ಹೊಸ ಸಂಭ್ರಮ-ಸಡಗರ
ಬಂದಿದೆ ನವಸಂವತ್ಸರ.!
ನವೋಲ್ಲಾಸದ ಝೇಂಕಾರ!
ಮತ್ತೆ ಮರಳಿದೆ ಯುಗಾದಿ.!
ತೆರೆಯುತಾ ಹೊಸಹಾದಿ!

ರಂಗುರಂಗೇರಿದೆ ಅಂಬರ
ನಾಚಿನಿಂತ ಭೂರಮೆಗೆ
ಬಣ್ಣ-ಬಣ್ಣದ ಹೂಹಾರ.!
ಹೊಸ ಹುರುಪು-ಹರುಷ
ಬಂದಿದೆ ಹೊಸ-ವರುಷ!

ಮೊದಮೊದಲ ಹಬ್ಬವಿದು
ಸಿರಿಸುಗ್ಗಿಯ ದಿಬ್ಬಣವಿದು.!
ಜಗದ ನವಸಂವತ್ಸರಕೆ
ಸಂತಸದ ಹೆಬ್ಬಾಗಿಲಿದು
ಪ್ರತಿಮನದ ಆಮೋದವಿದು!

ಬೇವುಬೆಲ್ಲಗಳ ಮೆದ್ದು
ನವನಿರೀಕ್ಷೆಗಳ ಹೊದ್ದು
ಕಷ್ಟಸುಖಗಳ ಸವಾಲಿಗೆ
ಬಾಳಿನ ಏರಿಳಿತಗಳಿಗೆ
ಸಮಚಿತ್ತದಿ ಅಡಿಯಿಡುವ!

ಶುಭಾಶಯ ಕೋರುತ್ತ
ನಗೆಕಿರಣ ಬೀರುತ್ತ
ಸನ್ನಡತೆಯಲಿ ಸಾಗೋಣ.!
ಹೊಸಬಾಳ ಪಥದಲ್ಲಿ.!
ನವಸಂಕಲ್ಪ ರಥದಲ್ಲಿ..!!

       🔆🔆🔆               

✍️ ಎ.ಎನ್.ರಮೇಶ್. ಗುಬ್ಬಿ.