ರವಿ ಜಾರುವ ವೇಳೆಗೆ ನಭಕೆ ರಂಗೇರಿದೆ ನೀ ಬರುವ ಗಳಿಗೆಗೆ ಬಯಕೆ ರಂಗೇರಿದೆ
ಹಾರುವ ಬೆಳ್ಳಕ್ಕಿ ಬಾನ ಸಿಂಗರಿಸಿದೆ ಕನಸಲಿ ನೀ ಬಂದು ಭಾವಕೆ ರಂಗೇರಿದೆ
ಚಂದಿರನ ಚಲುವೊಂದು ಭುವಿಗಿಳಿದಿದೆ ಮಹಾಶ್ವೇತೆಯ ಆಗಮನ ಮನಕೆ ರಂಗೇರಿದೆ
ಹಾಲ ಹೊಳೆಯೊಂದು ಹರಿದು ಬರುತಿದೆ ಬಾಳ ದೋಣಿಯಲಿ ಪ್ರೇಮಕೆ ರಂಗೇರಿದೆ
ನಟ್ಟಿರುಳು ಬೆಳಗುವ ದೀಪಗಳ ಸಾಲು ‘ಆರಾಧ್ಯೆ’ ಯ ಬೆಳಕಿನಲಿ ಮನಕೆ ರಂಗೇರಿದೆ
🔆🔆🔆
ಶ್ರೀಮತಿ.ಗಿರಿಜಾ ಮಾಲಿಪಾಟೀಲ್ ವಿಜಯಪುರ