ನಿನ್ನೊಲವ ಆಸರೆಯಿಂದ ದೂರ ಮಾಡದಿರು ಸಖಿ
ಪವಿತ್ರ ಬಂಧನದಿಂದ ದೂರ ಮಾಡದಿರು ಸಖಿ

ನಿನ್ನಾಸರೆ ನಂಬಿ ಬದುಕುವ ಬಡಪಾಯಿ ಇವನು
ಬೆಚ್ಚಗಿನ ಅಪ್ಪುಗೆಯಿಂದ ದೂರ ಮಾಡದಿರು ಸಖಿ

ಬಾಳಿನ ಯಾವುದೋ ತಿರುವಿನಲ್ಲಿ ಸಂದಿಸಿದರೇನು ಬಿಡು
ಮಾಡಿದ ಪ್ರಮಾಣಗಳಿಂದ ದೂರ ಮಾಡದಿರು ಸಖಿ

ನೀನಿಲ್ಲದೆ ಕ್ಷಣವಿರದ ಚಡಪಡಿಕೆಗಳ ನೋಡು
ಉಸಿರಾಗೊ ಬರವಸೆಗಳಿಂದ ದೂರ ಮಾಡದಿರು ಸಖಿ

‘ಆರಾಧ್ಯ’ ನ ಮನಸು ಬರಡಾಗದಿರಲಿ ಬಳಲಿ
ಬನವಾಗಿಸು ಮಳೆಯಿಂದ ದೂರ ಮಾಡದಿರು ಸಖಿ

        🔆🔆🔆

✍️ಶ್ರೀಮತಿ. ಗಿರಿಜಾ ಮಾಲಿಪಾಟೀಲ್ ವಿಜಯಪೂರ