ವಿಶ್ವ ಭೂಮಿ ದಿನದ ಶುಭಾಶಯಗಳು
ಸ್ವರಾಕ್ಷರಗಳಲ್ಲಿ ಭೂಮಿ ತಾಯಿಗೆ ನಮನ.

ಅವನಿ ಇವಳು ಜಗವ ಪೊರೆವ ಜಗದ್ಧಾತ್ರಿ
ಆಶ್ರಯ ನೀಡಿ ಸಲಹುತಿಹ ಸುಂದರ ಧರಿತ್ರಿ
ಇಳೆ ಇವಳೇ ಉಟ್ಟಿಹಳು ಹಸಿರು ವನರಾಶಿಯ ಪತ್ತಲ
ಈ ಪೃಥ್ವಿಗೆ ನದಿ ಝರಿಗಳೇ ಶೋಭಿಸುವ ಕೊರಳ ಮಾಲ

ಉತ್ತು ಬಿತ್ತಿದರೆ ನೆಲವ ಕೊಡುವಳು ಧಾನ್ಯದ ಸಿರಿ
ಊಟವಿತ್ತು ಸಲಹುವವಳು ತಾಯಿ ಅನ್ನಪೂರ್ಣೇಶ್ವರಿ
ಋತುಮಾನಕ್ಕೆ ಬದಲಾಗುವ ಸೊಗದ ಸೊಬಗ ಐಸಿರಿ

ಎಲ್ಲ ನನಗೆ ಬೇಕೆನ್ನುವ ದುರುಳ ಮಾನವನ ಸ್ವಾರ್ಥ
ಏನಾದರೂ ಆಗದವನಿಗೆ ಪ್ರಕೃತಿ ಮಹತ್ವದ ಅರ್ಥ
ಐಶ್ವರ್ಯದ ಹುಚ್ಚಿನಲಿ ಸಂಭವಿಸಿದವೆಷ್ಟೋ ಅನರ್ಥ

ಒಕ್ಕಲುತನ ಮಾಡಲು ಭೂಮಿ ಇಲ್ಲ ಬರೀ ನಗರೀಕರಣ
ಓಗೊಡಲು ಜೀವರಾಶಿ ಇಲ್ಲದಂತೆ ಕೈಗಾರೀಕರಣ
ಔದ್ಯೋಗೀಕರಣ ಹೆಸರಿನಲ್ಲಿ ಕಾಡುಗಳ ವಿನಾಶ
ಅಂತ್ಯ ಸಮೀಪಿಸುತ್ತಿದೆ ಖಚಿತ ಮನುಕುಲದ ಸರ್ವನಾಶ

            🔆🔆🔆

✍️ ಸುಜಾತಾ ರವೀಶ್,ಮೈಸೂರು