ನನ್ನ ಹೃದಯವನು ವಂಚಿಸುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ
ನನ್ನ ಯೌವ್ವನವನು ಕಸಿಯುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ

ನನ್ನ ಬಡತನವನು ತಿಳಿಯದಷ್ಟು ನಾ‌ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ
ನನ್ನ ವ್ಯಾಕುಲವನು ಮರೆಯುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ

ನನ್ನ ಅಂತರಾಳವನು ಅಗೆಯದಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ
ನನ್ನ ಅನುಕಂಪವನು ಪಡೆಯದಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ

ನನ್ನ ಮುಖವೀಣೆಯನು ಸಹಿಸದಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ
ನನ್ನ ಅನುರಾಗಪಲ್ಲವಿಯನು ನಿರ್ಲಕ್ಷಿಸುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ

ನನ್ನ ಬಾಳ ದೀವಿಗೆಯನು ಆರಿಸುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ
“ಜಾಲಿ” ನನ್ನ ಸರ್ವಸ್ವವನು ಧಾರೆಯೆರೆಯುವಷ್ಟು ನಾ ನಿನ್ನ ಪ್ರೀತಿಸಿರಲಿಲ್ಲ ಆದರೂ ಹೃದಯಕದ್ದೆ

       🔆🔆🔆                    ✍️ ವೇಣು ಜಾಲಿಬೆಂಚಿ,ರಾಯಚೂರು.