ಬಂತು ಯುಗಾದಿ ಬನ್ನೀರಿ ಹಾಡಿ ಕುಣಿಯೋಣ
ಕುಣಿ-ಕುಣಿದು ಹೊಸ ವರ್ಷವ ಆಚರಿಸೋಣ
ಆಚರಿಸುತ್ತಾ ಬೇವು-ಬೆಲ್ಲವ ಸವಿಯೋಣ
ಸವಿದು ಕಷ್ಟ ಸು:ಖವ ಸಮವಾಗಿ ಕಾಣೋಣ
ಕಾಣೋಣ ರವಿಯ ಅಶ್ವಿನಿ ನಕ್ಷತ್ರದ ಪ್ರವೇಶವನು
ಪ್ರವೇಶದ ಗಳಿಗೆಯಲ್ಲಿ ಸೂರ್ಯನಮನ ಮಾಡೋಣ
ಮಾಡಬೇಕು ಅಂದು ಹೂರಣದ ಹೊಳಿಗೆಯನು
ಹೊಳಿಗೆಯನು ಸವಿದು ಚೈತನ್ಯದಿ ಚಿಗುರೋಣ
ಚಿಗುರಬೇಕು ಇದು ಚೈತ್ರ ಮಾಸದ ಮೊದಲ ದಿನ
ಈ ದಿನ ಗುಡಿ-ಗೋಪುರಗಳಿಗೆ ಹೋಗೊಣ
ಹೋಗಿ ಮಾಡೋಣ ನಮ್ಮೂರ ಜಾತ್ರೆಯನು
ಜಾತ್ರೆಯಲಿ ರಂಗು ರಂಗಿನ ಅಂಗಿಯ ಹಾಕೋಣ
ಹಾಕಬೇಕು ಯುಗಾದಿಗೆ ರಂಗಿನ ರಂಗೋಲಿಯನು
ರಂಗೋಲಿಯಂತೆ ಫಳಫಳ ಹೊಳೆಯೋಣ
ಹೊಳೆಯುವಂತೆ ತಳಿರು ತೋರಣ ಕಟ್ಟೊಣ
ಕಟ್ಟುತಾ ಯುಗಾದಿಯನು ಸಂಭ್ರಮಿಸೋಣ

🔆🔆🔆.

✍️ ಮಂಜುನಾಥ ಸಿಂಗನ್ನವರ ಆರೋಗ್ಯ ಇಲಾಖೆ‌,‌ಯಗಟ್ಟಿ