ನನ್ನ ಮಾತಿನ ಹಂಗಿಗೆ ಬಿದ್ದರೂ ಬೀಳದಿದ್ದರೂ ನೀ ಕೇಳಬೇಕಿಲ್ಲ ಸಖಿ
ನಿನ್ನ ಸ್ವಚ್ಛ ಮನಸಿಗೆ ಹೌದೆನಿಸಿದರೂ ಅಲ್ಲೆನಿಸಿದರೂ ನೀ ಕೇಳಬೇಕಿಲ್ಲ ಸಖಿ

ಗೂಡು ಕಟ್ಟುವ ಪ್ರತಿ ಹಕ್ಕಿಗೆ ಬಿರುಗಾಳಿಯ ಪರಿಚಯ ಚೆನ್ನಾಗಿಯೆ ಗೊತ್ತು
ಬೀಸುವ ಗಾಳಿ ತಂಗಾಳಿಯಾದರೂ ಬಿರುಗಾಳಿಯಾದರೂ ನೀ ಕೇಳಬೇಕಿಲ್ಲ ಸಖಿ

ಹಗುರ ಎಂದುಕೊಂಡರೆ ಜೀವನವೂ ಹಗುರ ಆದರೆ ಎಷ್ಟು ಅಲೆಗಳು ಧುಮುಕಿದವು
ಲೆಕ್ಕಕ್ಕೆ ಸಿಕ್ಕಂತೆ ನಾವಾಡುವ ಮಾತಲ್ಲವಾದರೂ ಅನೂಹ್ಯವಾದರೂ ನೀ ಕೇಳಬೇಕಿಲ್ಲ ಸಖಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಹೊಳೆಯುವ ಸತ್ಯದ ಸಾಲುಗಳಿವು
ಎಂದೂ ಮರೆಯಬಾರದು ಅಟ್ಟದಲಿ ಲೆಕ್ಕಿಸಿದರೂ ತಿರಸ್ಕರಿಸಿದರೂ ನೀ‌ಕೇಳಬೇಕಿಲ್ಲ ಸಖಿ

ವಿಧಿಯು ಕಾಲ‌ ಕಾಲಕ್ಕೆ ಹೊಡೆವ ಕರೆಗಂಟೆಗಳನ್ನು ಕೇಳಿಸಿಕೊಳ್ಳಬಾರದೇಕೆ “ಜಾಲಿ”
ಹೂ ಅರಳಿದಂತೆ ಕಾಲವೂ ನಮ್ಮೊಂದಿಗೆ ಅರಳಿದರೂ ಹೊರಳಿದರೂ ನೀ‌ ಕೇಳಬೇಕಿಲ್ಲ ಸಖಿ

            🔆🔆🔆

✍️ ವೇಣು ಜಾಲಿಬೆಂಚಿ ರಾಯಚೂರು.