ಮಹಾವೀರನ ಮಹಾ ಯಶೋಗಾಥೆ
ಬಸವ, ಬುದ್ಧ, ಅಂಬೇಡ್ಕರ್, ಗಾಂಧಿ ಇವರೆಲ್ಲಾ ಸಮಾಜ ಸುಧಾರಣೆಗಾಗಿ ಪ್ರಮಾಣಿಕವಾಗಿ ಕಂಕಣಬದ್ದರಾಗಿದ್ದವರು. ಹೀಗೆ ಪ್ರಮಾಣಿಕತೆ,ಸತ್ಯಸಂಧತೆಯಿಂದ‌ ಹೋರಾಡುವವರನ್ನು ಸಮಾಜವೇನು ಸುಮ್ಮನೆ ಬಿಟ್ಟಿತೆ?! ಸಹಕಾರ ಕೊಡುವು ದಂತೂ ತುಂಬಾ ದೂರದಮಾತು. ಬದಲಾಗಿ ಸುಮ್ಮನೆಯೂ ಇರಲಾರದೆ ಅವರಿಗೆ ಸಾಕಷ್ಟು ಸಂಕಟಗಳನ್ನು ನೀಡಿ ಅವರು ಸಾಕಾಪ್ಪಾ ಈ ಸಮಾಜೋದ್ದಾರ ಎನ್ನುವಷ್ಟರ ಮಟ್ಟಿಗೆ ಅವರನ್ನುಹಿಂಸಿಸಿತ್ತು. ಆದರೂ ಪಟ್ಟು ಬಿಡದೆ ಬದಲಾವಣೆ ತರಲು ಅಣಿಯಾದ ಮಹಾನೀಯರು ಸಮಾಜದ ಪೊಳ್ಳು ಬೆದರಿಕೆಗಳಿಗೆ ಹೆದರದೆ ದಿಟ್ಟವಾಗಿ ಹೋರಾಡಿ ಅಜರಾಮರರಾದರು.

ಚಿಕ್ಕವಯವಸ್ಸಿನಲ್ಲೇ ಮನೆಯನ್ನು ತ್ಯಜಿಸಿ ಹೊರಟ ಮಹಾವೀರ ಸತ್ಯಾನ್ವೇಷಣೆಗಾಗಿ ಅನ್ನ ನೀರು, ಆಹಾರವನ್ನು ತ್ಯಜಿಸಿ ಕಡೆಗೆ ಮೈ ಮೇಲಿನ ಬಟ್ಟೆಗಳನ್ನೂ ‌ ತ್ಯಜಿಸಿ ದಿಗಂಬರನಾದ. ‌ ಜನರು ಇವನ ಮೇಲೆ ಕಲ್ಲು ತೂರಿದರು, ನಾಯಿಗಳನ್ನು ಛೂ ಬಿಟ್ಟರು, ಆದರೂ ವಿಚಲಿತನಾಗದೆ ಪ್ರಾಪಂಚಿಕ ದುಖಃಕ್ಕೆಪರಿಹಾರ ಹುಡುಕುತ್ತಾ ನಡೆದ.

ನಾವೆಲ್ಲಾ ಇತಿಹಾಸದಲ್ಲಿ ಓದಿದ್ದೇವೆ. ಕೊನೆಗೆ ಒಂದು ಪವಿತ್ರ ದಿನದಂದು ಋಜುಪಾಲಕ ನದಿಯ ದಂಡೆಯ ಋಜೃಂಬಿಕ ಗ್ರಾಮದ ಸಾಲುಮರದ ಅಡಿಯಲ್ಲಿ ಅವನಿಗೆ ಜ್ಞಾನೋದಯ ವಾಗಿ ಕೇವಲಿನ ಜ್ಞಾನ ವನ್ನು ಪಡೆದನು. ‘ಜಿನ’ ಎಂದರೆ ಪ್ರಾಪಂಚಿಕ ಸುಖ-ದುಖಃ ಗಳನ್ನು ಹತ್ತಿಕ್ಕಿ ದವನು. ಅಂದರೆ ರಾಗ ದ್ವೇಷಗಳನ್ನು ಗೆದ್ದವನು. ಇವನ ಅನು ಯಾಯಿಗಳೂ ಇವನನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು. ಆದ್ದರಿಂದ ಇವನ ಅನುಯಾಯಿ ಗಳನ್ನು ‘ಜೈನರು’ ಎಂದೂ ಇವನು ಬೋಧಿಸಿದ ಧರ್ಮಕ್ಕೆ ‘ಜೈನ ಧರ್ಮ’ ಎಂದು ಕರೆಯಲಾಯಿತು. ಮಹಾವೀರ ಅಥವಾ ವರ್ಧಮಾನ ಮಹಾ ವೀರನ ಕಾಲ ಸುಮಾರು ಕ್ರಿ.ಪೂ 599 ರಿಂದ 527. ಜೈನ ಧರ್ಮದ ನಿಜವಾದ ಸ್ಥಾಪಕನೆಂದು ಹೆಸರಾದ ವರ್ಧಮಾನ ಮಹಾವೀರನು 24 ನೇಯ ತೀರ್ಥಂಕರ. ವರ್ಧಮಾನ ಇವನ ಮೂಲ ಹೆಸರಾಗಿತ್ತು. “ಕೇವಲಿನ್” ಜ್ಞಾನ ಪಡೆದು ನಂತರ ಮಹಾವೀರನಾದ.

ಅವನು ವೈಶಾಲಿಯನ್ನು ಆಳುತ್ತಿದ್ದ ಕ್ಷತ್ರೀಯ ರಾಜ ಸಿದ್ದಾರ್ಥನ ಮಗ. ತಾಯಿ ತ್ರಿಶಲಾದೇವಿ. ಅವನು ಕುಂದಾಲ ಗ್ರಾಮ ದಲ್ಲಿ ಜನಿಸಿದನು. ಅವನು 18 ನೇಯ ವಯಸ್ಸಿನಲ್ಲಿ ಯಶೋಧರೆ ಯೊಂದಿಗೆ ವಿವಾಹವಾಗಿ ಅತ್ಯಂತ ಭೋಗ ಜೀವನ ದೊಂದಿಗೆ ಬೆಳೆದನು. ಕೊನೆಗೆ ಅನ್ಹೋಜ ಎಂಬ ಹೆಣ್ಣುಮಗುವಿನ ತಂದೆಯಾದನು. ಇಷ್ಟಾದರೂ ಸಾಂಸಾರಿಕ ಜೀವನದಲ್ಲಿ ತೃಪ್ತಿ ಕಾಣದೆ ತನ್ನ 30 ನೇಯ ವಯಸ್ಸಿನಲ್ಲಿ ಪರಿವ್ರಾಜಕನಾಗಿ ಅರಮನೆ ಯನ್ನು ತ್ಯಜಿ ಸಿದನು.ನಂತರ12 ವರ್ಷಗಳ ಕಾಲ ಘೋರ ತಪಸ್ಸನ್ನು ಆಚರಿಸಿ ಸತ್ಯಾ ನ್ವೇಷಣೆ ಗಾಗಿ ದೇಹವನ್ನು ದಂಡಿಸಿದನು. ಅನ್ನ, ಆಹಾರ ನೀರನ್ನು ತ್ಯಜಿಸಿ ಕೊನೆಗೆ ಬಟ್ಟೆ ಯನ್ನು ಹಾಕದೆ ನಗ್ನವಾಗಿ ಉಳಿದನು.

ಜೈನರ ನಂಬಿಕೆಯ ಪ್ರಕಾರ ಅನಾದಿಕಾಲ ದಿಂದಲೂ ಈ ಭೂಮಿ ದಿವ್ಯವಾಗಿತ್ತು. ಜೈನ ಧರ್ಮದ ಪರಿಭಾಷೆಯಲ್ಲಿ‘ಸುಷುಮಾ – ಸುಷಮಾ’ ಆಗಿತ್ತು. ಅಂದರೆ ಎಲ್ಲಾ ಕಡೆ ತೃಪ್ತಿ ಆನಂದ ನೆಲೆಸಿತ್ತು. ಕ್ರಮೇಣ ಕಲುಷಿ ತವಾಗಿ ‘ಸುಷಮಾ- ದುಷಮಾ’ ಅವಸ್ಥೆ ಉಂಟಾಯಿತು. ಬರಬರುತ್ತಾ ಪರಿಸ್ಥಿತಿ ಮತ್ತೂ ಹದಗೆಟ್ಟು ‘ದುಷಮಾ-ದುಷಮಾ’ ಅವಸ್ಥೆ ಬಂದು ಬಿಟ್ಟಿತು. ಈ ‘ದುಷಮಾ- ದುಷಮಾ’ ಅವಧಿಯಲ್ಲಿಬರಿ ದುಖಃ ದೌರ್ಮನಸ್ಯ, ಅಶಾಂತಿ,ನೀಚತನ ಇತ್ಯಾದಿ ಗಳು ಹೆಚ್ಚಾಗಿ ಹೋದವು. ಮತ್ತೆ ಜನ ಜೀವನ ಶಾಂತ ವಾದ ‘ಸುಷಮಾ-ಸುಷಮಾ’ ಸ್ತರಕ್ಕೆ ಸೇರ ಬೇಕು ಎನ್ನುವುದು ಜೈನ ಧರ್ಮದ ಪ್ರಧಾನ ಉದ್ದೇಶವಾಗಿದೆ.

ಧರ್ಮ ಪ್ರಚಾರಕ್ಕಾಗಿ ಮಹಾವೀರ ರಾಜ ಗೃಹ, ಚಂಪ, ಅಂಗ, ಮಗದ, ಮಿಥಿಲಾ ಮತ್ತು ಕೋಸಲಾ ರಾಜ್ಯಗಳಲ್ಲಿ ಸಂಚರಿಸಿ ಧರ್ಮ ಪ್ರಚಾರ ಮಾಡಿದನು. ತನ್ನ ಮತ ಪ್ರಚಾರಕ್ಕಾಗಿ ಜೈನಸಂಘ ವನ್ನು ಸ್ಥಾಪಿಸಿ ದನು. ಮಗಧದ ಬಿಂಬಸಾರ ಮತ್ತು ಅಜಾತ ಶತೃರವರ ಸ್ನೇಹವನ್ನು ಸಂಪಾದಿಸಿ ದನು. ಮಹಾವೀರನು ಕ್ರಿ.ಪೂ. 527 ರಲ್ಲಿ ಬಿಹಾರಿನ ಪಾವ ಎಂಬಲ್ಲಿ ನಿರ್ವಾಣ ಹೊಂದಿದನು. ಆಗ ಮಹಾವೀರನಿಗೆ 1400 ಜನ ಶಿಷ್ಯರಿದ್ದರು. ಜೈನ ಧರ್ಮದ ತತ್ವ ಗಳನ್ನು ಜೈನರ ಪವಿತ್ರ ಗ್ರಂಥಗಳಾದ 12 ಜೈನ ಅಂಗಗಳಲ್ಲಿ ಕಾಣುತ್ತೇವೆ. ಆಚಾರಾಂಗ, ಉಪಾಂಗ, ದವಳ, ಜಯ ದವಳ, ಕಲಿಕ, ಉತ್ಕಲಿಕ ಇವುಗಳಲ್ಲಿ ಪ್ರಮುಖವಾ ದವು. ಮಹಾವೀರ ಹೊಸ ಧರ್ಮವನ್ನೇನೂ ಸ್ಥಾಪಿಸಲಿಲ್ಲ. ಆದರೆ ಈಗಾಗಲೇ ಇರುವ ಧರ್ಮದಲ್ಲೆ ಸಾಕಷ್ಟು ಸುಧಾರಣೆಯನ್ನು ತಂದನು.

ಪಾಶ್ವನಾಥ ಬೋಧಿಸಿದಂತ ನಾಲ್ಕು ತತ್ವ ಗಳಿಗೆ ಮಹಾವೀರ ತನ್ನ ಐದನೆಯ ತತ್ವ ವನ್ನು ಸೇರಿಸಿದ. ಪಾಶ್ವನಾಥ ಬೋಧಿಸಿದ ನಾಲ್ಕು ತತ್ವಗಳು:

1) ಅಹಿಂಸೆ 2)ಸತ್ಯ3)ಕದಿಯದಿರುವುದು 4)ಅಪರಿಗ್ರಹ ಹೀಗೆ ಇದಕ್ಕೆ ಐದನೆಯ ದಾದ ಬ್ರಹ್ಮಚರ್ಯವನ್ನು ಸೇರಿಸಿ ಬೋಧಿಸಿದನು.

ಮಹಾವೀರ ಮುಖ್ಯವಾಗಿ ಕರ್ಮ ಮತ್ತು ಪುನರ್ ಜನ್ಮದಲ್ಲಿ ನಂಬಿಕೆಯನ್ನುಹೊಂದಿ ದ್ದನು. ಆತ್ಮದ ಕರ್ಮ ಫಲದಿಂದಾಗಿ ಅದು ಮತ್ತೆ ಮತ್ತೆ ಜನಿಸುತ್ತದೆ.ಮುಕ್ತಿ ಪಡೆಯಲು ನೈತಿಕವಾದ ಪರಿಶುದ್ಧ ಜೀವನ ಅಗತ್ಯ ವೆಂದು ಹೇಳಿದನು. ಈ ರೀತಿಯ ಮೋಕ್ಷ ಸಾಧನೆಗೆ ಮಹಾವಿರ ಬೋಧಿಸಿದ ತ್ರೀರತ್ನಗಳನ್ನು ನಾವು ಬಾಲ್ಯದಿಂದಲೂ ಓದುತ್ತಾ ಕೇಳುತ್ತಲೆ ಬಂದಿದ್ದೇವೆ.

ಸಮ್ಯಕ್ ಜ್ಞಾನ, ಸಮ್ಯಕ್ ನಂಬಿಕೆ, ಸಮ್ಯಕ್ ನಡತೆ ಅಥವಾ ಜೀವನ

ಇವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದೇ ಆದಲ್ಲಿ ಮೋಕ್ಷ ಖಂಡಿತಾ ಎಂದು ಸಾರಿ ದನು. ಮಹಾವೀರನು ದೇವರ ಅಸ್ಥಿತ್ವವನ್ನು ಒಪ್ಪಲಿಲ್ಲ. ದೇವರು ಸೃಷ್ಟಿಕರ್ತನೆಂದು ಸಹ ಒಪ್ಪಲಿಲ್ಲ.ಮಾನವನಬದುಕು ದುಖಃದಿಂದ ಕೂಡಿದ್ದು ಅದರಿಂದ ಅವನನ್ನು ಪಾರು ಮಾಡಲು ಗಮನ ಹರಿಸಿದನು. ಅವನು ಬ್ರಾಹ್ಮಣರ ಮತ್ತು ವೇದಗಳ ಪ್ರಭುತ್ವವನ್ನು ಖಂಡಿಸಿದನು. ಜಾತಿ ಪದ್ದತಿಯನ್ನು ಖಂಡಿಸಿ ಸಮಾನತೆಯನ್ನು ಬೋಧಿಸಿದನು.

ಪ್ರತಿ ಜೀವಿಯಲ್ಲೂ ಜೀವವಿರುವುದಿಂದ ಹಿಂಸೆ ಮಾಡಬಾರದು. ಅಹಿಂಸೆ ಪರಮ ಧರ್ಮ ಎಂಬುದನ್ನು ಸಾರಿದನು. ಪ್ರಾಣಿ ಬಲಿ, ಯಜ್ಞ, ಯಾಗಾದಿಗಳನ್ನು ವಿರೋಧಿಸಿ ದನು. ಅತಿಯಾದ ಸಂಪತ್ತನ್ನು ಹೊಂದಿರು ವುದನ್ನು ವೀರೋಧಿಸಿದನು. ಪ್ರಕೃತಿಗೆ ಅನುಕೂಲವಾಗಿ ಬದುಕುವುದನ್ನು ಮಹಾವೀರ ಬೋಧಿಸಿದನು. ಸಸ್ಯಗಳನ್ನು ಹಿಂಸಿಸ ಬಾರದು ಎನ್ನುವ ತತ್ವ ಮಹಾವೀರ ನದಾಗಿತ್ತು. ಮಹಾವೀರನ ಈ ಅಮೂಲ್ಯ ವಾದ ಈ ತತ್ವ ಎಲ್ಲಡೆಯೂ ಹೆಚ್ಚು ಹೆಚ್ಚು ಪ್ರಚಾರ ವಾಗಲಿ ಮತ್ತು ಎಲ್ಲರೂ ಅಹಿಂಸಾ ಧರ್ಮ ವನ್ನು ಕಟ್ಟು ನಿಟ್ಟಾಗಿ ಅನುಸರಿಸಲಿ ಎಂದು ಆಶಿಸೋಣ.

              🔆🔆🔆

✍️ಶ್ರೀಮತಿ. ಗಿರಿಜಾ ಮಾಲಿಪಾಟೀಲ್ ವಿಜಯಪೂರ