ಬೇವಲ್ಲೂ ಬೆಲ್ಲವುಂಟು
ದಾರ್ಶನಿಕರ ಅನುಭಾವಕ್ಕೆ.!
ಬೆಲ್ಲದಲ್ಲೂ ಬೇವುಂಟು
ಸಿನಿಕರ ಮನಸುಗಳಿಗೆ.!

ಬೇವು ಬೆಲ್ಲಗಳ ನಡುವೆ
ಆಸ್ವಾಧಿಸುವ ಬದುಕುಂಟು
ನಮ್ಮಂತಹ ಸಾಮಾನ್ಯ
ಜೀವನ್ಮುಖಿ ಹೃದಯಗಳಿಗೆ.!

ಬಂದಂತೆ ಬದುಕನ್ನು
ಸ್ವೀಕರಿಸುತ್ತ ಸಾಗಿದರೆ
ಸಿಹಿಕಹಿಗಳ ಜೊತೆಯಲ್ಲೆ
ಬದುಕಿನಾ ರುಚಿಯುಂಟು.!

ಏಳುಬೀಳುಗಳಲಿ ಬೆಚ್ಚದೆ
ಬಾಗದೆ ಬೀಗದೆ ನಗುತ
ಬದುಕನ್ನು ಆರಾಧಿಸಿದರೆ
ನಿತ್ಯ ಯುಗಾದಿಯುಂಟು.!

ಬೇವು-ಬೆಲ್ಲಗಳ ಬೆರೆಸಿ
ಹಂಚುವ ಈ ಹಬ್ಬದಲಿ
ಏನೆಲ್ಲಾ ಸತ್ಯಗಳುಂಟು.!
ಎಷ್ಟೆಲ್ಲಾ ತತ್ವಗಳುಂಟು.!

ರೀತಿ ನೀತಿಗಳ ಅರಿತು
ಆಚರಿಸೋಣ ಯುಗಾದಿ.!
ಸಂಸ್ಕೃತಿ ಸಂಸ್ಕಾರಗಳಿಂದ
ಬೆಳಗೋಣ ಬಾಳಹಾದಿ.!

         🔆🔆🔆

✍️ ಶ್ರೀ. ಎ.ಎನ್.ರಮೇಶ ಗುಬ್ಬಿ