯ ಕಾರ್ಮಿಕ ಕಸುವು

ವರ್ಗ ಸೌಹಾರ್ದದ ಬಲವು
ಪ್ರಬಲ ಬದ್ಧತೆಯ ಆದರ್ಶ
ರಾಜಕೀಯೇತರ ವ್ಯವಹಾರ ಸ್ಪರ್ಶ
ಕಾರ್ಮಿಕ ಬಂಡವಾಳಕ್ಕಿಂತ ಮಿಗಿಲು
ಜಯ ಜಯ ಕಾರ್ಮಿಕ ಕಸುವು
ಜಯ ಜಯ ಕಾರ್ಮಿಕ ಕಸುವು

🔆🔆🔆

✍️ರೇಮಾಸಂ        (ಡಾ.ರೇಣುಕಾತಾಯಿ.ಎಂ.ಸಂತಬಾ) ಹುಬ್ಬಳ್ಳಿ