ಯುಗಾದಿ ಯುಗದಾರಂಭಕೆ ನೀನಿರಬೇಕು
ಭವದಾರಂಭಕೆ ನಾನಿರಬೇಕು
ಸಮ್ಮಿಲನದ ಶುಭಕೆ ಪ್ರೀತಿಬೇಕು
ಪ್ರೇಮವೆಂದರೆ ಚೈತನ್ಯವದು
ಚಿಗುರೆಂದರೆ ಅದಮ್ಯ ಭಾವವದು
ರಾಗ-ಸಂಪ್ರೇಮದ ಸಂಭ್ರಮವು
ಮನಸೋಲ್ಲಾಸಕೆ ಆದಿಯಾದರೆ
ಕ್ಷೇಷಗಳ ಸಂಹಾರಕೆ ಅಂತ್ಯವದು
ಬೇವು-ಬೆಲ್ಲದ ನಂಟಲಿ ಅಡಗಿದೆ
ನೋವು-ಭಾದೆಗಳ ಸಮ್ಮಿಶ್ರಣವು
ಸಂತಸದ ಹೂರಣ ಹದವಾಗಿದೆ
ಮೆಲ್ಲುವಾ ಮಾವಿನಲಿ ಕಂಪಡಗಿ
ನಸುನಕ್ಕಿತು ಯುಗಾದಿಯು….
ಇನ್ನಾದರೂ ಮರೆಯಾಗಲಿ
ಅಸೂಯೆಗಳ ದಳ್ಳುರಿಯು
ನಮ್ಮೊಳಡಗಿದ ಕಹಿಯೆಲ್ಲವು
ನಮ್ಮೆದೆಯ ಸುಡದಿರದು
ದ್ವೇಷಗಳ ಸರಮಾಲೆಯ
ಕೂಡಿ ಬೆರೆತು ಕಿತ್ತೊಗೆಯ ಬನ್ನಿ
ಹೊಸಯುಗದ ಮುನ್ನುಡಿಯಲಿ
ಪ್ರೇಮದ ಚಿಗುರು ಚಿಗುರಲಿ
ಎಲ್ಲರೊಂದೆಂಬ ಭಾವ ಮೇಳೈಸಲಿ.
🔆🔆🔆.
✍️ಶ್ರೀಮತಿ.ಶಿವಲೀಲಾ ಹುಣಸಗಿ ಯಲ್ಲಾಪುರ
Nice👍👍👍
LikeLike
Ugadiya kavite super❤❤❤❤❤❤
LikeLiked by 1 person
ಯುಗಾದಿ ಆರಂಭ ಚೆನ್ನಾಗಿ ಮೂಡಿ ಬಂದಿದೆ.
LikeLike
ತುಂಬಾ ಚೆನ್ನಾಗಿದೆ
LikeLike
Ugadiya kavite sundarvagide.
LikeLike