ಮಗಳಾದ ಸಾನಿಕಾ ಹೆಗಡೆ (ಜ:೨೩.೧೦.೨೦೦೪)
ತನ್ನ ಹದಿನೈದನೆಯ ವಯಸ್ಸಿನಲ್ಲಿ ಪ್ರಕಟಿಸಿದ ‘ಅಬಾಂಡನ್ಡ್ ಫ್ರೆಂಡ್’ಎಂಬ
ಕವನ ಸಂಕಲನದಿಂದ ಆಯ್ದ ಕವನದ ಅನುವಾದ.

ಭೂಮಿಯೊಳಗಿಹರ್ಯಾರೆಂದು ಇಹೆ ಚಿಂತಿಸುತ್ತ
ಚಂದ್ರನೆಡೆಗೆ ಕಣ್ಣ ಮಿಟುಕಿಸದೆ ನೋಡುತ್ತ
ಇರುವೆವು ನಾವು ದೇಹವ ನೆಲದಡಿಗೆ ಹೂಳುತ್ತ
ಮತ್ತೆ ಮೇಲೆ ಹೂಮಾಲೆಗಳ ಸುತ್ತಿಡುತ್ತ

ದೇಹ ಕೆಳಗಿರುವಾಗ ಆತ್ಮ ಮೇಲಕೇರುವುದು
ಆತ್ಮ ಕೆಳಗಿರುವಾಗ ದೇಹ ಮೇಲೆದ್ದೇಳುವುದು
ಜೀವನದಿ ನಮ್ಮ ಏಳು-ಬೀಳು ಕಾಣುವುದು
ದೇಹ ಆತ್ಮಗಳ ವರ್ತನೆಯಂತಿರುವುದು

ಅಧಿಕವಿಹುದು ನಿನ್ನ ಬೆಲೆ ಇನ್ನು ಖಿನ್ನತೆಯೇಕೆ
ದಾರಿಹೋಕನ ಮರುಳು ಟೀಕೆಗೆ ಬೆಲೆ ನೀಡಲೇಕೆ
ಮರಣದ ಬಳಿಕ ದೇಹ ನೆಲಕೊಲಿವುದು ಮತ್ತೆ ಆತ್ಮ ಆಕಾಶಕೆ
ಮಾಡಬಹುದಲ್ಲವೆ ಕೆಲ ಮಹತ್ಕಾರ್ಯಗಳ ಮುಗಿಲೆತ್ತರಕೆ

ಈ ದೇಹಾತ್ಮಗಳ ರೀತಿಯೇ ವಿಭಿನ್ನವಾಗಿಹುದು
ಒಂದು ಆಕಾಶಕೆ ಜಿಗಿದರೆ ಇನ್ನೊಂದು ಪತನವಾಗುವುದು
ನಿನ್ನ ಕನಸ ಹಿಂಬಾಲಿಸಿ ಹೋದರೆ ಅದ ಹಿಡಿಯಬಹುದು
ಭುವಿಯ ಮೇಲೇ ಆಗಸದೆತ್ತರಕೆ ಬೆಳೆಯಬಹುದು

         🔆🔆🔆

✍️ ಆಂಗ್ಲ ಮೂಲ: ಸಾನಿಕಾ ಹೆಗಡೆ
ಕನ್ನಡಕ್ಕೆ: ಕವಿತಾ ಹೆಗಡೆ, ಹುಬ್ಬಳ್ಳಿ