ಪ್ರಸ್ತುತ ದಿನಗಳಲ್ಲಿ ಅತ್ಯಂತ ಚರ್ಚೆಗೆ ಗ್ರಾಸ ವಾಗಿರುವಂಥಹ ಕ್ಷೇತ್ರ “ರಾಜಕೀಯಭಾರತದ ಸಂವಿಧಾನ ಸಾಮಾನ್ಯ ವ್ಯಕ್ತಿ ಯೊಬ್ಬ ಈ ದೇಶದ ಉನ್ನತ ಸ್ಥಾನವನ್ನು ಗಳಿಸಬಹುದು ಎಂಬ ಆಶೋತ್ತರದೊಂದಿಗೆ ಯಾರು ಬೇಕಾದರೂ ರಾಜಕೀಯ ಕ್ಷೇತ್ರ ವನ್ನು ಪ್ರವೇಶಿಸಬಹುದು ಎನ್ನುವ ರಾಜಕೀಯ ಹಕ್ಕನ್ನು ನೀಡಿದೆ. ಆದರೆ ಪ್ರಜ್ಞಾವಂತ ರಾಜಕೀಯ ನಾಯಕರುಗಳ ಕೊರತೆ ಈ ದಿನಗಳಲ್ಲಿ ದೇಶವನ್ನು ಮುನ್ನ ಡೆಸುವ ದೂರದೃಷ್ಟಿಯುಳ್ಳ ರಾಜಕೀಯ ನಾಯಕ ರುಗಳ ಕೊರತೆ ಕಾಣುತ್ತಿದೆ. ರಾಜಕೀಯ ಎಂದರೆ ದುಡ್ಡು ಮಾಡುವ ಕ್ಷೇತ್ರ, ಅಧಿಕಾರ ದರ್ಪತೋರಿಸುವ ಅಖಾಡ ಎಂಬುದಾಗಿದೆ. ಜಾತಿ ಧರ್ಮಗಳು ಸಾಧನ ವಾಗಿ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನೆಲೆ ಯಲ್ಲಿ ಇತಿಹಾಸ ದೂರದೃಷ್ಟಿಯುಳ್ಳ ಅನೇಕ ರಾಜಕೀಯ ನಾಯಕರು ಮರೆಯಲ್ಲಿ ಉನ್ನತ ಸಾಧನೆ ಮಾಡಿದ್ದುಂಟು.ಆದರೆ ಈ ದಿನಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರ ಮಟ್ಟದವರೆಗೆ ಅನೇಕ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿಯೇ ಎಲ್ಲ ಬುದ್ಧಿ ಜೀವಿಗಳು ಸಾಹಿತಿಗಳು ರಾಜಕೀಯ ಕ್ಷೇತ್ರವನ್ನು ದೂರವಿರಿಸಿ ಕಾವ್ಯ, ನಾಟಕ, ಕಾದಂಬರಿ ಸಾಹಿತ್ಯ ಪ್ರಕಾರದ ಮೂಲಕ ಕೇವಲ‌ ಟೀಕೆ, ವಿಡಂಬನೆಯನ್ನಷ್ಟೇ ಮಾಡಲು ಸಾಧ್ಯ ವಾಗಿದೆ.ಸಾಹಿತ್ಯದ ಮೂಲ ಧ್ವನಿ ಸಮಾಜ ವನ್ನು ತಿದ್ದುವ, ತಪ್ಪುದಾರಿಯ ವ್ಯಕ್ತಿಗಳನ್ನು ಸರಿದಾರಿಗೆ ತರುವುದೇ ಆಗಿದೆ. ಆದರೆ ರಾಜಕಾರಣ ಸಾಹಿತ್ಯವನ್ನು ಅಭ್ಯಾಸ ಮಾಡದೆ ಅದನ್ನು ಕೀಳಾಗಿ ನೋಡುವ ಧೋರಣೆ ಉಳ್ಳದ್ದಾಗಿದೆ.

ಕನ್ನಡದ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲುವ ಬೇಂದ್ರೆಯವರು ತಮ್ಮ ಕೊನೆಯ ಕವನ ಸಂಕಲನ ಪ್ರತಿಬಿಂಬಗಳು ಎಂಬ ಪುಸ್ತಕ ದಲ್ಲಿ “ಶ್ರೀಮನ್ ಮಹಾಭಾರತ” “ಉದ್ಯೋಗಪರ್ವ” “ಭೀಷ್ಮಪರ್ವ”

ಎಂಬ ಪದ್ಯಗಳಲ್ಲಿ ಒಂದಷ್ಟು ರಾಜಕೀಯ ಒಳನೋಟಗಳ ಮೂಲಕ ರಾಜಕೀಯ ಧ್ರುವೀಕರಣವನ್ನು ಕುರಿತು ಮಾತನಾಡಿ ದ್ದಾರೆ. ಈ ಮೂರು ಕವಿತೆಗಳು ಭಾರತ ಮತ್ತು ಚೀನ ದೇಶಗಳ ನಡುವಿನ ರಾಜ ಕೀಯ ಸಂಬಂಧ, ಗಡಿ ವಿವಾದವೇ ನೆವ ವಾಗಿ ಎರಡು ದೊಡ್ಡ ದೇಶಗಳ ನಡುವೆ ಯುದ್ಧದ ಕಹಳೆ ಮೊಳಗಿದಾಗ ಬರೆದ ಕವಿತೆಗಳು. ಕವಿಯ ಭಾರತದೇಶದ ಅಭಿಮಾನ ಅತಿಶಯ ಎಂದೆನಿಸಬಹುದು, ಆದರೆ ಪ್ರಸಂಗಗಳು ವಿಕೋಪಕ್ಕೆ ಹೋದಾಗ ಇದೆಲ್ಲಾ ಸಹಜವೆಂಬಂತೆ ಕವಿತೆಗಳ ಸ್ವಾರಸ್ಯವಿರುವುದು ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಮಹಾಭಾರತದ ಸಮಸ್ಯೆಗಳ ಪ್ರತಿಬಿಂಬ ವನ್ನು ಕಾಣುವುದರಲ್ಲಿ. ಇಲ್ಲಿ ವಿಡಂಬ ನೆಯ ಧ್ವನಿ ಕಂಡುಬಂದಿದೆ. ಚೀನಾದ ರಕ್ತದಾಹ ಗಂಗಪಾನ ಬಯಸಿದಾಗ ಇಲ್ಲಿ,

‘ಸಾವಿರ ಸಗರ ಪುತ್ರರೋ ಗತಿ ಗಂಡು ಬೂದಿ ಯಾದರೂ ಋಷಿಯ ಶಾಪದಿಂದ’

ಎಂದು ಹೇಳುವುದರಲ್ಲಿ ಸ್ವವಿಮರ್ಶೆ ಇಲ್ಲದೆ ಇಲ್ಲ.ಇಲ್ಲಿ ಮಹಾಭಾರತ ರೂಪಕಗಳು ಸರಿ ಯಾಗಿ ಹೊಂದಿಕೊಳ್ಳುವುದಿಲ್ಲ, ಚೀನಾ ದುರ್ಯೋಧನಂತೆ ಕಾಣುವುದು ಗಡಿಯ ಗೊಂದಲ ದಲ್ಲಿ ಎಂಬುದನ್ನು ಚಿತ್ರೀಕರಿಸಿ ದ್ದಾರೆ .

‘ಇತಿಹಾಸದಲ್ಲಿ ನಂಬಿಕೆಯಿಲ್ಲ, ಭೂಗೋಳ ನೀನು ಗೆರೆ ಹಾಕಿದ್ದೆ ನಿನ್ನ ಬಾಯಿ ಮರ್ಯಾದೆ ಮಾತಿನದು’

ಎಂದು ಹೇಳುವ ಸಾಲುಗಳಲ್ಲಿ ದುರ್ಯೋ ಧನನಂತಹ ಛಲಬಿಡದ ರಾಜಕಾರಣಿ ವಯಸ್ಸಾದರೂ ಅಧಿಕಾರದ ಅಮಲಿಗೆ ಅಂಟಿಕೊಂಡೇ ರಾಜಕೀಯದ ಸೊತ್ತಾಗಿ ಕಾಣಿಸಿಕೊಂಡನು ಎಂಬುದನ್ನು ಕವಿ ರೂಪಕದ ಮೂಲಕ ವಿವರಿಸುತ್ತಾರೆ.
ಭೀಷ್ಮ ಪರ್ವದ ಪದ್ಯದಲ್ಲಿ ಸಾಮಾನ್ಯ ಜನದ ಪಾಶವಿಕ ನಡವಳಿಕೆ ವರ್ಣನೆ ಸಾಮಾನ್ಯ ವರ್ಣನೆಯಾಗದೆ ಹೊರತು ಇತಿಹಾಸದ ಯಾವುದೇ ಪ್ರಾಸಂಗಿಕ ವರ್ಣನೆ ಆಗಿಲ್ಲ ಎಂಬುದನ್ನು ತಿಳಿಸುವುದರ ಮೂಲಕ ಜನರು ರಾಜಕೀಯದಲ್ಲಿ ಆಟಿಕೆ ಗಳಾಗಿ ಕಾಣಿಸಿಕೊಳ್ಳುತ್ತಾರೆ. ರಾಜಕಾರಣದ ಸೂತ್ರಧಾರಿಗಳ ನಡುವೆ ಹಣ,ಹೆಂಡದ ಆಸೆ ಗಾಗಿ ತಮ್ಮ ವೋಟುಗಳನ್ನು ಮಾರಿಕೊಳ್ಳು ವುದರ ಮೂಲಕ ನಿಜವಾದ ಪ್ರಜಾಸತ್ತ ತೆಯ ಧೋರಣೆ ಆಶಯಗಳನ್ನು ಗಾಳಿ ಯಲ್ಲಿ ತೇಲಿಬಿಡುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಬೇಂದ್ರೆಯವರ ರಾಜಕೀಯದ ಒಳನೋಟ ಗಳು ಸಾಮಾನ್ಯ ಪ್ರಜೆ ಸಂವಿಧಾನದ ಆಶಯ, ಆಶೋತ್ತರಗಳಿಗನುಗುಣವಾಗಿ ದೇಶದ ಉನ್ನತ ಸ್ಥಾನವನ್ನು ಗಳಿಸುವುದರ ಕಡೆಗೆ ನಡೆಯದೆ ಸಾಮಾನ್ಯ ವ್ಯಕ್ತಿಯಾಗಿ ಯೇ ಕೊನೆಯವರೆಗೂ ಬದುಕಿ, ನರಳಿ, ಶಾಪದೊಂದಿಗೆ ಸಾವನ್ನಪ್ಪುತ್ತಾರೆ, ರಾಜಕಾರಣ ರಾಜಕೀಯ ಕ್ಷೇತ್ರ ಸಾಮಾನ್ಯರ ಬದುಕಿಗೆ ಸಾಯಿಸುವ ಶಿಲುಬೆಯ ಹಾಗೆ ಕಾಣುತ್ತದೆ ಎಂಬುದು ಬೇಂದ್ರೆಯವರ ಒಟ್ಟು ಅಭಿಪ್ರಾಯ.

🔆🔆🔆

✍️ ಪ್ರಕಾಶ ಬಿ ಉಪ್ಪಿನಹಳ್ಳಿ. ಕನ್ನಡ ಸ.ಪ್ರಾ. ಸಪ್ರದ ಕಾಲೇಜು, ಶಿರಸಿ