ಹೌದು ಇತ್ತೀಚಿಗೆ ಕಾಯಿಲೆ ಎಲ್ಲರಿಗೂ ಸರ್ವೆ ಸಾಮಾನ್ಯವಾಗಿದೆ. ಗುರಿತಿಸಿ ಕೊಳ್ಳುವಿಕೆಗಾಗಿ ನಡೆಯುವ ಸರ್ಕಸ್ ಗಳನ್ನು ನೋಡಿದಾಗೊಮ್ಮೆ ನನಗೆ ಹುಚ್ಚು ನಗೆ ಬರುತ್ತದೆ. ಗುರಿತಿಸಿಕೊಳ್ಳುವಿಕೆ ಎನ್ನುವುದು ಹಲವರಲ್ಲಿ ಹಲವು ವಿಧವಾಗಿ ರುತ್ತದೆ. ಮನುಷ್ಯ ಸಮಾಜ ಜೀವಿ, ಗುರುತಿಸಿಕೊಳ್ಳುವಿಕೆ ಅವನ ಸಹಜ ಸ್ವಭಾವಗಳಲ್ಲಿ ಒಂದು. ಆದರೆ ಇದು ಅತಿಯಾಗಿ ಖಾಯಿಲೆಯಂತೆ ನಮ್ಮನ್ನೇ ತಿಂದು ಬಿಡಬಾರದು.

ಗುರುತಿಸಿಕೊಳ್ಳು ವಿಕೆ ಎನ್ನುವುದು ಹಲವು ಕ್ಷೇತ್ರ ಗಳಲ್ಲಿ ಹಲವು ವಿಧಗಳಾಗಿ ರುತ್ತದೆ. ಕೆಲವರಿಗೆ ಹಣದ ಶ್ರೀಮಂತಿಕೆ ಯಿಂದ, ಕೆಲವರಿಗೆ ರ್ಯಾಂಕ್ಗಳಿಂದ, ಕೆಲವರಿಗೆ ವಿದ್ವತ್ತಿನಿಂದ, ಕೆಲವರಿಗೆ ನಾಯಕತ್ವದಿಂದ, ಕೆಲವರಿಗೆ ಕಲೆಯಿಂದ, ಕೆಲವರಿಗೆ ಸಾಹಿತ್ಯ ದಿಂದ, ಇನ್ನೂ ಕೆಲವರಿಗೆ ಸೌಂದರ್ಯದಿಂದ ಮತ್ತು ಸ್ಟಂಟ್ಗಳಿಂದ. ಹೀಗೆ ಗುರುತಿಸಿ ಕೊಳ್ಳುವಿಕೆ ಎನ್ನುವುದು ಹಲವು ಆಯಮಗಳನ್ನು ಪಡೆದುಕೊಂಡು ಸಾಧನೆಗೂ ಹಚ್ಚುತ್ತದೆ, ಕೆಲವು ಸಾರಿ ಸರ್ವನಾಶಕ್ಕೂ ಹಚ್ಚುತ್ತದೆ.
ಗುರುತಿಸಿಕೊಳ್ಳುವಿಕೆಯ ಹಂಬಲವೇ ಪರಿಶ್ರಮ ಪಟ್ಟು ಮುಂದೆ ಹೋದವನ ಮೇಲೆ ಪರಿಶ್ರಮ ಪಡದ ಸೋಮಾರಿ ಈರ್ಷೆಪಟ್ಟು ಹಲವು ಅನಾರೋಗ್ಯಕರ ವಾತವರಣದ ನಿರ್ಮಾಣಕ್ಕೆ ಕಾರಣ ವಾಗುತ್ತದೆ.ಹೌದು ಗುರುತಿಸಿಕೊಳ್ಳುವಿಕೆಯ ಹಂಬಲವನ್ನು ಆರೋಗ್ಯಕರ ನಡೆಯಲ್ಲಿ ಕೊಂಡೊಯ್ಯ ಬೇಕಾದ್ದು ಎಲ್ಲರ ಕರ್ತವ್ಯ. ಇಲ್ಲಿ ಗುರಿತಿಸಿ ಕೊಳ್ಳುವಿಕೆಗಾಗಿ ಪರಿಶ್ರಮ ಪಡುವ ಮನೋಧೋರಣೆ ಎಲ್ಲರದಾಗ ಬೇಕು. ಗುರುತಿಸಿಕೊಳ್ಳುವಿಕೆ ಇತ್ತೀಚೆಗಂತೂ ಒಂದು ದೌರ್ಬಲ್ಯವಾಗಿ, ದೌರ್ಬಲ್ಯ ಕಪಟಿಗಳ ದೊಡ್ಡ ಅಸ್ತ್ರವಾಗಿ ಒಂದು ಮೋಸದ ಜಾಲವೇ ನಮ್ಮ ಸುತ್ತ ನಿರ್ಮಾಣ ಆಗಿರುವುದು ನಮ್ಮ ಗಮನಕ್ಕೆ ಬಾರದೆ ಹೋಗುತ್ತದೆ. ದುರಂತವೊಂದು ಸಂಭವಿಸಿ ದಾಗಲೇ ನಮ್ಮ ಕಣ್ಣು ನಿಚ್ಚಳ ವಾದರೆ ಹೇಗೆ? ಹೌದು ಗುರುತಿಸಿಕೊಳ್ಳು ವಿಕೆಯ ನಮ್ಮ ದೌರ್ಬಲ್ಯವನ್ನನಾವು ದಿವ್ಯ ಅಸ್ತ್ರವಾಗಿಸಿ ಕೊಳ್ಳಬೇಕು. ಪ್ರಮಾಣಿಕ ಪರಿಶ್ರಮಕ್ಕೆ ನಮ್ಮ ದೌರ್ಬಲ್ಯ ಅಣಿಯಾಗುವಂತೆ ನಮ್ಮ ಮೆದುಳನ್ನು ನಾವು ಟ್ಯೂನ್ ಮಾಡಬೇಕಾಗಿದೆ. ಇಲ್ಲದಿದ್ದರೆ ನಮ್ಮ ಗುರುತಿಸಿಕೊಳ್ಳುವಿ ಕೆಯ ದೌರ್ಬಲ್ಯವೆ ಮೋಸಗಾರರ ದಿವ್ಯ ಅಸ್ತ್ರವಾಗಿ ನಾವವರ ಕೈ ಬೊಂಬೆಗಾಳಗಿ ಬಿಡುತ್ತೇವೆ. ನಮ್ಮ ದೌರ್ಬಲ್ಯವನ್ನು ಸರಿಯಾಗಿ ಬಳಿಸಿಕೊಂಡು ನಮ್ಮನ್ನು ಮೇಲಕ್ಕೆ ಎತ್ತುತ್ತಿರುವಂತೆ ನಟಿಸಿ ಪ್ರಪಾತಕ್ಕೆ ತಳ್ಳುವ ಎಲ್ಲಾ ಹುನ್ನಾರ ಮಾಡಿಬಿಟ್ಟಿರು ತ್ತಾರೆ. ಮೇಲೆಳದ ಪ್ರಪಾತಕ್ಕೆ ಬಿದ್ದ ಮೇಲೆ ಸತ್ಯದ ಅರಿವಾದರೆ ಹೇಗೆ?
ಜೀವಂತವಾಗಿ ಉಳಿದರೆ ಎಂದಾದರು ಎದ್ದು ನಿಲ್ಲುತ್ತೇವೆಂಬ ಆಶಾವಾದ. ಜೀವಂತವಾಗೆ ಉಳಿಯದಿದ್ದರೆ ಹೇಗೆ?! ಭಗವಂತ ನಮಗೆ ಕರುಣಿಸಿರುವ ಅಮೂಲ್ಯವಾದ ಒಂದೇ ಒಂದು ಬದುಕನ್ನು ನಮ್ಮ ಯಾವ ಬಲಹೀನತೆಗೂ ಆಹುತಿ ಮಾಡದ,ಪರಿಶ್ರಮ ಮತ್ತು ನಮ್ಮ ಕಾರ್ಯ ದಕ್ಷತೆಯಿಂದ ಉನ್ನತೀಕರಿಸಿಕೊಳ್ಳುವೆಡೆಗೆ ಮುನ್ನೆಡೆಯುತ್ತಲಿರೋಣ. ನಮ್ಮ ಗಮನ ಸುತ್ತಲೂ ನಮ್ಮನ್ನು ಆಕರ್ಷಿಸುತ್ತಿರುವ ಕೈ ಬೀಸಿ ಕರೆಯುತ್ತಿರುವ ಒಣ ಪ್ರಚಾರದ ಕಡೆ ಇದೆಯೇ ಹೊರತು ನಿಜಕ್ಕೂ ಪ್ರಮಾಣಿಕ ವಾದ ಪ್ರಯತ್ನದೆಡೆ ಇಲ್ಲ. ಒಂದು ದಿನದ ಪರೀಕ್ಷೆಯ ಅಂಕ ಪಟ್ಟಿ, ಒಂದು ದಿನದ ಹಾರ ತುರಾಯಿ, ಒಂದು ಪ್ರಶಸ್ತಿ, ಒಂದು ಸ್ಥಾನ ಮಾನ, ಒದಿಷ್ಟೇ ಹಣ ಖಂಡಿತಾ ನಮ್ಮ ಬದುಕಲ್ಲವೇ ಅಲ್ಲ. ಸತ್ವಯುತ ಬದುಕೆಂದರೇನು? ಹೌದು ಅರ್ಥವತ್ತಾಗಿ ಅದನ್ನು ಹೇಗೆ ಕಳೆಯಬೇಕು ಎನ್ನುವುದರ ಕುರಿತು ಒಂದಿಷ್ಟು ನಮ್ಮಂತರಾಳವನ್ನೇ ಪ್ರಶ್ನಿಸಬೇಕು. ಅಖಂಡವಾದ ಸುಂದರ ವಾದ ಅಧ್ಬುತವಾದ ಬದುಕೆಂದರೆ ಖಂಡಿತಾ ಅದು ಸ್ಪರ್ದೆಯಲ್ಲವೇ ಅಲ್ಲ, ಅದು ಕೇವಲ ಗುರುತಿಸಿಕೊಳ್ಳುವಿಕೆಯೂ ಅಲ್ಲ, ಹೌದು ಅದು ಅಂಕ ಪಟ್ಟಿಗಳ ಒಟ್ಟಾರೆ ಮೊತ್ತವೂ ಅಲ್ಲ. ಯಾರನ್ನೋ ತುಳಿದು ಮೇಲಕ್ಕೆ ಏಳುವುದು ನಿಜಕ್ಕೂ ಅಲ್ಲ. ಯಾರನ್ನೋ ಪಕ್ಕಕ್ಕೆ ಸರಿಸಿಯೋ ಹಿಂದಕ್ಕೆ ತಳ್ಳಿ ಓಡಿ ಹೋಗುವುದು ಇದಲ್ಲ ಬಿಡು.
ಹಾಗದರೆ ಬದುಕೆಂದರೇನು?! ಹೌದು ಅದು ಧ್ಯಾನ, ಮೌನ ಧ್ಯಾನ. ತಾಳ್ಮೆಯಿಂದ ಮಾಡುವ ಅದ್ಭುತ ತಪಸ್ಸು. ಪ್ರಮಾಣಿಕ ಪರಿಶ್ರಮದಲ್ಲಿ ಆನಂದ ಪಡುವುದು. ಇತ ಎಲ್ಲಾ ಜೀವಿಗಳ ಕುರಿತು ಅನುಕಂಪ, ಸಹಾನುಭೂತಿ, ಮಮಕಾರದಂತಹ ಭಾವನೆಗಳನ್ನು ತಳೆದು ಪ್ರೀತಿಯಿಂದ ಪೋಷಿಸುವುದು. ಬದುಕಿನ ಪ್ರತಿ ಹಂತ ಪ್ರತಿ ಹೆಜ್ಜೆ ನನ್ನಲ್ಲಿರುವ ಎಲ್ಲ ಸಂಪತ್ತಿನ ಸಾರ್ಥಕ್ಯದ ವಿಶ್ಲೇಣೆಯ ಮಹಾ ಆತ್ಮಾವ ಲೋಕನ ಬದುಕು. ಬದುಕೆಂದರೆ ಬರಿಯ ಬಯಕೆ ಹಪಾಹಪಿಯಲ್ಲವೇ ಅಲ್ಲ ದಿವ್ಯ ಜ್ಞಾನದ ತುಡಿತ ಹಂಬಲವುಳ್ಳ ಮಹಾನ್ ಚೇತನ. ರ್ಷ್ಯೆ, ದುರಾಸೆ, ಕಾಮ, ಕ್ರೋದ, ಮದ, ಮತ್ಸರ ಇಂತ ಸಣ್ಣ ಸಣ್ಣ ಅಲೋಚನೆಗಳಲ್ಲಿ ಅಮೂಲ್ಯವಾದ ಸುಂದರ ಬದುಕು ಹಾಳಾಗದಿರಲಿ ಎನ್ನುವುದು ನನ್ನ ಆಕಾಂಕ್ಷೆ. ಒಂದು ಪುಟ್ಟ ಸಹಾಯ, ಒಂದು ನೋವಿಗೆ ಸಾಂತ್ವಾನ, ಕುಸಿದ ಕಾಲುಗಳಿಗಿಷ್ಟು ನೆರವು, ಅಸಹಾಯ ಕತೆಗಿಷ್ಟು ಹೆಗಲು, ಒಣಗಿದ ಮರಕ್ಕಿಷ್ಟು ನೀರು, ಒಂದು ಮೌನದ ಓದು, ಒಂದು ವಿಚಾರದ ಹಂಚಿಕೆ, ಒಂದಿಡಿ ಪ್ರೀತಿ, ಒಂದು ಚಾಣಾಕ್ಷ ಅನುಭವದ ದಿಕ್ಸೂಚಿ, ನಮ್ಮ ಸಂತೃಪ್ತಿಗಾಗಿ ನಮಗಾಗಿ ನಮ್ಮ ಬದುಕನ್ನು ಆನಂದಿಸೋಣ ಬನ್ನಿ. ಇತರರ ಗೊಡವೆ ನಮಗೇಕೆ? ನಾವು ನಾವೇ, ಅವರಿವರ ಹೋಲಿಕೆ ನಮಗೇಕೆ? ನಮ್ಮಷ್ಟಕ್ಕೆ ನಾವು ಸರ್ವೋತ್ತಮರಾಗಲು ಇಂದಿನಿಂದ ಒಂದು ಹೆಜ್ಜೆ ಬನ್ನಿಜೊತೆಜೊತೆಗೆ

🔆🔆🔆

✍️ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ