ನಮ್ಮ ಜಗತ್ತು ನಮಗಷ್ಟೆ ಸೀಮಿತವಾಗಿದೆ. ವಿಶಾಲವಾಗಿ ನೋಡೋ ಮನಸ್ಸು ಇನ್ನು ತೆರೆಯದಿದ್ದುದು ದುರಂತ. ಯಾಕಿ ಮಾತು ಅಂದ್ರೆ…ಜಗತ್ತಿನಲ್ಲಿ ಹಿಂದಾದ ಹಾಗೂ ಮುಂದಾಗುತ್ತಿರುವ ಘಟನೆಗಳು ನಮ್ಮ ಮೇಲೆ ಪ್ರಭಾವ ಬೀರಲಿಲ್ಲವೆಂದರೆ ನಾವಿನ್ನೂ ಕುಬ್ಜ ಮನಸ್ಥಿತಿಯಲ್ಲಿಯೇ ನಾವು ಕಂಡಷ್ಟೇ ನಮ್ಮ ಬದುಕು ಕಟ್ಟಿಕೊಂಡಿರುವುದು ಬಾವಿಯೊಳಗಿನ ಕಪ್ಪೆಯಂತೆ. ಮಾನವ ಸಂಘಜೀವಿ, ಮಂಗನಿಂದ ಮಾನವನಾದನೆಂದ ವಿಚಾರ ನಮ್ಮನ್ನು ಬಡಿದೆಬ್ಬಿಸಿಲ್ಲ. ಜಗತ್ತನ್ನು ಕಣ್ತೆರೆದು ನೋಡಿಯೂ ನೋಡದವರಂಗೆ ಇರುವವರ ಮಧ್ಯೆ.. ಇಡೀ ಜಗತ್ತು ಒಕ್ಕೊರಲಿನಿಂದ ಏಕೈಕ ವ್ಯಕ್ತಿಯನ್ನು ರಾಷ್ಟ್ರಪಿತನೆಂದು ಒಪ್ಪಿಕೊಂಡು, ವಿಶ್ವ ತಲೆಬಾಗಿದ್ದು ಸತ್ಯದ ನಡತೆಗೆ… ಅಹಿಂಸೆಯ ಒಡೆತನಕ್ಕೆ..
ಅವರೇನು ಸೆಲಿಬ್ರಿಟಿಯಲ್ಲ,ಸರಳ ಸೀದಾ ಸಾದಾ ವ್ಯಕ್ತಿ. ಅದೊಂದು ಅಧ್ಬುತ ಶಕ್ತಿ. ಅವರ ಬದುಕು ತೆರೆದ ಪುಸ್ತಕವಾಗಿ ಎಲ್ಲರಿಗೂ ಲಭ್ಯವಾಗಿರುವುದೇ ನಮ್ಮ ಪುಣ್ಯ. ಇಂದು ಎಲ್ಲರ ಮನದಂಗಳದಲ್ಲಿ ನೆಲೆ ನಿಲ್ಲಲು ಸಾಧ್ಯವಾಗಿದ್ದು,ಅವರ ಸರಳ ಜೀವನ. ಬಾಪು ಹೇಳಿಕೊಳ್ಳುವಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಗೋಲ್ಡ್ ಮೇಡಲಿಸ್ಟ್ ಅಲ್ಲ. ಅವರಿಗೆ ಗಣಿತ, ಮಗ್ಗಿ, ಇಂಗ್ಲಿಷ್ ವಿಷಯಗಳು ಕಬ್ಬಿಣದಕಡಲೆಗಳು.ಮೋಹನದಾಸ ಗಾಂಧಿ ತರಗತಿಯಲ್ಲಿ ವಿಶೇಷ ಸಾಧನೆ ಮಾಡಿದವರ ಲಿಸ್ಟ್ ನಲ್ಲಿ ಇರದವರು.ತುಂಬಾ ಸಂಕುಚಿತ ಸ್ವಭಾವದವರು.

ಅವರು ಯಾರೊಂದಿಗೂ ಹೆಚ್ಚು ಮಾತಾಡು ತ್ತಿರಲಿಲ್ಲ. ಶಾಲೆ ಬಿಟ್ಟ ನಂತರ ಮನೆ.ಶಾಲೆ ಸರಿಯಾದ ವೇಳೆಗೆ ಬರುವುದು,ಶಾಲೆ ಬಿಟ್ಟನಂತರ ಮನೆ ತಲುಪುವುದು ಅವರ ನಿಯತ್ತಿನ ಕಾಯಕ. ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುವಗುಣ ಅವರಿಗೆ ಬಾಲ್ಯದಲ್ಲೆ ಸಿದ್ದಿಸಿತ್ತು. ಮಕ್ಕಳಲ್ಲಿ ಎರಡು ವಿಧದ ಮನಸ್ಸಿರುತ್ತದೆ:
1)ಮೌನವಾಗಿರುವುದು, ಕಡಿಮೆಮಾತು, ಒಳಮುಖಿ, ಹಟವಾದಿಗಳು. 2)ಎಲ್ಲವನ್ನು ಹೇಳುವ, ಹೆಚ್ಚುಮಾತಾಡುವ ಮಕ್ಕಳು.
ಇಲ್ಲಿ ಎರಡನೇ ವಿಧದ ಮಕ್ಕಳಿಗೆಯಾವುದೇ ರೀತಿಯ ನಿರ್ಭಂದವಿಲ್ಲ,ಅವರು ಮನಸ್ಸಿಗೆ ತೋಚಿದ್ದನ್ನು ನೇರವಾಗಿ ಹೇಳುವರು. ತಮ್ಮಲ್ಲಿ ಯಾವುದನ್ನೂ ಒಳಗುಟ್ಟಾಗಿ ಇಟ್ಟುಕೊಳ್ಳದವರು.
ಇನ್ನು ಮೊದಲಿನ ವಿಧದ ಮಕ್ಕಳಂತೂ ತುಂಬಾ ತೀಕ್ಷ್ಣಸ್ವಭಾವದವರು. ಅವರು ಒಳಗೊಳಗೆ ಚಿಂತಿಸುವವರು. ನಂತರ ಕಾರ್ಯರೂಪಕ್ಕೆ ತರುವವರು ಮತ್ತು ಹಟವಾದಿಗಳು. ಇಂತಹ ಅಂತರ್ಮುಖಿ ಮಕ್ಕಳ ಮನಸ್ಸನ್ನು ಅರ್ಥೈಸಿಕೊಳ್ಳುವುದು ಕಷ್ಟ.ಅದನ್ನು ಅರಿತು ತಿದ್ದಿದಲ್ಲಿ ಮಾತ್ರ ಅಪಾರ ಯಶಸ್ಸು ಸಾಧಿಸಬಲ್ಲರು.
ಪ್ರತಿ ತಂದೆ ತಾಯಿಯರಿಗೆ ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿ ಹಾಗೂ ಮಮಕಾರ. ಮಗು ಜಾಣನಿರಲಿ, ದಡ್ಡನಿರಲಿ ಹಾಗೆಯೇ ಬಾಪುವಿಗೆ ತಂದೆಯ ಸೇವೆ ಮಾಡುವು ದೆಂದರೆ ತುಂಬಾ ಇಷ್ಟದಕೆಲಸ. ಮಗ ಜಾಣನಾಗದಿದ್ದರೂ ಪರವಾಗಿಲ್ಲ ಸೇವಾ ಗುಣವಿದ್ದಲ್ಲಿ ಮುಂದಿರುವುದಕ್ಕೆ ತಂದೆ ಕರಮಚಂದ್ರರು ಸಂತಸಪಟ್ಟಿದ್ದರು.ಮಗು ಸ್ವಾನುಭವದಿಂದ ಬೆಳೆಯಲು ಅವಕಾಶ ನೀಡುವಲ್ಲಿ ಪ್ರಾಯೋಗಿಕ ಚಟುವಟಿಕೆಗೆ ತಮ್ಮನ್ನು ಒಡ್ಡುತ್ತಿದ್ದರು.

ಗಾಂಧಿಯವರಿಗೆ ಅಪ್ಯಾಯ ಮಾನವಾದ ಸಂಗತಿಯೆಂದರೆ ಸತ್ಯ ನುಡಿಯುವುದು. ಅವರಿಗೆ ಬಾಲ್ಯದಲ್ಲಿ ಹರಿಶ್ಚಂದ್ರ ನಾಟಕ ಅಷ್ಟು ಪ್ರಭಾವಬೀರಿತ್ತು.ಎಂತಹ ಸಂದರ್ಭ ಬಂದರೂ ಕೊಟ್ಟ ಮಾತಿಗೆ ತಪ್ಪಬಾರದೆಂಬ ಗುಣ ಅವರಿಗೆ ಅವರ ಅಜ್ಜನಿಂದ ಬಳುವಳಿ ಯಾಗಿ ಬಂದಿತ್ತು. ತಂದೆಯಿಂದಅನ್ಯಾಯದ ವಿರುದ್ಧದ್ವನಿ ಎತ್ತುವ ಗುಣ ಮೈಗೂಡಿತ್ತು. ತಾಯಿಪುತಲಿಬಾಯಿಯವರಿಂದ ಧಾರ್ಮಿಕ ಚಿಂತನೆ,ಗಟ್ಟಿಮನೋಧರ್ಮ, ಉಪವಾಸದ ಅನುಭವ ಎಲ್ಲವು ಬಾಪುರವರಿಗೆ ಮೂಲ ಸಂಸ್ಕಾರವಾಗಿದೊರೆತಿತ್ತು.
ನಾವು ಮಕ್ಕಳಿಗೆ ನೂರು ಪ್ರತಿಶತ ಅಂಕಪಡೆದರೆ ಮಾತ್ರ ಹೆಮ್ಮೆ ಪಡುವ ಮನೋಭಾವಕ್ಕೆ ಬಂದುನಿಂತಿರುವುದರಿಂದ ಮಗು ತನ್ನ ಬಾಲ್ಯ ಅನುಭವಿಸದೇ ಅತ್ತ ನೈಜತೆಗೂ ಒಳಗಾಗದೇ ಮಾನಸಿಕ ಹಿಂಸೆ ಅನುಭವಿಸಲು ಯಾರು ಕಾರಣ? ಸಾಮಾನ್ಯ ಹುಡುಗ ಇಂದು ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಆದರ್ಶವಾಗುವಂತೆ ಬದುಕುತ್ತಾನೆ ಎಂದರೆ ಅದಕ್ಕಿಂತ ಹೆಮ್ಮೆ ಬೇರೆನು ಬೇಕು?
ಸತ್ಯ ಎಷ್ಟು ಸ್ಪಷ್ಟ ಎಂಬುದಕ್ಕೆ ಉದಾ…ಒಮ್ಮೆ ಶಾಲಾ ತಪಾಸಣಾಧಿಕಾರಿಗಳು ತರಗತಿಗೆಯ ಮಕ್ಕಳಿಗೆ ಐದು ಆಂಗ್ಲ ಪದಗಳನ್ನು ಬರೆಯಲು ಹೇಳುವರು. ಅದರಲ್ಲಿ “ಕಿಟಲ್ “ ಎಂಬ ಪದವು ಒಂದು. ಗಾಂಧಿಯವರು ಕಿಟಲ್ ಪದ ತಪ್ಪಾಗಿ ಬರೆದಿದ್ದರು.ಅದನ್ನು ಗಮನಿಸಿದ ಶಿಕ್ಷಕರು ಸನ್ನೆಯ ಮೂಲಕ,ಹಾಗೂ ತಮ್ಮ ಶೂನಿಂದ ತಿವಿದು ಮುಂದಿನವರ ಸ್ಲೇಟ್ ನೋಡಿ ಬರಿಯೆಂದು ತಿಳಿಸಿದಾಗ್ಯೂ ಅವರು ಬರೆಯದೇ ಹಾಗೆ ಕೊಟ್ಟರು.ಇಡೀ ತರಗತಿ ಯಲ್ಲಿ ಇವರದ್ದೊಂದೆ ತಪ್ಪು.ಶಿಕ್ಷಕರು ನಿನಗೆ ಇನ್ನೊಬ್ಬರದನ್ನು ನೋಡಿ ಬರಿಯೆಂದರೂ ಬರಿಯಲಿಲ್ಲ ಎಂದು ಜಬರಿಸಿದರು.

ಗಾಂಧಿ.. ಬೇಸರಿಸದೆ “ಹಿರಿಯರು ಹೇಳಿದ ಅಪ್ಪಣೆಯನ್ನು ಪಾಲಿಸುವುದಷ್ಟೇ ನಮ್ಮ ಕೆಲಸ.ಅವರ ನಡವಳಿಕೆಯನ್ನು ಪ್ರಶ್ನಿಸುವು ದಲ್ಲ” ಎಂದು ಮೌನವಾದರು. ಬಾಪೂಜಿಯವರಿಗೂ ಕೂಡ ದುಶ್ಚಟ ಗಳಿದ್ದವು. ಹಣವನ್ನು ಕದ್ದಿದ್ದರು,ಸಿಗರೇಟ್ ಸೇದಿದ್ದರು, ಅವರುತಪ್ಪುಹಾದಿಯಲ್ಲಿ ನಡೆದು ಅದುತಪ್ಪುಎಂದು ಮನವರಿಕೆ ಯಾದಾಗ ತಂದೆಯ ಮುಂದೆ ನಿಂತುಕೊಳ್ಳ ಲಾಗದೇ ಅವರಿಗೊಂದು ಪತ್ರ ಬರೆದು ತಮ್ಮ ತಪ್ಪನ್ನು ಮನ್ನಿಸೆಂದು ಬೇಡುವಾಗ ಅವರ ಮನಸ್ಥಿತಿ ಹೇಗಿರಬೇಕು? ಉಹಿಸಿ. ಇಂದು ನಮ್ಮ ಮಕ್ಕಳಿಗೆ ತಪ್ಪನ್ನು ಒಪ್ಪಿ ಕೊಳ್ಳುವ ಸ್ಥಿತಿ ನಿರ್ಮಾಣವಾದರೆ ಏನಾದೀತು?
ನಮ್ಮ ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡುವ ಮಟ್ಟಕ್ಕೆ ಬೆಳಸಿದ್ದೀವಿ ಎಂದು ಎದೆ ಮುಟ್ಟಿ ಪ್ರಮಾಣ ಮಾಡುವವರಿದ್ದರೆ ಖಂಡಿತವಾಗಿ ತಾವು ಸಂಸ್ಕಾರ ಮನೆಯಿಂದ ಲೇ ನೀಡಿದ್ದಿರಿ ಅಂತ ಅರ್ಥ. ಯಾವಾಗ ಮಗು ನಮ್ಮ ದಿಕ್ಕರಿಸಿ ಸಮಾಜಕ್ಕೆ ಘಾತುಕ ನಾಗು ತ್ತಾನೋ ಅದಕ್ಕೂ ನಾವು ತಲೆದಂಡ ತೆರಲೇಬೇಕು.ಯಾವ ಮಕ್ಕಳು ಸಾಮಾನ್ಯ ರಲ್ಲ.ಅವರಿಗೆ ಸರಿಯಾದ ಸಮಯದಲ್ಲಿ ಮೌಲ್ಯಗಳನ್ನು ಬಿತ್ತಿದರೆ ಅದು ಮುಂದೊಂದು ದಿನ ಮೌಲ್ಯದ ನಿಧಿಯಾಗಿ ಹೊರಹೊಮ್ಮುತ್ತದೆ.
ತಂದೆ ಶ್ರವಣ ಭಕ್ತಿ ನಾಟಕ ಪುಸ್ತಕವನ್ನು ತಂದಿದ್ದರು. ಅದನ್ನು ಹತ್ತಾರು ಬಾರಿ ಓದಿ, ಅಲ್ಲಿ ತಂದೆ-ತಾಯಿಯರ ಸೇವೆ ಎಷ್ಟು ಪ್ರಮುಖ ಎಂಬ ನಿಖರ ಜ್ಞಾನ ಪಡೆದು ತಮ್ಮ ಜೀವಮಾನದುದ್ದಕ್ಕೂ ಸೇವಾ ಮನೋಭಾವ ಬೆಳೆಸಿಕೊಂಡು ಸರಳ ಜೀವನ ನಡೆಸುವುದನ್ನು ತನ್ನ ಸತ್ಯದೊಂದಿಗಿನ ಪ್ರಯೋಗಗಳು ಎಂಬ ಆತ್ಮಚರಿತೆಯಲ್ಲಿ ಮುಕ್ತವಾಗಿ ಪ್ರಕಟಿಸಿದ್ದಾರೆ. ಓದಬೇಕು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ಮಕ್ಕಳಿಗೆ ಹತ್ತು ವರ್ಷ ತುಂಬುವವರೆಗೆ ಅವರಿಗೆ ನೀತಿ ಕಥೆಗಳನ್ನು,ಮೌಲ್ಯಗಳನ್ನು, ಪುಸ್ತಕ ಓದುವ ಅಳವಡಿಕೆ ಪಾಲಕರಿಂದ ಮನೆಯಿಂದಲೇ ಪ್ರಾರಂಭವಾದಾಗ ಮಾತ್ರ ಸಾಮಾನ್ಯವಾದ ಮಗುವು ಕೂಡ ಅಸಾಮಾನ್ಯವಾಗಿ ಬೆಳೆಯಲು ಯಾವುದು ಅಸಾಧ್ಯವಲ್ಲ ಮನಸ್ಸಿದ್ದರೆ ಎಲ್ಲವು..ಸಾಧ್ಯ.
🔆🔆🔆
✍️ ಶಿವಲೀಲಾ ಹುಣಸಗಿ.
ಶಿಕ್ಷಕಿ, ಯಲ್ಲಾಪೂರ
👌👌👌👌👌👌👌👌👌👌
LikeLike
ಉತ್ತಮ ಲೇಖನ.. ಸರಳ ಬದುಕು ಶ್ರೇಷ್ಠ ಬದುಕು ಎನ್ನುವುದು ಮಕ್ಕಳಿಗೆ ಅರ್ಥೈಸಬೇಕು ಎಂಬುದನ್ನು ತುಂಬಾ ಚೆಂದವಾಗಿ ನಿರೂಪಿಸಿದ್ದೀರಿ…
LikeLiked by 1 person
Super❤❤❤❤❤❤❤❤
LikeLiked by 1 person
ನಿಜ ಗೆಳತಿ ಇಂದು ಮಕ್ಕಳನ್ನು ಗುಣಾತ್ಮಕವಾಗಿ ಬೆಳೆಸುವುದು ಒಂದು ಸವಾಲಾಗಿದೆ.ಮನದಟ್ಟಾಗುವ ಲೇಖನ
LikeLiked by 1 person
ನಿರೂಪಣೆ ಅವಶ್ಯವಾಗಿ ಎಲ್ಲರಿಗೂ ತಲುಪಬೇಕು.
ಚಂದ ಇದೆ ಲೇಖನ.
LikeLike
ತುಂಬಾ ಸುಂದರವಾಗಿ ಮೂಡಿ ಬಂದಿದೆ 🙏🏻🙏🏻 ಗೊತ್ತಿರುವ ವಿಷಯವೇ ಆದರೂ ಹೊಸ ಆಯಾಮ ಆಕರ್ಷಕ ವಾಗಿದೆ.ತಮ್ಮದೂ ಕೂಡಾ ಸರಳ ಜೀವನ ಉದಾತ್ತ ವಿಚಾರಗಳು.ಗ್ರೇಟ್ ರೀ ಮೇಡಂ
LikeLike
ಹೆತ್ತವರೂ ಮಕ್ಕಳೂ ಓದಲೇಬೇಕಾದ ಲೇಖನ.. ವಿಷಯವನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ ಮೇಡಂ..
LikeLike
ಸಾದಾರಣ ವ್ಯಕ್ತಿ ಅಸಾದಾರಣವಾಗಿ ಮುಂದೊಂದು ದಿನ ಮಹಾತ್ಮನಾದದ್ದು ಗಾಂಧೀಜಿಯ ವ್ಯಕ್ತಿತ್ವ. ಉತ್ತಮ ಲೇಖನ, ಅಭಿನಂದನೆಗಳು 💐💐
LikeLike
“ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು “ಎನ್ನುವಂತೆ ತಂದೆ ತಾಯಂದಿರಿಂದ ಪಡೆದ ಸಂಸ್ಕಾರದಿಂದ ಮಗು ಸಮಾಜದ ಅತ್ಯುತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎನ್ನುವುದಕ್ಕೆ ಗಾಂಧೀಜಿಯವರೇ ಸಾಕ್ಷಿಯಾಗಿದ್ದಾರೆ .ಅತ್ಯುತ್ತಮವಾಗಿ ಬರೆದಿದ್ದೀರಿ ಆಲ್ ದಿ ಬೆಸ್ಟ್ ಬರವಣಿಗೆ ಹೀಗೆ ಮುಂದುವರೆಯಲಿ
LikeLike
Sundar lekana mam…..
LikeLike
Sundhar lekhana Gandhi namagella Mardi…
LikeLike
ತುಂಬಾ ಉತ್ತಮ ಲೇಖನ ಮೇಡಂ ಅಕ್ಷರಶಃ ಸತ್ಯವಾದ ಮಾತುಗಳು
LikeLike
ನಿನ್ನ ಲೇಖನಿಯಿಂದ ಬಾಪೂರ ಒಡಲಿನ ಭಾವನೆಗಳ
ಮಾತುಗಳು ಸುಂದರವಾಗಿ ಹೊರಹೊಮ್ಮಿಸಿರುವೆ.
ಸೂಪರ್
LikeLike
ಯಸ್. ಆ ಸರಳತೆ ಸದ್ಗುಣಗಳೇ ಸಾಧಾರಣನನ್ನು ಮಹಾತ್ಮನನ್ನಾಗಿಸಿದವು. ನಮನಗಳು ಪೂಜ್ಯ ಬಾಪೂಜಿಗೆ.
LikeLike