ಎಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆಯ ಹಾರ್ದಿಕ ಶುಭಕಾಮನೆಗಳು ಹಾಗೂ ಅಭಿನಂದನೆಗಳು

A room without books is like a body without soul .
_cicero

ಪುಸ್ತಕ ಹಾಗೂ ನನ್ನ ಒಡನಾಟದ ಬಗ್ಗೆ ಒಂದು ವಿಸ್ತೃತ ಲೇಖನ ಸದ್ಯದಲ್ಲೇ ಬರೆಯುವೆ. ಪುಸ್ತಕ ಓದುವ ಅಭಿರುಚಿ ಓದಲು ಕಲಿತ ದಿನದಿಂದ ಇದ್ದರೂ ಸಂಗ್ರಹ ಣೆಯ ಸೌಭಾಗ್ಯ ಒದಗಿ ಬಂದದ್ದು ಮಾತ್ರ ಇತ್ತೀಚೆಗೆ. ನನ್ನ ಜೀವನದಲ್ಲಿ ತುಂಬಾ ತಡವಾಗಿ ಆರಂಭವಾದ ಹವ್ಯಾಸ ಇದು ಆದರೂ ಬೆಟರ್ ಲೇಟ್ ದ್ಯಾನ್ ನೆವರ್ ಎಂದು ಸಮಾಧಾನಿಸಿಕೊಳ್ಳುವೆ. ಹಾಗಾಗಿ ನನ್ನಲ್ಲಿರುವ ಸಂಗ್ರಹ ಅತ್ಯಲ್ಪ ಆದರೂ ಅದನ್ನೇ ನಿಮ್ಮೊಡನೆ ಹಂಚಿ ಕೊಂಡು ಸಂಭ್ರಮಿಸುವಾಸೆ.

ಕಪಾಟಿನ ಮೇಲಿನ ಭಾಗ ನನಗೆ ಕವಿತೆ ವಾಚನ ಹಾಗೂ ಗೋಷ್ಠಿಗಳಲ್ಲಿ ಭಾಗವಹಿ ಸಿದ ನೆನಪಿನ ಸ್ಮರಣಿಕೆಗಳು .

ಮೊದಲನೆಯ ಸಾಲಿನಲ್ಲಿ ಕುವೆಂಪು ಅವರ ಸಮಗ್ರ ಸಾಹಿತ್ಯ ಮಾರ್ಚ್ ೨೦೨೦ರಲ್ಲಿ ಕವಿಶೈಲಕ್ಕೆ ಭೇಟಿ ಕೊಟ್ಟಾಗ ಖರೀದಿಸಿದ್ದು.

ಎರಡನೆಯ ಸಾಲು ಆಕಡೆ ಈಕಡೆ ನನ್ನಲ್ಲಿರುವ ಇಂಗ್ಲಿಷ್ ಕಾದಂಬರಿಗಳು ಹಾಗೂ ಮಧ್ಯದಲ್ಲಿ ಇರುವುದು ಇಂಗ್ಲಿಷ್ ವ್ಯಕ್ತಿತ್ವ ವಿಕಸನ ಪುಸ್ತಕಗಳು .

ಮೂರನೆಯ ಸಾಲು ಒಂದೂವರೆ ವರ್ಷದ ಈಚೆಗಿನ ನಾನು ವಿವಿಧ ಪುಸ್ತಕ ಪ್ರದರ್ಶನ ಹಾಗೂ ಆನ್ ಲೈನ್ ನಲ್ಲಿ ಖರೀದಿಸಿದ ವಿವಿಧ ಲೇಖಕರ ಪುಸ್ತಕಗಳು ಬೇರೆಯವರ ಪುಸ್ತಕಗಳನ್ನು ಕೊಂಡು ಓದಿ ಸಂಭ್ರಮಿಸು ತ್ತಿದ್ದ ನನಗೆ ಇತ್ತೀಚೆಗೆ ನನ್ನದೇ ಬರಹಗಳು ಅಚ್ಚು ಕಾಣುವ ಸೌಭಾಗ್ಯ ಬಂದದ್ದು ಹೆಚ್ಚಿನ ಖುಷಿ ತಂದಿದೆ . ನಾಲ್ಕನೆಯ ಸಾಲು ಹಾಗೂ ಕಡೆಯ ಸಾಲಿನಲ್ಲಿ ಬಲಭಾಗ ನನ್ನ ಲೇಖನ ಗಳು ಪ್ರಕಟವಾದ ಪತ್ರಿಕೆ ನಿಯತಕಾಲಿಕೆ, ವಿಶೇಷಾಂಕ ಮೊದಲಾದುವುಗಳು. ಎಡ ಭಾಗದಲ್ಲಿ ನನ್ನ ಸ್ವತಂತ್ರ ಕೃತಿ ಹಾಗೂ ವಿವಿಧ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿ ರುವ ನನ್ನ ಲೇಖನ ಕವನ ಕಥೆ ಪ್ರಬಂಧ ಮೊದಲಾದುವುಗಳು. ನನ್ನ ಸ್ವತಂತ್ರ ಸಂಕಲನ ಹಾಗೂ ವಿವಿಧ ಸಂಪಾದಿತ ಪುಸ್ತಕಗಳಲ್ಲಿ ನನ್ನ ಲೇಖನಗಳ ವಿವರ ಹೀಗಿದೆ ಫೋಟೋ ಸಹ ಹಾಕಿದ್ದೇನೆ.

ಅಂತರಂಗದ ಆಲಾಪ _ ಸ್ವತಂತ್ರ ಕವನ ಸಂಕಲನ

ನುಡಿಸಂಭ್ರಮ _ ಕುವೆಂಪು ವಿಶ್ವವಿದ್ಯಾನಿಲಯ ಎರಡನೇ ಬಿಎಸ್ಸಿ ಪಠ್ಯ ಮುಖವಾಡಗಳು ಕವನ

ನಾವು ನಮ್ಮವರು ಭಾಗ ೧ _ ಕವನಗಳು

ನಾವು ನಮ್ಮವರು ಭಾಗ 2 _ ಕವನಗಳು

ಸಾಹಿತ್ಯೋತ್ಸವ _ಕವನಗಳು

ಪಯೋನಿಧಿ ಭಾಗ 2 _ ಕವನಗಳು

ಹಸಿರು ಗಾಜಿನ ಬಳೆಗಳು _ ಕವನಗಳು

ಕುಸುಮಾಂಜಲಿ _ ಅಮ್ಮನ ಬಗ್ಗೆ ಲೇಖನ

ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ _ ಮಹಿಳಾ ಸಾಹಿತ್ಯ ಅಂದು ಇಂದು ಲೇಖನ

ಹೆಣ್ಣೆಂದರೆ ಬೆಳಕು_ ಕಥೆ

ಕೂಸುಮರಿ _ ಮಕ್ಕಳ ಕಥೆ ಕವನ

ಶತ ರತ್ನ ಚುಟುಕುಗಳು_ ಚುಟುಕುಗಳು

ಹಸಿರುಕ್ರಾಂತಿ ದೀಪಾವಳಿ ವಿಶೇಷಾಂಕ _ ಲೇಖನ

ಮಧ್ಯೆ ಇರುವುದು ಓದಲು ತಂಗಿಯ ಮನೆಯಿಂದ ಎರವಲು ತಂದಿರುವ ಪುಸ್ತಕಗಳು .

ವಿವಿಧ ವಿಶೇಷಾಂಕ ಅಥವಾ ನಿಯತಕಾಲಿಕೆ ಗಳ ಜೊತೆಬರುವ ಉಪಯುಕ್ತಸಪ್ಲಿಮೆಂಟ್ ಗಳನ್ನು ಸಂಗ್ರಹಿಸುವ ಹವ್ಯಾಸ ನನಗೆ, ಅವು ಕಡೆಯ ಫೋಟೋದಲ್ಲಿದೆ .

ಈಗ ಇತ್ತೀಚೆಗೆ ಕೊಂಡಿರುವ ಇಪ್ಪತ್ತು ಪುಸ್ತಕಗಳನ್ನು ಜೋಡಿಸಲು ಬಾಕಿ ಇದೆ.

ಪುಸ್ತಕಗಳ ಬಗೆಗಿನ ನನ್ನದೊಂದು ಸಣ್ಣ ಕವನ ನಿಮ್ಮ ಓದಿಗಾಗಿ .

       <strong>ಜ್ಞಾನದೀವಿಗೆ</strong>

ಮನುಜ ಕುಲಕೆ ದೇವ ಕೊಟ್ಟ ಕೊಡುಗೆ
ಮಾತುˌಮಂಥನˌ ಭಾಷೆ ಹಾಗೂ ಬರವಣಿಗೆ
ತಲೆತಲಾಂತರದಿಂದ ಪರಂಪರಾನುಗತವಾಗೆ
ಗ್ರಂಥಗಳಲಿ ಬೆಳಗುತ್ತಾ ಬಂದಿದೆ ಜ್ಞಾನದೀವಿಗೆ.

ಪುಸ್ತಕದ ಅರಿವು ಮಸ್ತಕಕೆ ಬರಬೇಕು
ಬಾಳಲ್ಲಿ ಅಳವಡಿಸಿಕೊಳ್ಳುವ ಜಾಣ್ಮೆ ಬೇಕು
ಇವು ಹಿರಿಯರ ನಡೆ ನುಡಿ ಆಲೋಚನೆಗಳ ಕನ್ನಡಿ
ಜೀವನದ ಪಟ್ಟುಗಳ ತಿಳಿಸಿಕೊಡುವ ಕುಸ್ತಿ ಗರಡಿ.

ಹೊತ್ತಿಗೆಗಳಿಗಿಂತ ಆಪ್ತಮಿತ್ರ ಬೇರೊಂದಿಲ್ಲ
ಇವುಗಳಿಗಿಂತ ಹೆಚ್ಚಿನ ಆಸ್ತಿ ಮತ್ತೊಂದಿಲ್ಲ
ಬೆಳೆಸಿಕೊಳ್ಳಿ ಉಳಿಸಿಕೊಳ್ಳಿ ಅದಮ್ಯ ಓದಿನ ಪ್ರೀತಿ
ಆಗ ಬಾಳಲಿ ಅಂಧಕಾರವಿಲ್ಲˌಬರೀ ಸುಜ್ಞಾನ ಜ್ಯೋತಿ.

ನಮ್ಮ ಪುಸ್ತಕ ಸಂಗ್ರಹವು ಎಷ್ಟೇ ಕಡಿಮೆಯಿದ್ದರೂ ಹಂಚಿಕೊಳ್ಳುವ ಸಂತಸ ಮಾತ್ರ ಅದನ್ನು ಇಮ್ಮಡಿಸುತ್ತದೆ. ಈ ಅವಕಾಶ ಒದಗಿಸಿ ಕೊಟ್ಟ ಬಳಗಕ್ಕೆ ಧನ್ಯವಾದಗಳು.

           🔆🔆🔆

✍️ ಸುಜಾತಾ ರವೀಶ್, ಮೈಸೂರು.