ಸುರಿಸಿದ ಕಣ್ಣೀರು
ಯಾರಿಗೋ ನೈಜ ಸಾಂತ್ವನ
ಹೇಳುವಂತಿದ್ದರೆ ಬೆಲೆ
ಇಲ್ಲದಿರೆ ಕಣ್ಣ ಅಂತರಜಲ
ಬತ್ತಿಸಲು ಹೋಗದಿರು ಮನವೆ॥೧॥

ಮುದಿಗೂಬೆ ಬಿದ್ದು ಹೋದರೆ
ಸಾಕೆಂದ ಸೂಸೆ ಮುದ್ದು
ಕಣ್ಣ ನೀರೆಲ್ಲ ಇಂಗಿ
ತಲೆಕೆದರಿ ಹೊರಳಾಡಿದ್ದು
ಯಾವ ಕಂಪನಿ ನಾಟಕ॥೨॥

ಹಾಸಿಗೆಯಲ್ಲಿ ಹೊರಳಾಡಿ
ಮಕ್ಕಳ ಹೆತ್ತಿದ್ದು ತಪ್ಪಾಯಿತೆಂದ
ಹೆತ್ತವರು ಹೋದಾಗ ಕಣ್ಣ
ಜಲಸಾಗರದಿಂ ಶವ ಸಂಸ್ಕಾರ
ಊರ ಮಂದಿಗೆಲ್ಲ ತಿಥಿಯೂಟ

ಅರಿಯಬೇಕಿದೆ ಕರುಳಿನ
ಬೆಲೆಯ ತಾಯಿ ತಾ
ಮಗುವ ಕಳೆದುಕೊಂಡಾಗಿನ
ನೋವಿನ ಆಳವ ಅರಿದು
ಕಣೀರ ಸುರಿಸುವ ಮಾರ್ಗವ॥೪॥

ವ್ಯಕ್ತಿಯ ಜೀವನ ಪಯಣದ
ಕೊನೆಯ ಹೆಜ್ಜೆ ಮುಗಿದ
ಮೇಲೋ ಕಣ್ಣೀರಿನ ನಾಟಕ
ಪ್ರದರ್ಶನ ನಿಷೇದಿಸಬೇಕಿದೆ
ಆಟ ಮುಗಿದಾಗ ನಾಟಕಬೇಕೆ?॥೫॥

                🔆🔆🔆

✍🏻 ಪರಸಪ್ಪ ತಳವಾರ
ಕನ್ನಡ ಸ.ಪ್ರಾ ಸ‌.ಪ್ರ.ದ.ಕಾಲೇಜು, ಲೋಕಾಪೂರ