ಬರುತಿದೆ ಬರುತಿದೆ ಯುಗಾದಿ ಬರುತಿದೆ
ಬರುತಿದೆ ಸಂತಸದಿ ಯುಗಾದಿ ಬರುತಿದೆ.
ಮೌನದ ಮನದೊಳಗೆ ಮಾತಾಗಿ ಬರುತಿದೆ
ಮಾತಿನ ಮನದೊಳಗೆ ಹಾಡಾಗಿ ಬರುತಿದೆ
ಹಾಡಿನ ಮನದೊಳಗೆ ರಾಗವಾಗಿ ಬರುತಿದೆ
ರಾಗದಲಿ ರಾರಾಜಿಸಿ ಯುಗಾದಿ ಬರುತಿದೆ.
ಆಸೆಯ ಮುಗಿಲೊಳಗೆ ಆನಂದ ತರುತಿದೆ
ಆನಂದದ ಘಳಿಗೆಯು ಸರಸವಾ ಆಡುತಿದೆ
ಸರಸದ ಸಮಯದೊಳಗೆ ವಿರಸ ಓಡುತಿದೆ ಸಮರಸವ ಬೆರೆಸಿ ಯುಗಾದಿ ಬರುತಿದೆ.
ಬೇವಿನ ಕಹಿಯೊಡನೆ ಬೆಲ್ಲವಾಗಿ ಬೆರೆತಿದೆ
ಕಳೆದಿಹ ನೆನಪಿನೊಳಗೆ ಹೊಸತಾಗಿ ಚಿಗುರುತಿದೆ
ಹೊಸತರ ಹೊನಲೊಳಗೆ ಹರಿಗೋಲು ಹಾಕುತಿದೆ
ಹರಿಗೋಲಿಗೆ ಮುಂದೆ ಸಾಗಿ ಯುಗಾದಿ ಬರುತಿದೆ.
🔆🔆🔆
✍️ ಶ್ರೀ ಶಿವಾನಂದ ನಾಗೂರ ಶಿಕ್ಷಕರು ಧಾರವಾಡ.
“ಹೊಸ ಯುಗಾದಿ ”
ಯುಗ-ಯುಗ ಕಳೆದರೂ ಬರುವುದು ಯುಗಾದಿ ಮಣ್ಣು ಸವಿದು ನಿಸರ್ಗ ಚಿಗುರಿ
ಹಳೆ ಬೇರು ಹೊಸ ಚಿಗುರು
ನಿಸರ್ಗ ಸೌಂದರ್ಯದ ಪ್ರಾರಂಭ ಯುಗಾದಿ ಹಬ್ಬ
ಯುಗ-ಯುಗಗಳು ಕಳೆದರೂ ಜನ ಜೀವನಶೈಲಿ ಬದಲಾದರೂ ಕಾಲ ನಿಮಿತ್ಯವಾಗಿ ಪ್ರಾಕೃತಿಕ ಆಯಾಮಗಳು ಬದಲಾದರೂ
ಯುಗಯುಗಗಳಿಂದ ನಡೆದುಬಂದ ಹಬ್ಬ ಯುಗಾದಿ ಹಬ್ಬ
ಈ ಹಬ್ಬವು ನಮ್ಮ-ನಿಮ್ಮೆಲ್ಲರ ಜೀವನವನ್ನು ಬದಲಾಯಿಸುವ ವರ್ಷವಾಗಿ ಈ ಕೆಟ್ಟ ಸೋಂಕಿನಿಂದ ನಮ್ಮ ನಿಮ್ಮೆಲ್ಲರನ್ನು ಸಂರಕ್ಷಿಸಿ ಎಂದು ಬಯಸುವ ನಿಮ್ಮ ಸಹೋದರ
ಪ್ರಕಾಶ್ ವಿಟಿ
LikeLike
ಶ್ರಾವಣ ಬ್ಲಾಗ್ ಲ್ಲಿ ಯುಗಾದಿ ಸುಸಂದರ್ಭದಲ್ಲಿ ನನ್ನ ಕವಿತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ರವಿಶಂಕರ ಸರ್ ಗೆ ಧನ್ಯವಾದಗಳು 🌹🙏
LikeLike
ಅಭಿಮಾನದಿಂದ ಶ್ರಾವಣಕ್ಕೆ ತಮ್ಮ ಕವಿತೆ ಕಳಿಸಿದ್ದಕ್ಕೆ ತಮಗೂ ಕೂಡ ಧನ್ಯವಾದಗಳು ಸರ್
LikeLike