ಕತ್ತಲಾಗಿದ್ದ ಬದುಕುವ ಮನೆಯ ಬಿಕ್ಕಳಿಕೆ ನಿಲ್ಲಿಸಲೇ
ಬತ್ತಿಗೆ ಬೆಳಕು ಉರಿವ ಚಿತೆಯ ಕಿಚ್ಚನು ತರಲೇ

ಕಣ್ಣಲ್ಲಿ ಜಿನುಗುತ್ತಿರುವ ಹನಿಗಳ ಧಾರೆ ನಿಲ್ಲಿಸಲೇ
ಆಯ್ಕೆಗಿಲ್ಲ ಅವಕಾಶವ ನಾಲ್ಕು ಹೆಗಲು ಹುಡುಕಲೇ

ಹೆಜ್ಜೆಗಳ ಮುಂದೆ ಇಡುವ ತಪ್ಪಿಗೆ ಮತ್ತೇ ಮತ್ತೇ ಬೀಳಲೇ
ಅನುಭವಿಸಿದ ನೋವ ಹಾಗೆಯೇ ಸುಮ್ಮನೆ ಮರೆಯಲೇ

ಸಿಗದ ಪ್ರಶ್ನೆಗಳಿಗೆಲ್ಲ ಉತ್ತರವ ಎರವಲು ಪಡೆಯಲೇ
ಉಳಿದ ಒಂದು ಜೀವವ ಅದನ್ನೂ ಈಗ ಮುಗಿಸಿಬಿಡಲೇ

ಮತ್ತದನ್ನೇ ಚಿಂತಿಸುತ್ತಿರುವ ಮನಸ್ಸನ್ನು ಮುರಿಯಲೇ
ತಾಯಿ ಹೃದಯದ ಆಳವ ಮುರಿದ ಕೈಯಿಂದ ಅಳೆಯಲೇ

‌‌ ‌ ‌🔆🔆🔆

✍️ ರೇಮಾಸಂ, ಹುಬ್ಬಳ್ಳಿ (ಡಾ.ರೇಣುಕಾತಾಯಿ.ಸಂತಬಾ)