(ಈ ಯುಗಾದಿಗೆ ಒಂದು ಹಾಸ್ಯ ಗಜಲ್)

ನನ್ನೆದೆಯಲಿ ಯಾವಾಗ ಭೂಕಂಪ ಶುರುವಾಗುವುದೋ ಆವಾಗಲೇ ಈ ಯುಗಾದಿ ಬರುವುದು ನೋಡಿ
ಅಲ್ಲಿ ಹಸಿರು ಚಿಗಿಯುತಿದ್ದರೆ ಇಲ್ಲಿ ಕನಸು ನಿದ್ದೆ ಮಂಪರಿನಲಿರುವಾಗಲೇ ಈ ಯುಗಾದಿ ಬರುವುದು ನೋಡಿ

ಮಧ್ಯಮ ವರ್ಗದ ಸಮೀಕರಣವೇ ಹೀಗೆ ಒಂದು ಇದ್ದರೆ ಇನ್ನೊಂದು ಇಲ್ಲ ಹತ್ತು ಬಾ ಎಂದರೆ ಹನ್ನೊಂದು ಬರತಾವ
ಖುಷಿ ಮಾಡಿಕೊಳ್ಳುವವರಿಗೆ ಯಾರದೂ ಅಡ್ಡಿ ಇಲ್ಲ ನೆಟ್ಟಗೆ ಜೇಬಿಗೆ ಕೈಹಾಕಿ ತೆಗೆದು ಬಿಡೋಣ ಗರಿಗರಿ ನೋಟು ಭರ್ಜರಿ ಅಂದಾಗಲೇ ಈ ಯುಗಾದಿ ಬರುವುದು ನೋಡಿ

ಮಗ ಹೇಳುವನು ಹಣ್ಣು ತರಬೇಕೆಂದು ಮಗಳು ಹೇಳುವಳು ಇರಲಿ ಜೊತೆಗೆ ಬ್ರೆಡ್ಡು ಬಿಸ್ಕತ್ತುನೂ ಹೆಂಡತಿ ಕೊಡುವಳು
ಸಪರೇಟು ಪಟ್ಟಿ ಒಂದಕ್ಕೆರಡು ಸಲ ಓದಿ ಇದ್ದಷ್ಟು ಹಣ ಹೊಂದಿಸಿ ಕೊಟ್ಟು ಉಳಿದದ್ದು ಇನ್ನೂ ಬಾಕಿಯಾಗಿರುವಾಗಲೇ ಈ ಯುಗಾದಿ ಬರುವುದು ನೋಡಿ

ಮಾಡುವ ಕಾಯಕ ಕಾನೂನು ವೃತ್ತಿ ಹೊಟ್ಟೆ ಕಾಯ್ದುಕೊಳ್ಳಲು ಪಡಬೇಕು ಹರಸಾಹಸ ಇನ್ನಿಲ್ಲದ ರೀತಿ
ಎಷ್ಟು ಮೆಹನತ್ತು ಮಾಡಿದರೂ ನಮ್ಮ ಮಾತಿಗೆ ದುಡ್ಡು ವಸೂಲಿಯಾಗುವುದಿಲ್ಲ ದುಡ್ಡು ಬಲುಖೋಡಿಯಾದಾಗಲೇ ಈ ಯುಗಾದಿ ಬರುವುದು ನೋಡಿ

ದೇನೇ ವಾಲೋಂಕೊ ಭಗವಾನ್ ಛಪ್ಪಡ ಫಾಡ್ ಕೆ ದೇತಾ ನಹೀ ದೇನೇ ವಾಲೋಂಕ ಜಾನ್‌ ನಹೀ ದೇಖನಾ “ಜಾಲಿ”
ದಿಲ್ ಮೇ ಭಿ ಏಕ್ ಸಮುಂದರ್ ಹೈ ಮಗರ್ ಪೆಹಚಾನ್ ನೆ ವಾಲಾ ಕೌನ್ ಹೈ ಈ ಎದೆಗೆ ಮತ್ತೊಂದಿಷ್ಟು ಉಪ್ಪು ಸುರಿದಾಗಲೇ ಈ ಯುಗಾದಿ ಬರುವುದು ನೋಡಿ.

           🔆🔆🔆

✍️ ವೇಣು ಜಾಲಿಬೆಂಚಿ, ರಾಯಚೂರು.