ಅಂಧಕಾರದಲ್ಲಿ ಮೊಳಗಿವೆ ಶಾಲಾ ಕಟ್ಟಡಗಳು
ಖಾಲಿ ಖಾಲಿಯಾಗಿವೆ ಮಕ್ಕಳಿಲ್ಲದೆ ಶಾಲೆಗಳು
ಮಕ್ಕಳ ಕೂಗಿಲ್ಲದೆ ಶಾಲೆಗಳೆಲ್ಲ ಕಂಗಾಲಾಗಿವೆ
ಜ್ಞಾನ ಹಂಚುವ ಕೆಲಸಗಳು ನಿಂತು ಹೋಗುತಿವೆ..!

ಮೂಕವಾಗಿವೆ ಶಾಲಾ ಗೇಟಿನ ಕಿಲಿ ಕೊಂಡಿಗಳು
ಬಿಕ್ಕಳಿಸುತ್ತಿವೆ ಕೊಠಡಿಯ ಬಾಗಿಲಗಳು
ಮಕ್ಕಳ ಸದ್ದು ಕೇಳದೆ ಆವರಣಗಳೆಲ್ಲ ಸ್ಥಬ್ಧವಾಗಿವೆ
ಮಕ್ಕಳಿಲ್ಲವೆಂದು ಶಾಲೆಗಳೆಲ್ಲ ಬಿಕ್ಕಿ ಬಿಕ್ಕಿ ಗೋಗರಿಯುತ್ತಿವೆ..!

ಸಪ್ಪಗಾಗಿವೆ ಕಪ್ಪು ಹಲಗೆಗಳು
ಬಿದ್ದ ಜಾಗದಲ್ಲಿ ಸತ್ತು ಹೋಗಿವೆ ಕಡವಗಳು
ಯಾರ ಧನಿಯು ಕೇಳದ ಗೊಡೆಗಳೆಲ್ಲ ಬಿದ್ದೋಗಿವೆ
ಮೇಷ್ಟ್ರು-ಮಕ್ಕಳಿಲ್ಲದೆ ಶಾಲೆಗಳೆಲ್ಲ ಅನಾಥವಾಗಿವೆ..!

ಕಾಣದಾಗಿವೆ ಕಣ್ಣಿಗೆ ಆಟ-ಪಾಟಗಳು
ಮೂಲೆ ಗುಂಪಾಗಿ ಸೇರಿವೆ ಪುಸ್ತಕಗಳು
ಪೆನ್ನು ಪೆನ್ಸಿಲಗಳು ಮೂಡದೆ ಮರೆಯಾಗಿವೆ
ಇದ್ದು ಇಲ್ಲದಂತೆ ಶಾಲೆಗಳು ಹಾಗೆ ಉಳಿದಿವೆ..!

ಮುಚ್ಚಿವೆ ಕರೋನದಿಂದ ಶಾಲೆಗಳು
ಬೇಡಿ ಹಾಕಿ ಕಿಲಿ ಬಿದ್ದಿವೆ ಕಲಿಕೆಗಳು
ಕಲಿಯುವ ಮಕ್ಕಳು ಲಾಕಪ್ಪನಂತೆ ಮನೆಯಲ್ಲಿ ಕುಳಿತಿವೆ
ಮುಚ್ಚಿರುವುದು ತೆರೆಯರಿ ಮಕ್ಕಳು ಕರೆಯಿರಿ ಎಂದು
ಶಾಲಾ ಕೊಠಡಿಗಳೆಲ್ಲ ಒಂದೆ ಸಮನೆ ಅಳುತ್ತಿವೆ..!

     ‌          🔆🔆🔆

✍️ರಾಕೇಶ ಹಿರೇಮನಿ(ರಾವಿಹಿ)
ಯುವಕವಿ ಮತ್ತು ಕಲಾವಿದ, ಗದಗ