ಮೈಯ ದಂಪತಿಗಳು ಮೂಲತಃ ದಕ್ಷಿಣ ಕನ್ನಡದವರು. ಕಳೆದ ಅದೆಷ್ಟೋ ವರ್ಷ ಗಳಿಂದ ಅಮೇರಿಕೆಯ ಡೇರಿಯನ್ – ಇಲಿನಾಯ್ ನಲ್ಲಿ ನೆಲೆಸಿ ವೃತ್ತಿ – ಪ್ರವೃತ್ತಿ ಗಳಲ್ಲಿ ಮೇಲುಗೈ ಸಾಧಿಸಿ ಅಮೇರಿಕೆಯ ಆ ನೆಲದಲ್ಲಿ ಕನ್ನಡದ ಕಂಪನ್ನು ಸೂಸಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹದಾಯಕ ರಾಗಿರುವರು.

ಸುಬ್ರಾಯ ಮೈಯ ತಮ್ಮ ಹಾಸ್ಯ ಲೇಖನ ಗಳ ಮೂಲಕ ಓದುಗರ ಗಮನ ಸೆಳೆದಿರು ವರು.ಇವರ ಬರಹಗಳು ಅಮೆರಿಕನ್ನಡ ಹಾಗೂ ಶಿಕಾಗೋ ನಗರದ ಸಂಗಮ ಪತ್ರಿಕೆಗಳಲ್ಲಿಮತ್ತು ದಟ್ಸಕನ್ನಡಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ. ನ್ಯೂಯಾರ್ಕ್ ನಲ್ಲಿರುವಕೊಲಂಬಿಯ ಮತ್ತು ಕಾರ್ನೆಲ್ ಯೂನಿವರ್ಸಿಟಿಗಳಲ್ಲಿ ಎಮ್.ಎಸ್. & ಪಿಎಚ್ಡಿ ಪಡೆದ ಇವರು ಆರ್ಗಾನ್ ನ್ಯಾಶನಲ್ ಲ್ಯಾಬೊರೇಟರಿ ಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿರುತ್ತಾರೆ.

” ಗಂಟೆ ದಾಸನ ಕಥೆಗಳು “ ಇದು ಇವರ ನಗೆ ಬರಹಗಳ ಸಂಕಲನ. ತನಗೆ ಬದುಕಲ್ಲಿ ಸೀರಿಯಸ್ ಆಗಿರೋಕೇ ಆಗುತ್ತಿರಲಿಲ್ಲ. ಹೀಗೇ ಹಾಸ್ಯದ ಕಡಲಲ್ಲೇ ತೇಲುತ್ತಿರುವ ದನ್ನು ಕಂಡುಂಡ ನನ್ನ ಶ್ರೀಮತಿಯವರು
ಈ ಎಲ್ಲವನ್ನೂ ಸೇರಿಸಿ ಲೇಖನ ಬರೆ ಎಂದು ತಾಕೀತು ಮತ್ತು ಕಟ್ಟಪ್ಪಣೆ ಮಾಡಿ, ನನಗೇ ಗೊತ್ತಿಲ್ಲದಂತೆ ಪತ್ರಿಕೆಗೆ ಕಳುಹಿಸಿ ನನ್ನನ್ನೊಬ್ಬ ಲೇಖಕನನ್ನಾಗಿ ಮಾಡಿದ ಶ್ರೇಯಸ್ಸು ತನ್ನ ಧರ್ಮಪತ್ನಿಗೆ ಸಲ್ಲಬೇಕು ಎಂದು ಮನಸಾರೆ ಹೆಂಡತಿಯನ್ನು ನೆನೆದಿರುವರು.

ಈ ಹಾಸ್ಯದ ಪುಸ್ತಕವನ್ನು ಗದ್ಯ – ಪದ್ಯ ಗಳಾಗಿ ವಿಂಗಡಿಸಿರುವರು. ಬದುಕಲಿ ತಾವು ಅನುಭವಿಸಿದ ದೈನಂದಿನ ದಿನಚರಿಯೇ ಈ ಬರಹದ ಮೂಲವಸ್ತು ಗಳಾಗಿವೆ. ಸರಾಗ ವಾಗಿ ಓದಿಸಿಕೊಂಡು ಹೋಗುತ್ತಿದೆ.

ಇವರ ನಗುವಿನ ಪರಿ ಕವಿತೆ ಹೀಗಿದೆ.

ಇರಾಕಿನಲ್ಲಿ ಉರುಳಿದ ಯೋಧರ ಹೆಣಗಳು
ಸಾವಿರಗಟ್ಟಲೆ ಬಂದು ಬೀಳುತಿದೆ ಅಮೆರಿಕಾದ ನೆಲದಲ್ಲಿ
ಅಲ್ಲಿ ಇರಾಕಿನಲ್ಲಿ ಲಕ್ಷಾಂತರ ಮಂದಿ
ನೊಂದವರು, ನರಳಿದವರು
ಸತ್ತವರು, ಅತ್ತವರು

ಆದರೂ ಟೀವಿಯಲಿ ಕಾಣುತಿದೆ ಪ್ರೆಸಿಡೆಂಟ್ ಬುಷ್
Mission accomplished ಎನ್ನುತ್ತ
ಭುಜ ಕುಣಿಸುತ್ತ ನಸುನಗುವ ಚಿತ್ರ
ನಿನ್ನ ನಗುವಿನ ಪರಿ ಏನು, ಮಿತ್ರ !

ಇನ್ನೊಂದು ಸಣ್ಣ ಕವಿತೆ

ಟು ಪ್ಲಸ್ ಟು ಎಷ್ಟು ?
ಎಂದಾಗ
ಟಕಟಕನೆ ಕ್ಯಾಲ್ಕುಲೇಟರ್ ಬಟನ್
ಒತ್ತಿ ಫೋರ್ ಎಂದ ಇಂದಿನ ಹುಡುಗ

ಹೀಗೆ ನಿತ್ಯ ಬದುಕಿನ ಸತ್ಯದ ವಿಡಂಬನೆ ಗಳೇ ತುಂಬಿದೆ ಇವರ “ಗಂಟೆ ದಾಸನ ಕಥೆಗಳು ” ನಗೆ ಬರಹದ ಸಂಕಲನದಲ್ಲಿ .

ನಳಿನಿ ಮೈಯ ಹೊರದೇಶದಲ್ಲಿದ್ದು ಇಂದು ಕನ್ನಡದಲ್ಲಿ ಬರೆಯುತ್ತಿರುವ ಪ್ರಮುಖ ಬರಹಗಾರ್ತಿ. ಪತಿ ಸುಬ್ರಾಯ ಮೈಯ ಅವರೊಡನೆ ಶಿಕಾಗೋ ನಗರದ ಸಮೀಪ ಡೇರಿಯನ್ – ಇಲಿನಾಯ್ನಲ್ಲಿ ನೆಲೆಸಿ ವೃತ್ತಿ ಯಲ್ಲಿ ಆಕ್ಯುಪೇಶನಲ್ ಥೆರಪಿಸ್ಟ್ ಆಗಿದ್ದು ಈಗ ನಿವೃತ್ತಿ ಹೊಂದಿರುತ್ತಾರೆ. ” ಮರೀಚಿಕೆ ಮತ್ತು ಇತರ ಕಥೆಗಳು “ ಇದು ಇವರಿಗೆ ಹೆಸರುತಂದ ಕಥಾಸಂಕಲನ. ನಾಗ್ ಐತಾಳ ರಂತಹ ಹಿರಿಯರೊಂದಿಗೆ ಸೇರಿ ಆ ನೆಲದಲ್ಲಿ ಕನ್ನಡದ ಹೂ ಅರಳಲು ನಗುಮೊಗದಿಂದ ಕನ್ನಡದ ಮನಕೆ ಕಣ್ಣಾಗಿರುವರು.

” ಬಂದೀತು ಆ ದಿನ “ ಇದು ನಳಿನಿಯ ವರ ಪ್ರಬಂಧಗಳ ಸಂಕಲನ. ಇಪ್ಪತ್ತೈದು ಬರಹಗಳಿರುವ ಈ ಪುಸ್ತಕವನ್ನು ಬೆಂಗಳೂರಿನ ” ಅಭಿನವ ” ದವರು ಪ್ರಕಟಿ ಸಿರುವರು.

ಕನ್ನಡದ ಹಿರಿಯ ಪ್ರಬುದ್ಧ ಬರಹಗಾರರಾದ
ಅ.ರಾ.ಮಿತ್ರ ಈ ಸಂಕಲನಕ್ಕೆ ‘ಕಡಲಾಚೆಯ ತಂಗಿ ನಳಿನಿ ಮೈಯ ‘ ಎಂಬ ಮುನ್ನುಡಿ ಬರೆಯುತ್ತಾ…..

ನಳಿನಿ ಮೈಯರ ಕಥನ ಕೌಶಲ್ಯ. ಎಷ್ಟು ಪ್ರಭಾವಶಾಲಿ ಎಂದು ತಿಳಿಯಲು ಅವರ “ಅಜ್ಜಿ ಹೇಳಿದ ಕಥೆ” ಒಂದು ಧ್ವನಿಪೂರ್ಣ ವಿವರಣೆಯಾಗಿದೆ. ಅದು ಯುರೋಪಿಯ ನ್ ರ ಬಿಗಿಮುಷ್ಟಿಗೆ ಸಿಲುಕಿದ ಕಪ್ಪು ಜನರ ಚರಿತ್ರೆಯೂ ಹೌದು.ವ್ಯಾಪಾರಕ್ಕೆಂದುಬಂದ ಬಿಳಿಯರು ಕ್ರಮೇಣ ಆಡಳಿತಗಾರರೂ ಆಗಿ ಪ್ರಚಂಡ ಮತಾಂತರವಾದಿಗಳೂ ಆಗಿ, ರೈಫಲ್ಗಳು ಆಟಿಕೆಯ ಕೋಲುಗಳಂತೆ ಮಿತಿಮೀರಿ ಬಳಸಿ ಅವರನ್ನೆಲ್ಲ ಗುಲಾಮ ರನ್ನಾಗಿ ಮಾಡಿಕೊಂಡು ದಬ್ಬಾಳಿಕೆ ಪ್ರದರ್ಶಿ ಸಿದವರು ಈ ಯೂರೋಪಿಯನ್ನರು, ಈ ವಲಸೆಗಾರರು ಬರುವಮುನ್ನ ದೇಶದಲ್ಲಿಯ ಜನ ಎಷ್ಟು ಪ್ರಕೃತಿ ಪ್ರಿಯರಾಗಿದ್ದರು, ಹೃದಯವಂತರಾಗಿದ್ದರು ಎಂಬುದನ್ನು ನಳಿನಿ ಮನೋಜ್ಞ ವಾಗಿನಿರೂಪಿಸಿದ್ದಾರೆ, ಎನ್ನುತ್ತಾ ಹರಟೆ ಅಥವಾ ಲಲಿತಪ್ರಬಂಧ ಗಳ ಜಾತಿಗೆ ಸೇರುವ ಈಕೆಯ ಬರವಣಿಗೆ ನನ್ನ ಮನಸ್ಸನ್ನು ಗೆದ್ದಿದೆ. ಎರಡು ಸಂಸ್ಕೃತಿ ಗಳ ಒಳನೋಟಗಳನ್ನು ಹರಡುವ ಕ್ರಿಯೆಯೇ ಅಲ್ಲದೇ ಎರಡರ ಸಮಾನತೆ ಗಳು, ಮನೋವೈವಿಧ್ಯತೆಗಳು, ಸಪ್ಪೆತನ, ಗಟ್ಟಿತನ, ಇಬ್ಬಂದಿತನಗಳು ಇವನ್ನೆಲ್ಲಾ
ತೂಕಕಿಟ್ಟು ನಿರ್ಧರಿಸುವ ಮೌಲ್ಯಮಾಪನ ಸಾಮರ್ಥ್ಯ, ಅವರ ಬರವಣಿಗೆಯಲ್ಲಿ ಢಾಳಾಗಿ ಮಿಂಚುತ್ತವೆ,ಎಂದಿರುವರು.

ಈ ದಂಪತಿಗಳನ್ನು ನಾಗಸುಧೆ ಮನಸಾ ಅಭಿನಂದಿಸಿ ತಮ್ಮಿಂದ ಇನ್ನೂ ಹೆಚ್ಚು ಕನ್ನಡಪರ ಕೆಲಸಕಾರ್ಯಗಳು ನೆರವೇರಿ ಆ ಇಂಗ್ಲಿಷ್ ನೆಲದಿಂದ ಹೊಸ ಹೊಸ ಕನ್ನಡ ಪ್ರತಿಭೆಗಳ ಅನ್ವೇಷಣೆ ಕನ್ನಡ ಪರ ಮನಸ್ಸು ಗಳಿಂದ ನಡೆಯಲಿ ಎಂದು ಹಾರೈಸುವೆವು. ಆ ನೆಲದಲ್ಲಿ ನಮ್ಮ ಇರುವಿಕೆಯ ಆ ದಿನ ಗಳಲ್ಲಿ ನಿಮ್ಮ ” ಮುಗುಳುನಗೆ ” ಗೆ ಕೃತಜ್ಞತೆಗಳು.

            🔆🔆🔆

✍️ ಪ್ರಕಾಶ ಕಡಮೆ, ನಾಗಸುಧೆ ಹುಬ್ಬಳ್ಳಿ