ಕ್ಷಮಿಸಿ ಬಿಡು ತಾಯಿ
ಮನುಷ್ಯರಲ್ಲದ ನಾವುಗಳು
ಉಳಿಸಲಾಗಲಿಲ್ಲ ನಿನ್ನ
ಜೀವನದ ರುಚಿ ನೋಡುವ ಮುನ್ನವೇ
ನಿನ್ನ ಜೀವ ಹಿಂಡಿದೆವಲ್ಲ…

ಕ್ಷಮಿಸಿ ಬಿಡು ತಾಯಿ
ಅಂದಾಗಿದ್ದು ನಿನ್ನ ಶೀಲ ಹರಣವಲ್ಲ
ಮನುಷ್ಯ ಜಾತಿಯ ಕ್ರೂರ ನರ್ತನ
ಮತ್ತದೆ ಹೆಣ್ಣಿನ ರೋಧನ ನೋಡುವ ನಾವು ಪಾಠ ಕಲಿಯಲಿಲ್ಲವಲ್ಲ…

ಕ್ಷಮಿಸಿ ಬಿಡು ತಾಯಿ
ಎಷ್ಟು ನೋವಾಗಿರಬೇಡ ಹೆತ್ತವರಿಗೆ
ನಿನ್ನ ಕಿರುಚಾಟವ ನೆನೆದು
ಕ್ಷಮೆ ಕೇಳಲು ಅರ್ಹರಲ್ಲ ನಾವು
ಮನುಷ್ಯತ್ವ ಇಲ್ಲದ ಹೇಡಿಗಳು…

ಕ್ಷಮಿಸಿ ಬಿಡು ತಾಯಿ
ನೀ ಕಣ್ಮುಚ್ಚಿರುವುದೇ ಲೇಸೆಂದು ಹೇಳುವೆ
ಈ ಹೊಲಸ್ಸು ರಾಜಕೀಯದ ಜಂಜಾಟದಲಿ
ನಿನ್ನ ತಜೋವಧೆ ಮಾಡಲು ಕಾಯುತಿದ್ದರು
ತಮ್ಮ ಮನೆಯ ಹೆಣ್ಮಕ್ಕಳ ಮರೆತು…

               🔆🔆🔆

✍️ರೋಶನ್ ಜಮೀರ್. ನ. ಶಿರಗುಪ್ಪಿ ಹುಬ್ಬಳ್ಳಿ