ವಿಶ್ವ ಭೂ ದಿನದ ಅಂಗವಾಗಿ

ನಮನ ಸಿರಿ ಭೂಮಿಗೆ

ಭೂತಾಯಿಗೆ ಕೋಟಿ ನಮನ
ಜೀವ ಸಂಕುಲಕೆ ನೆಮ್ಮದಿಯ ತಾಣ
ಸೃಷ್ಟಿಯ ವೈವಿಧ್ಯತೆಯ ಝೇಂಕಾರ
ಆವಾಸಕಿರುವೆ ಯೋಗ್ಯಧಾತೆ
ನದಿ ನದಗಳ ಪರ್ವತ ಕಂದರಗಳೊಡಗೂಡಿ
ಉಸಿರಿನ ಪ್ರತಿ ಕಣಕೆ ನೀ ಕಾರಣ
ತರತರದ ತರುಲತೆಗಳ ಮೈಮಾಟ
ಮರಳು ರಶಿ,ಮಲೆನಾಡಿನ ಭಿನ್ನ
ಸಮತೋಲಿತ ಅಗಮ್ಯತೆ
ಇಂದೇಕೋ ಮಂಕಾಗುತಿಹಳೂ
ಮಾನವನ ಮದ ಮತ್ತಮನದಲಿ
ಬರಡಾಗುತಿಹಳು ರಮಣಿ
ರಾಸಾಯನದ ಪಾನಮತ್ತಲಿ
ಪ್ಲಾಷ್ಟಿಕ್ ಮಾರಿಯ ತನ್ನೊಳು ಹೊಕ್ಕಿಸಿ
ಅಣ್ವಸ್ತ್ರಗಳ ಪೈಪೋಟಿಯ ಆಧ್ಯತೆಯಲಿ
ಬಲಾಡ್ಯರೆಂಬ ಮರಕುಟುಕುಗಳ ಕೈ ಸಿಕ್ಕಿ
ವೈರಾಣುಗಳ ಆರ್ಭಟದಿ ಜೀವ ಸಂಕುಲ ನಾಶವಾಗುತಿದೆ
ಇದೋ ಎಚ್ಚರಿಕೆ ಕರೆಗಂಟೆ
ಸ್ವಸ್ಥ ಭೂತಾಯಿಯ ಮೊಗಕಾಗಿ
ಪಣ ತೊಡಬೇಕಿದೆ ಶುಭ್ರ ಭೂಮಿ ನೋಡಲು
ಕೈಗೂಡಿಸಿ ಉಳಿಸಿ ಬೆಳಸಲು

       🔆🔆🔆                                

✍️ ರೇಷ್ಮಾ ಕಂದಕೂರ, ಶಿಕ್ಷಕಿ ಸಿಂಧನೂರ