ಹೆಣ್ಣೊಂದು ನೋವಲ್ಲಾ ಹೂವು
ಹೆಣ್ಣೆಂದರೆ ಕೊರಗಲ್ಲಾ ಒಲವು |ಪ|

ಅವಳೊಂದು ಮನೆಯ ನಂದಾದೀಪ
ಜನಿಸಿದಾಗ ಹೆತ್ತವರಿಗೆಂದರು ಪಾಪ
ಬೆಳೆದಾಗ ಹೇಳಿದರು ಅವಳು ಭಾರ
ಅವಳಿಗಾಯಿತು ಆಗ ನೋವು ತೀರ |1|

ಮದುವೆಯ ನಂತರವೇ ತವರಿನಲ್ಲಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದರು
ಕೈ ಹಿಡಿದ ಪತಿಯ ಮನೆ ಸೇರಿದಲ್ಲಿ
ಮಗ ನಮ್ಮವನಾದರೂ ಸೊಸೆ ನಮ್ಮವಳಾ ಎಂದರು |2|

ಅತ್ತೆ ಮನೆಯಲ್ಲವಳು ಮೆಚ್ಚುಗೆಗೆ
ದಿನವಿಡೀ ಶ್ರಮದಿ ಶ್ರಮಿಸುವಳು
ಪತಿಯ ತೋಳಿನಲ್ಲಿ ಅಪ್ಪುಗೆಗೆ
ತನ್ನ ನೋವನ್ನೆಲ್ಲ ಮರೆಮಾಚುವಳು|3|

ತಾಯ್ತನದಲ್ಲಿ ತನಗಾದ ಆ ನೋವನ್ನೆಲ್ಲ
ಮರೆತು ಮಗು ನೋಡಿ ಆನಂದಿಸುವಳು
ತಾನುಂಡ ಬದುಕಿನ ಬವಣೆಗಳನ್ನೆಲ್ಲ
ತನ್ನಲ್ಲಿ ಬಚ್ಚಿಟ್ಟು ಮೊಗದಲಿ ನಗು ಬೀರುವಳು |4|

             🔆🔆🔆

✍️ ಸುಧಾ ಕಂದಕೂರ, ಹುಬ್ಬಳ್ಳಿ