A Real Man
Never hurts a woman
Be very careful when
you make a woman cry.
because god counts her tears,
The WOMAN

Came out of a man’s rib
Nor from his feet to be walked on,
and not from his side to be equal.
Under the arm to be protected.
and next to the Heart to be loved.

         ಅವಳ ಪಯಣದ ಹಾದಿ – 1 :

ಸಾಕು ಈ ಕವಲು ಹಾದಿಯ ಪಯಣ. ಎತ್ತ ನೋಡಿದರೂ ನೆತ್ತಿ ಸುಡುವ ಬಿರು ಬಿಸಿಲು. ಮರುಳ ಹಾಸಿಗೆಯ ಮೇಲೆ ನಡೆಯುತ್ತಿ ದ್ದರೂ ಮನೆ ಮುಟ್ಟುವ ತವಕ. ಒಂದು ಹೆಜ್ಜೆ ಮೇಲೆತ್ತಿಡುತ್ತಿದ್ದರೆ, ಇನ್ನೊಂದು ಹೆಜ್ಜೆ ಏಳಲೊಲ್ಲದು. ಕಸುವಿನಿಂದ ಎತ್ತಲು ಹೋದರೆ ಕುಸಿದು ಬೀಳುವ, ಉಸಿಕಿನಲ್ಲಿ ಸಿಕ್ಕಿಕೊಳ್ಳುವ ಕಾಲುಗಳು. ಆದರೂ ಕಂದಕದಲ್ಲಿ ಕವಲು ಹಾದಿಯಲ್ಲಿ ನಡೆದಿದೆ ಇವಳ ಗಜಪಯಣ.

ಇತಿಹಾಸದ ನಕಾಶೆಯನ್ನು ಗಾಜುಕನ್ನಡಿ ಯಿಂದ ಎಷ್ಟೇ ದಿಟ್ಟಿಸಿ ನೋಡಿದರೂ ಇವಳ ವೈರುಧ್ಯತೆಯ, ವೈಚಿತ್ರದ ನೆಲೆಗಳೆ, ಗೆರೆಗ ಳಂತೆ ಕಾಣುತ್ತಿದೆ. ಇವಳದು ತನ್ನ ಅಸ್ತಿತ್ವದ ಸ್ಥಾಪನೆಗೆ ಅವಿರತ ಹೋರಾಟ. ಛಲತೊಟ್ಟ ಛಲಗಾರ್ತಿ ಇವಳು. ಮನ್ವಂತರಗಳು ಇವಳ ಬಿಸಿಯುಸಿರಿಗೆ  ಸುಟ್ಟಿವೆ.   ಕಣ್ಣ ನೀರು ಕಡಲಾಗಿ ಉಪ್ಪಾಗಿದೆ. ಇವಳೆದೆಯನೋವು ಜ್ಞಾಲಾಮುಖಿಯಾಗಿ ಸ್ಪೋಟಿಸಿದೆ. ಬದುಕಿಗೆ ಭರವಸೆಯ ಮುನ್ನುಡಿ ಬರೆಯುವ ಕಾತರ ಇವಳಿಗೆ.ಕಲಮಾದಲ್ಲಿಯ ಶಾಹಿಮುಗಿದರು  ಮುನ್ನುಡಿಯೇ ಮುಗಿಯುತ್ತಿಲ್ಲ. ಇನ್ನೆಲ್ಲಿಯ ಮುನ್ನಡೆ ?!

ಕವಲು ಹಾದಿಯಲ್ಲಿ ಹುಡಿ ತುಳಿಯುತ್ತಾ ಸಾಗುತ್ತಿರುವ ಇವಳು ಅನೇಕ ತಲ್ಲಣಗಳಿಗೆ ಎದೆಯೊಡ್ಡಿದ್ದಾಳೆ. ಗಾಳಿಗೊಡ್ಡಿದಬದುಕೆಂಬ ದೀಪಕ್ಕೆ ಸ್ವಾಭಿಮಾನ, ಆತ್ಮಾಭಿಮಾನದ ಕರಗಳಿಂದ ಆರದಂತೆ ತಡೆ ಹಿಡಿದಿದ್ದಾಳೆ. ಶೋಷಣೆ, ದೌರ್ಜನ್ಯ, ಮೆಟ್ಟಿ ಮತ್ತೊಮ್ಮೆ ಮಗುದೊಮ್ಮೆ ತಲೆ ಎತ್ತಿ ಕಣ್ಣೀರು ತಡೆ ಯುತ್ತಾ ಎದೆಯೊಡ್ಡಿ ನಡೆಯುತ್ತಲೇ ಸಾಗಿ ದ್ದಾಳೆ, ಸಾಗುತ್ತಲೇ ಇದ್ದಾಳೆ.ಸಮಾಜ ತನ್ನ ವ್ಯವಸ್ಥೆಯನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿ ಕೊಳ್ಳಲು ಭಾಗಿರಥಿಯರನ್ನು ಬಲಿಕೊಡು ತ್ತಲೇ ನಡೆದಿದೆ. ತ್ಯಾಗದ ಹೆಸರಿನಲ್ಲಿ ಇವಳ ಉಸಿರು ಜೋತಾಡಿದೆ. ಮಾಸ್ತಿ ಕಲ್ಲಿನಲ್ಲಿ ಬಂಧಿತವಾಗಿದೆ. ಅಡುಗೆ ಕೋಣೆಯ ಅಡಿ ಗಲ್ಲಾಗಿದೆ. ಹೆರಿಗೆ ಕೋಣೆಯತಳಗಲ್ಲಾಗಿದೆ.. ಪುರುಷಪ್ರಧಾನ ಸಂಸ್ಕೃತಿಯ ಚಹರೆಯಲ್ಲಿ ತನ್ನ ಚಹರೆಯ ಕಾಣದೇ ಹೋದವಳು. ಇವಳು ಧರ್ಮ, ಸಂಸ್ಕೃತಿ, ಕುಟುಂಬ, ವಿವಾಹದಡಿಯಲ್ಲಿ ನಜ್ಜುಗುಜ್ಜಾದವಳು. ಇವಳ ಕವಲು ಹಾದಿಯ ಪಯಣವಿದು. ಮನುವಿನ ಕುಂಚದಲ್ಲಿ ಅರಳಿದೆ ಇವಳ ಎರಡು ಮುಖ. ಒಂದು ಕಲ್ಲಾದ ದೇವತೆ, ಇನ್ನೊಂದು ಅತಿಹೀನೆಯಾದ ರಾಕ್ಷಸಿ ಎಂದು. ರಾಕ್ಷಸಿಯಾಗಿ ಚಿತ್ರಿಸಿ ಹಿಂಸಿಸಿದ ಸ್ಮೃತಿ,   ಪುರಾಣಗಳು, ಇವಳು   ಪರಾವ ಲಂಬಿ ಎಂದೇ ಘೋಷಿಸಿ ಇವಳಿಗೆ ಕಪ್ಪು ಬಣ್ಣ ಲೇಪಿಸಿದವು. ಇವಳ ಸ್ವಾತಂತ್ರ್ಯವನ್ನು ಕಟ್ಟಿ ಹಾಕಿದೆ ‘ನ ಸ್ತ್ರೀ ಸ್ವಾತಂತ್ರಮರ್ಹತಿ’ ಎಂಬ ಘೋಷ ವಾಕ್ಯ. ಸಾಕೇ..? ಬೇಕೆ..? ಇವಳ ಯಶೋಗಾಥೆಯ ಕಟ್ಟಲು ಕಲ್ಲು ಇಟ್ಟಿಗೆಗಳು. ಇಲ್ಲಿ ನಿಯಮಗಳ ಪಾಲಿಸಿ ದರೂ, ಉಲ್ಲಂಘಿಸಿದರೂ, ಎಲ್ಲವೂ ಶೂಲಗಳಾಗಿ ಇವಳಿಗೇ ತಿವಿದಿವೆ. ಇದೇ ನಿಯಮಗಳು ನೀತಿ ಸಂಹಿತೆಗಳು ಇವಳ ನೆರಳಾಗಿ ಮುಂದೆ ಇವಳಿಗೇ ಭೂತಗಳಾಗಿ ಕಾಡಿವೆ. ತನ್ನ ನೆರಳಿಗೆ ತಾನೇ ಹೆದರುವ ಮಗುವಿನಂತಾಗಿದ್ದಾಳೆ ಇವಳು.


ಅವಳ ಪಯಣದ ಹಾದಿ – 2…

ಗಂಗೆಯನ್ನು ಮಲೀನಗೊಳಿಸಿದ್ದಾಯಿತು. ಮಕ್ಕಳು-ಮುದುಕಿ   ಎನ್ನದೇ   ಮುಕ್ಕಿ ತಿಂದದ್ದೂ ಆಯಿತು.ಉಳಿದಿರುವುದಾದರೂ ಏನು..? ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸಿದ ಪುರಾಣಗಳು ಅವಳಿಗೆ ತೊಡೆಯ ಸಿಂಹಾ ಸನ ನೀಡಿದರೇನು..? ಎದೆಯಲ್ಲಿ ಸ್ಥಾನ ಒದಗಿಸಿದರೇನು..? ತಲೆಯ ಮೇಲೆ ಹೊತ್ತು ತಿರುಗಿದರೇನು..?     ಅರ್ಧ ದೇಹವನ್ನೇ ಅವಳಿಗೆಮೀಸಲಾಗಿಟ್ಟರೇನು..? ಇಂದು ಇವಳನ್ನು ಜಾಗತೀಕರಣದ ಮಾರುಕಟ್ಟೆ ಯಲ್ಲಿ ಬೆತ್ತಲಾಗಿಸಿದ್ದುಸಾಕಾಗಿಲ್ಲವೇ..? ಸೌಂದರ್ಯದ ಸರಕಾಗಿ ಜಾಹೀರಾತಿನ ಮಾರುಕಟ್ಟೆಯಲ್ಲಿ ಇವಳ ಹೆಣ್ತನ ಮಾರಾಟ ವಾಗುತ್ತಿದೆ. ಕ್ರಿಕೇಟಿನ ಶ್ರೀಮಂತ ಆಟದಲ್ಲಿ “ ಚಿಯರ್ ಗರ್ಲ್ ” ಆಗಿ ತುಂಡು ಬಟ್ಟೆ ಯಲ್ಲಿ ಅವಳ ಅಸ್ತಿತ್ವ ಬಡವಾಗಿ ಹರಾಜಾ ಗಿದೆ. ಕೆಂಪು ದೀಪದ ಬೆಳಕಿನಲ್ಲಿ ಹಸಿದ ಮಕ್ಕಳ ಹೊಟ್ಟೆ ತುಂಬಿಸಲು ಇವಳ ದೇಹ ಕಾಮುಕರಿಗೆ ಮೃಷ್ಟಾನ್ನವಾಗಬೇಕಿದೆ. ರಕ್ಷಣೆಗೆ ಇದ್ದ ಮನೆಗೂಡಲ್ಲೂ ಬೆಕ್ಕಿನಂತೆ ಹೊಂಚಿದ ಕಾಮುಕತೆ ಇವಳನ್ನು ಇಂಚಿಂಚು ಕೊಂದಿದೆ. ಸಿಕ್ಕಷ್ಟು ಹಾಲನ್ನು ಕದ್ದು ಚಪ್ಪರಿ ಸಿದಾಗ ಧರೆ ಹತ್ತಿ ಉರಿದಂತಾಗುತ್ತಿದೆ. ಉರಿ ಕೊಳ್ಳಿಯಿಂದ ಎದೆಯನ್ನು ತಿವಿದಂತಾಗು ತ್ತಿದೆ. ದೇಶ, ಕೋಶಗಳು ಕೊಡುವರಕ್ಷಣೆಯ ಮಾತು ದೂರವಿರಲಿ, ಮನೆಯೂ ಇವಳ ಪಾಲಿಗೆ   ಅಸುರಕ್ಷಿತವಾದದ್ದು   ದೊಡ್ಡ ದುರಂತ. ರಣಹದ್ದುಗಳ ಕೊಕ್ಕಿನ ಇರಿತ ದಿಂದ ಇವಳ ಎದೆಯ ಹಣ್ಣು ಬಿರಿದು ಬಿದ್ದಿದೆ.


ಒಂದೆಡೆ ದೇವಿಯ ಆರಾಧನೆ, ಇನ್ನೊಂದೆಡೆ ಜೀವಂತ ದೇವಿಯರ ಶೋಷಣೆ. ಇವಳ ಹಾದಿಗೆ ಇಡೀ ಪರಂಪರೆಯೇ ಶೋಷಣೆಯ ರತ್ನಗಂಬಳಿ ಹಾಸಿ ಬಿಟ್ಟಿದೆ. ಮಹಾಕಾವ್ಯ ಗಳೇ ಹೆಣ್ಣಿನ ಶೋಷಣೆಯ ಪ್ರಥಮಗಳು. ಮಡದಿಯ ಮಾತಿಗಿಂತ ಅಗಸನ ಮಾತು ಗಳೇ ಸತ್ಯವಾದವು ಮರ್ಯಾದಾ ಪುರು ಷನಿಗೆ. ಅವನ ಮರ್ಯಾದೆಯಲ್ಲಿ ಇವಳ ಹೆಣ್ತನ ನರಳಾಡಿತು. ಅಗ್ನಿಸ್ನಾನ ಮಾಡಿತು. ಧರ್ಮವಂತರ ಧರ್ಮದಲ್ಲಿ ಇವಳು ಅಡ ವಿಡುವ ವಸ್ತುವಾದದ್ದು ಅಚ್ಚರಿ. ಕುದುರೆ ಗಳಿಗೆ ಬದಲಾಗಿ ಇವಳ ಹೆಣ್ತನದ ಬಾಡಿಗೆ ಪಡೆದ ಮಾಲೀಕರಿಗೆ ಉಪ್ಪರಿಗೆಯ ಮನೆ ಗಳು, ರಾಜ ಮರ್ಯಾದೆಗಳು..!

ಭರತ ಮಾತೆಯು ಇವಳ ಪಾಲಿಗೆ ಏಕೆ ಮಲತಾಯಿ ಆದಳೋ..?!     ‘ಸುತನೇ ಸದ್ಗತಿದಾತ’ – ಎಂಬುದೇ ಸತ್ಯವಾದರೇ ಹೆಜ್ಜೆಗೊಂದೊಂದು ನಾಯಿಕೊಡೆಗಳಂತೆ ಎದ್ದುನಿಂತ ವೃದ್ಧಾಶ್ರಮಗಳು ಯಾವ ಹಾಡ ಹಾಡಬಹುದು..?!   ಹಕ್ಕನ್ನು   ಪ್ರಶ್ನಿಸುವ ನಾಲಿಗೆಯನ್ನು ಕಿತ್ತೆಸೆಯುವ, ನ್ಯಾಯಕ್ಕಾಗಿ ಕೂಗಿದ ಧ್ವನಿಗೆ ಜಾಣಕಿವುಡಾಗುವ ವ್ಯವಸ್ಥೆ ನಿರ್ಮಾಣವಾಗಿದೆ. ಸಮಾಜ ಶಿವನ ಕೈ ಡಮರುಗ ಎಲ್ಲಿ ಮಾಯವಾಗಿ ಹೋಗಿರ ಬಹುದು..?!

“ ಹೆಣ್ಣ ಅಖಂಡ ಮೌನಕ್ಕೆ ಧ್ವನಿಕೊಟ್ಟ ಬಸವಣ್ಣ

ಶತಶತಮಾನಗಳೇ ಕಳೆದರೂ
ಎಲ್ಲಿ ಸಮಪಾಲು..? ಸಮಬಾಳು..? ”
                  🔆🔆🔆

✍️   ಡಾ|| ಪುಷ್ಪಾವತಿ ಶಲವಡಿಮಠ,      ಹಾವೇರಿ