ಹಿಂದು ಹಿಂದಕ್ಕೆ ಮತ್ತು ಹಿಂದಕ್ಕೆ ಹೋಗಿ
ನಾ ಕಾಲ ಗಭ೯ದೊಳು ಲೀನವಾಗಬೇಕು

ಮತ್ತೆ ತಾಯ ಗಭ೯ದೊಳು ಸೇರಿ
ನವಮಾಸಗಳ ಕಳೆದು
ಮುದ್ದು ಮಗುವಾಗಿ
ಜಗವ ನಾ ಕಾಣಬೇಕು

ಅಮ್ಮನ ಜೋಗುಳದ ಹಾಡ ಸವಿಯುತ್ತ
ಅಪ್ಪನ ಅಪ್ಪುಗೆಯಲಿ ಮೈ ಮರೆಯುತ್ತ

ಅಕ್ಕ, ಅಣ್ಣಂದಿರ ಒಲುಮೆ ನಲ್ಮೆಯ,ಮಗದೊಮ್ಮೆ ಆ ಮಮತೆಯ ಸವಿಯುಣ್ಣಬೇಕು

ಓ ಕಾಲವೇ… ಮರಳಿ ಬರುವೆಯಾ
ಬರಲಾರೆ ಎಂಬ ಅರಿವಿದ್ದರೂ ಕರೆಯುವೆ ಮನದ ಭಾವನೆಗಳಿಗೆ ಬಣ್ಣ ಬಳಿಯುತ್ತಾ
ಓ ಕಾಲವೇ ..‌‌‌‌‌…..ಮರಳಿ ಬಾ…….

            🔆🔆🔆

✍️ ವಾಣಿ ಶೆಟ್ಟಿ, ಮುಂಬೈ .