ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಈ ಕಿರುಲೇಖನ..

ಒಂಟಿಗೆ ಒಂಟಿಯಂತೆ ಜೋಪಾನ ಮಾಡುವ ಒಲವಿನ ಬಂಧು ಪುಸ್ತಕ, ಮಸ್ತಕದ ಒಡಲಾಳದಲ್ಲಿ ದೊಸ್ತಿ ಬಯಸಿ ಧೈರ್ಯ ತುಂಬುವ ಪುಸ್ತಕ ಇತಿಹಾಸಕ್ಕೆ ನಾಡಿ ಮಿಡಿತ,ಮೈಯಲ್ಲಿ ಹರಕು ಇದ್ಧರೂ ಚಿಂತೆಯಿಲ್ಲಾ ಕೈಯಲ್ಲಿ ಒಂದುಪುಸ್ತಕವಿರಲಿ ಎಂಬ ಮಹಾತ್ಮರ ಸಂದೇಶ ಪುಸ್ತಕ ಬಗೆಗಿನ ಮೌಲ್ಯವನ್ನು ತೋರ್ಪಡಿಸುತ್ತದೆ. ಪುಸ್ತಕ ಕೇವಲ ಒಂದು ಮಾಧ್ಯಮವಲ್ಲಾ ಮನುಕು ಲದ ದಾರಿದೀಪ,ಮುನ್ನಡೆಗೆ ಪುರಸ್ಕರಿಸುವ ಹೆಜ್ಜೆ ಗುರುತು.

ಆಚರಣೆ ಜಾರಿಗೆ ಬಂದಿದ್ಧು ವೈಶಿಷ್ಟ್ಯ ಪೂರ್ಣ

ಪ್ರತೀ ವರ್ಷ ಏಪ್ರಿಲ್ 23 ರಂದು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯದ ದಿನ(ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದು ಕರೆಯುತ್ತಾರೆ)ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೊ)1995ರಲ್ಲಿ ಮೂದಲ ಬಾರಿಗೆ ಓದುವಿಕೆ,ಪ್ರಕಾಶನ ಮತ್ತು ಕೃತಿ ಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೆಸ್ಕೋ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥಾವ ಗತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕರನ್ನು ಗೌರವಿಸುವ ಹಂಬಲ ಹೊಂದಿದೆ.ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು,ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು,ಶಾಲಾ ಕಾಲೇಜ್ಗಳು,ವಿಶ್ವವಿದ್ಯಾಲಯಗಳು,ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆ ಗಳು ಈ ದಿನಾಚರಣೆಯಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವವನ್ನು ಸಾರಿವೆ. ಈ ದಿನದಂದು ವಿಲಿಯಂ ಶೇಕ್ಸ್‌ಪಿಯರ್‌ ರವರ ಪುಣ್ಯ ತಿಥಿಯನ್ನು ಆಚರಿಸುವರು.ಇದು ವೆಲಿನ್ಸಿಯಾದ ಬರಹಗಾರ ವಿನ್ಸೆಂಟ್ ಕ್ವವೆಲ್ ಆಂಡ್ರ್ಯೂ , ಮೈಕಲ್ ಸರ್ವಾಂಟಿಸ್ ಮತ್ತು ಇಂಕಾ ಗಾರ್ಸಿ, ಲಾಸೋ ದಿ ಲವೆಗಾ ಮುಂತಾದ ಮಹನೀಯರ ದಿನ. ಪ್ರತಿ ಭಾಷೆಯ ಇತಿಹಾಸ ಸಂವರ್ಧನೆಯ ಚಟುವಟಿಕೆಗಳು ನಡೆಯಲ್ಪಡುತ್ತವೆ, ಜಗತ್ತಿನಾದ್ಯಂತ ಪುಸ್ತಕಗಳ ಇತಿಹಾಸವೇ ಮರುಕಳಿಸುತ್ತದೆ.

ಪುಸ್ತಕಗಳ ಮಹತ್ವ

ಪುಸ್ತಕಗಳು ಇತಿಹಾಸದ ಪ್ರತೀಕಗಳು, ಅಷ್ಟೇ ಅಲ್ಲದೆ ಮುಂದಿನ ಯುಗದ ಮೈಲು ಗಲ್ಲುಗಳು. ಲೋಕ ಸೌಹರ್ದತೆ,ಸಾಂಸ್ಕೃತಿಕ ನೆಲೆಯನ್ನು ಕಲ್ಪಿಸುವದಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಮುನ್ನಡೆಯುವಂತೆ ಮಾಡು ತ್ತವೆ.ಆತ್ಮ ಸ್ಥೈರ್ಯ ತುಂಬುವ, ಎಲ್ಲರನ್ನೂ ಎಲ್ಲವನ್ನೂ ಗೌರವಿಸುವ ಪ್ರೀತಿಸುವ ಔದಾರ್ಯವನ್ನು ಪುಸ್ತಕಗಳು ಕಲಿಸುತ್ತವೆ. ತಲೆ ತಗ್ಗಿಸಿ ನೋಡು ತಲೆ ಎತ್ತುವಂತೆ ಮಾಡುತ್ತೇನೆ ಎಂದು ಪುಸ್ತಕಗಳು ಉಚ್ಚರಿ ಸುತ್ತವೆ, ಪುಸ್ತಕವೊಂದು ಹತಾಶನ ಹೃದ ಯಕ್ಕೆಆಶಾಕಿರಣವಾಗಬಲ್ಲದು,ಆಶಾವಾ ದಿಯ ಜೀವನಕ್ಕೆ ಚೈತನ್ಯದ ಚಿಲುಮೆಯಾಗ ಬಲ್ಲದು,ಓದುವುದರಿಂದ ದಕ್ಕಿಸಿಕೊಳ್ಳುವ ಪ್ರಕ್ರಿಯೆಗೆ ಒಯುತ್ತದೆ, ನಮ್ಮ ಆಚಾರ, ವಿಚಾರ, ಆಳ,ಎತ್ತರ, ಪರಿಚಯಸುತ್ತವೆ, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ತುಂಬುತ್ತವೆ, ನೈಜ ಗುರಿಯಡೆಗೆ ಹೋಗಲು ಪುಸ್ತಕಗಳು ಸೇತುವೆಯಾಗುತ್ತವೆ.

ಪುಸ್ತಕಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ?

ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಪ್ರಮುಖವಾದ ವಿಧಾನ.ಅಕ್ಷರಗಳು ಕಾಗುಣಿತಾಕ್ಷರಗಳನ್ನು ಕಲಿತಾದ ಮೇಲೆ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸ ಬೇಕು. ಯಾವುದೇ ಜೀವನ ಆಧರಿತ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಸಮಾಜಮುಖಿಯ ವಿವಿಧ ಸ್ತರಗಳಲ್ಲಿ ಪ್ರಾಪಂಚಿಕ ಪುಸ್ತಕಗಳು ಅವಶ್ಯವಾಗಿವೆ, ಮೌಲ್ಯಾಧಾರಿತ ನಡೆಗೆ ನುಡಿ ಗಟ್ಟಿನ ಪುಸ್ತಕ ಗಳು ಅಗತ್ಯ, ಆಯಾ ಆಯಾಮದ ಬದು ಕಿನ ವೃತ್ತಗಣುಗುಣವಾಗಿ ಪುಸ್ತಕ ಪಡೆಯು ವುದು ಅವಶ್ಯ.

ಉಚಿತ ಗ್ರಂಥಾಲಯಗಳು

ಸಾರ್ವಜನಿಕರಿಗೆ ಉಚಿತವಾಗಿ ಸೇವೆ ಒದಗಿಸಲು ಗ್ರಂಥಾಲಯಗಳು ತಲೆ ಎತ್ತಿ ನಿಂತಿವೆ, ಪ್ರಪಂಚದ ತುಂಬೆಲ್ಲಾ ಅನ್ನ ಪ್ರಸಾದಕ್ಕಿಂತಲೂ ಪುಸ್ತಕ ದಾಸೋಹ ಎಲ್ಲಡೆ ನಡೆಯುತ್ತದೆ, ವಿಶೇಷವೆಂದರೆ ಪ್ರತಿಯೊಂದು ಅಧ್ಯಯನದ ವಿಷಯಕ್ಕೂ ಜಗತ್ತಿನ ತುಂಬೆಲ್ಲಾ ವಿಶ್ವ ವಿದ್ಯಾಲಯಗಳು ಪ್ರತ್ಯೇಕ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಿ ಓದುಗರಿಗೆ ಸಾಕಷ್ಟು ಸೌಲಭ್ಯ ಗಳನ್ನು ನೀಡಿವೆ,ಗ್ರಂಥಾಲಯಗಳಿರದ ನಗರಗಳಿಲ್ಲಾ !

ಗ್ರಾಮಕ್ಕೊಂದು ಗ್ರಂಥಾಲಯ ಬೇಕು

ಪ್ರತಿ ಗ್ರಾಮವೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಗ್ರಾಮಕ್ಕೊಂದು ಗ್ರಂಥಾಲಯ ಮಾಡುವದು ಅವಶ್ಯವಿದೆ. ಗ್ರಾಮಗಳ ಸುಧಾರಣೆಗೆ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆತಂದಿವೆ. ಹಳ್ಳಿಗಳು ಸರ್ವಾಂಗಿನ ಅಭಿವೃದ್ಧಿ ಹೊಂದಲು ಗ್ರಾಮಕ್ಕೊಂದು ಗ್ರಂಥಾಲಯ ವಿದ್ದರೆ ಸಾಕು.ಸರಿಯಾದ ಸಿಬ್ಬಂದಿ ವರ್ಗ, ಗ್ರಂಥಪಾಲಕ ಸೇರಿದಂತೆ ಗ್ರಾಮಕ್ಕೊಂದು ಗ್ರಂಥಾಲಯ ಕೋಶ ರಚಿಸಿ ಸೇವೆ ಒದಗಿಸ ಬೇಕಾಗಿದ್ದು ಅಗತ್ಯವಿದೆ.

ತಂತ್ರಜ್ಞಾನ ಜಾಲತಾಣದಲ್ಲಿ ಪುಸ್ತಕಗಳು

ಬದಲಾದ.ಜಾಗತಿಕ ವ್ಯವಸ್ಥೆಯಲ್ಲಿಮುಂದು ವರೆದ ವಿಜ್ಞಾನ ತಂತ್ರಜ್ಞಾನ ಪುಸ್ತಕಗಳ ಸಮಗ್ರ ಕ್ರೋಢಿಕರಣಕ್ಕೆ ಹೊಸ ಆ್ಯಪ್ ಗಳ ಮೂಲಕ ನೂತನ. ಪ್ರಗತಿದಾಯಕ ಆವಿಷ್ಕಾರವನ್ನು ಕಂಡುಕೊಂಡಿದೆ. ವ್ಯಾಟ್ಸಪ್,ಪೆಸಬುಕ್,ಮೇಲ್, ಟ್ವೀಟರ್, ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕ ಓದುವಿಕೆಯ ಪರಂಪರೆ ಯನ್ನು ಬೆಳಸುತ್ತಿದೆ. ಘನ ಸರಕಾರಗಳು ನುಡಿ ತಂತ್ರಾಂಶಗಳನ್ನು ಬಳಸಿ ವಿವಿಧ ಭಾಷೆಗಳ ಉಳಿವಿಗೆ ಹಾಗೂ ಬೆಳವಣಿಗೆಗೆ ನೆಲೆ ಕಲ್ಪಿಸಿವೆ.ಒಟ್ಟಾರೆ ಪುಸ್ತಕಗಳು ಹಾಗೂ ವರದಿಗಳು ಓದುಗರಿಗೆ ಸರಳವಾಗಿ ಸಿಗು ತ್ತಿದ್ದು ಹರ್ಷದಾಯಕ.

ಓದುವ ಹವ್ಯಾಸ ನಮ್ಮದಾಗಲಿ

ಜನಸಾಮಾನ್ಯರಲ್ಲಿ ಪುಸ್ತಕ ಓದುವ ಅಭಿ ರುಚಿಯನ್ನು ಬೆಳೆಸುವುದು ಪುಸ್ತಕ ದಿನಾ ಚರಣೆಯ ಘನ ಉದ್ಧೇಶ.ಸ್ಪೈನ್ ದೇಶದಲ್ಲಿ ಮೋಳಕೆಯೊಡೆದ ಪುಸ್ತಕ ದಿನಾಚರಣೆಯ ಕಲ್ಪನೆ ಪ್ರಪಂಚಕ್ಕೆ ವ್ಯಾಪಿಸಿದೆ. ಇದೊಂದು ಪುಸ್ತಕ ಚರಿತ್ರೆಯ ಆಂದೋಲನವಾಗಿ ರೂಪಗೊಂಡಿದೆ.ಇಂದು ಜಗತ್ತಿನಾದ್ಯಂತ ಪುಸ್ತಕ ದಿನಾಚರಣೆ ಆಚರಿಸಲಾಗುತ್ತಿದೆ. ಪುಸ್ತಕಗಳು ವಿಲಾಸಕ್ಕಲ್ಲಾ ವಿಕಾಸಕ್ಕೆ,ಕಾಲ ಎಷ್ಟೇ ಬದಲಾದರೂ ಬದುಕಿನ ತಿಳಿಯನ್ನು ಅರಿಯಲು ಹಾಗೂ ನೆಲೆ ಕಾಣಲು ಪುಸ್ತಕ ಗಳು ಅವಶ್ಯ. ಪುಸ್ತಕಗಳಿಗೆ ಬೆಲೆ ಕಟ್ಟಲಾ ಗದು, ಸಂಬಂಧವಿಲ್ಲದ ವಿಷಯಗಳಿಗೆ ಹರಟೆ ಹೊಡೆಯುವದಕ್ಕಿಂತ ಪುಸ್ತಕಗಳನ್ನು ಓದಬೇಕು,ಪುಸ್ತಕಗಳು ಸಾರ್ಥಕ ಜೀವನಕ್ಕೆ ದಿಕ್ಕು ತೋರಿಸುವ ಗುರುತುಗಳು (ಸಿಗ್ನಲ್ ಗಳು).

🔆🔆🔆

✍️ ಶ್ರೀಮತಿ. ಭಾಗ್ಯಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ. ಸಾ:ಜಂತಲಿ ಶಿರೂರು ತಾ: ಮುಂಡರಗಿ ಿ: ಗದಗ