ಒಂದೊಂದು ಮಾನವೀಯತೆಯ ಇಟ್ಟಿಗೆ ಇಟ್ಟು ಬದುಕು ಕಟ್ಟೋಣ
ತಳಾದಿಗೆ ಬಿದ್ದ ಮನುಷ್ಯನ ಹೆಗಲಿಗೆ ಹೆಗಲು ಕೊಟ್ಟು ಬದುಕು ಕಟ್ಟೋಣ

ಜೀವದ್ರವ್ಯದ ಮೂಲ ಹುಡುಕೋಣ ಸಿಗದಿದ್ದರೆ ಬೇಜಾರು ಯಾಕೆ ಅದಕೆಲ್ಲ
ಕರುಣೆಗೆ ಹಾದಿ ಹುಡುಕುವುದು ಸುಲಭವಲ್ಲ ಕೈಯಲಿ ಕೈಯಿಟ್ಟು ಬದುಕು ಕಟ್ಟೋಣ

ಊರೂರು ಸುತ್ತಿದರೂ ಕೆಲವೊಮ್ಮೆ ನಮಗೆ ಬೇಕಾದ ಜನ ಜನಾದರಣೆ ಸಿಗದು
ಎಷ್ಟು ಸಮಯ ಯಾಕಾದರಾಗಲಿ ಸ್ವಸ್ಥ ಸಮಾಜಕ್ಕಾಗಿ ಪಣತೊಟ್ಟು ಬದುಕು ಕಟ್ಟೋಣ

ಉತ್ತಮ ಆಶಯವೆಂದರೆ ಎಲ್ಲರಿಗೂ ಸಮಪಾಲು ಸಮಬಾಳಿನ ಗುರಿ ಬಿತ್ತೋಣ
ಈ ಸಂದೇಶ ಮರೆಯದೆ ಎಲ್ಲರೆದೆಯಲಿ ಬೀಜದಂತೆ ನೆಟ್ಟು ಬದುಕು ಕಟ್ಟೋಣ

ನಾವಿಂದು ಪ್ರತಿಜ್ಞೆ ಮಾಡದಿದ್ದರೆ ನಾಳೆಯೆಂಬುದು ಘನ ಘೋರ ಶಾಪವಾಗಲಿದೆ
“ಜಾಲಿ” ಮುಂದಿನ ಮಕ್ಕಳಿಗೆ ಬಾಳು ನಿರ್ವಸಿತವಾಗದಂತೆ ಮನವಿಟ್ಟು ಬದುಕು ಕಟ್ಟೋಣ

               🔆🔆🔆

✍️ವೇಣು ಜಾಲಿಬೆಂಚಿ,ರಾಯಚೂರು.