ಅಕ್ಕನಲಿ ಉಕ್ಕಿಬರುವ
ಭಕ್ತಿ-ಭಾವ ಸಾರ
ಅಕ್ಕನ ನಡೆಗೆ
ಅಕ್ಕನ ನುಡಿಗೆ,
ಭಾವಪರವಶೆನಾದೆ.
ಜ್ಞಾನದ ಧ್ಶಾನದ
ಗಣಿಯೇ ಆ ಚಿನ್ಮಯಿ
ಸಾಗರದಷ್ಟು ಸಂಪತ್ತು
ಆಕಾಶದಷ್ಟು ಅಂತಸ್ತು
ಹಂಗಿನರಮನೆಯ
ಡಂಬವ ಧಿಕ್ಕರಿಸಿ
ತವರು ತೊರೆದು ನಡೆದಳು.
ಉಟ್ಟು ಬಟ್ಟೆಯಲಿ
ದೂರ ದಾರಿ ಹಿಡಿದು
ಕಾಡುಮೇಡು ಅಲೆದು
ಪಾರಮಾರ್ಥದ ಹಸಿವಿನ ಹೊರೆಹೊತ್ತು
ಕೂಗಿತ್ತು ಕಲ್ಶಾಣ
ಶರಣರ ಜ್ಞಾನ ದಾಸೋಹದತ್ತ
ಬಸವ-ಅಲ್ಲಮನ ಸಾನಿಧ್ಶದತ್ತ
ನಡೆದಳು ನುಡಿದಳು.
ರೂಹಿಲ್ಲದ ಕೇಡಿಲ್ಲದ ಸಾವಿಲ್ಲದ
ಶ್ರೀಚನ್ನಮಲ್ಲಿಕಾರ್ಜುನನ
ಸಾಕ್ಷಾತ್ಕಾರದ ಒಲ್ಮೆಗೆ
🔆🔆🔆
✍️ ಅಮರ್ಜಾ (ಅಮರೇಗೌಡ ಪಾಟೀಲ).ಕುಷ್ಟಗಿ