ಚಂದಾ ಮಾಮನಂತೆ ನೀನು
ಚಕ್ಕುಲಿ ಮಾಮನಂತೆ,
ಚಂದ ನಿನ್ನ ಮೊಗ ಹೊಳೆವ ಚಂದ್ರನೇ!..

ಎಲ್ಲಿಹೋದರಲ್ಲಿ ಬರುವೆ
ನನ್ನ ಮುದ್ದು ಮಾಮನೇ.
ಅಮ್ಮ ನಿನ್ನ ತೋರಿ
ನೋಡು ಮಾಮನಲ್ಲಿ ಎನುವಳು,

ಬಾನ ಚಂದ್ರ ಮನೆಗೆ ಬರುವೆ
ನಕ್ಷತ್ರಹೊತ್ತು ತರುವೆ.

ನನ್ನ ಮೊಗವನೊಮ್ಮೆ ನೋಡಿ
ನಿನಗಿಂತ ನಾನು ಹೆಚ್ಚು ಹೊಳೆವೆ
ಎಂದು ಅಮ್ಮ ನುಡಿವಳು
ಈಗ ಹೇಳು ಮಾಮ ನೀನು
ನೀನು ಮೇಲೋ… ನಾನು?.

🔆🔆🔆

✍️ಶ್ರೀಮತಿ. ಅಶ್ವಿನಿ ಆನಂದತೀರ್ಥ ಮಠದ, ‌‌‌‌‌ಹುಬ್ಬಳ್ಳಿ