ಕನಸು ಒಳಗೊಂದು ಕನಸುಗಳು
ಕನಸು ಪ್ರತಿಯೊಬ್ಬರಿಗೂ ಬೀಳುತ್ತದೆ, ಪ್ರತಿದಿನವೂ ನಾವು ಒಂದಲ್ಲ ಒಂದು ವಿಚಾರದ ಕುರಿತು ಕನಸು ಕಾಣುತ್ತೇವೆ. ಕೆಲವೊಂದು ಅರ್ಥವಾದರೆ ಇನ್ನು ಕೆಲವು ಅಸ್ಪಷ್ಟವಾಗಿರುತ್ತದೆ. ಹಾಗೆ ಅದು ಅಷ್ಟೇ ಬೇಗ ನಮ್ಮ ಸ್ಮೃತಿ ಪಟಲದಿಂದ ಮಾಸಿ ಹೋಗಿರುತ್ತದೆ. ಕನಸುಗಳಲ್ಲಿ ಕೆಲವು ಸಂತೋಷವನ್ನು ಇನ್ನೂ ಕೆಲವು ದುಃಖವನ್ನು ಉಂಟುಮಾಡುತ್ತವೆ. ಸಂತೋಷಕರವಾದ ಕನಸು ಕಂಡಾಗ ಮನಸ್ಸು ಕೊಂಚ ಹಿಗ್ಗುವುದು ಸಹಜ. ಅದೇ ಕೆಲವು ಕನಸುಗಳು ಭವಿಷ್ಯವನ್ನು ತಿಳಿಸುತ್ತವೆ. ಭವಿಷ್ಯದಲ್ಲಿ ಉಂಟಾಗುವ ಸಂಗತಿಗಳು ಸಕಾರಾತ್ಮಕವಾಗಿದ್ದರೆ ಮನಸ್ಸು ನಿರಾಳವನ್ನು ಅನುಭವಿಸುತ್ತದೆ. ಅದೇ ಕೆಟ್ಟದ್ದಾಗುವುದು ಅಥವಾ ಹತ್ತಿರದವರ ಸಾವು-ನೋವು ಸಂಭವಿಸು ವುದು ಎಂದರೆ ಅದು ಮನಸ್ಸಿಗೆ ಭಯ ಹಾಗೂ ಆತಂಕವನ್ನು ಉಂಟು ಮಾಡುತ್ತದೆ. ಮುಂಜಾನೆಯ ಸಮಯದಲ್ಲಿ 5-6 ಗಂಟೆಯ ಒಳಗೆ ಕಂಡ ಕನಸುಗಳು ಭವಿಷ್ಯದಲ್ಲಿ ನಿಜವಾಗುವುದು ಎಂದು ಹೇಳಲಾಗುತ್ತದೆ. ಇತರ ಸಮಯಗಳಲ್ಲಿ ಕಂಡ ಕನಸುಗಳು ಭವಿಷ್ಯದಲ್ಲಿ ಸಂಭವಿ ಸದು. ಅವು ನಿಮ್ಮ ಮನಸ್ಸಿನಲ್ಲಿ ಉಂಟಾ ಗುವ ಒಂದು ತೊಳಲಾಟ, ಆಂತರಿಕ ಭಾವನೆ ಹಾಗೂ ಬಯಕೆಯನ್ನು ಸೂಚಿಸು ತ್ತವೆ. ಜೊತೆಗೆ ಮಲಗುವ ಮುನ್ನ ಯಾವ ಸಂಗತಿಯ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿರು ತ್ತಾರೆ ಅಥವಾ ಯಾವ ವಿಷಯಗಳು ಜೀವನದಲ್ಲಿ ನಡೆಯಬೇಕು ಎನ್ನುವುದನ್ನು ಬಯಸುತ್ತಾರೆ ಅದರ ಬಗ್ಗೆಯೇ ಕನಸುಗಳು ಬೀಳುತ್ತವೆ ಎಂದು ಕೆಲವು ಧಾರ್ಮಿಕ ಶಾಸ್ತ್ರಗಳು ಬಹಿರಂಗಪಡಿಸುತ್ತವೆ. ಎಲ್ಲರಿಗೂ ಒಂದೇ ರೀತಿಯ ಕನಸುಗಳು ಬೀಳುತ್ತವೆ ಎಂದುಹೇಳಲು ಸಾಧ್ಯವಾಗದು. ಕನಸುಗಳು ಅಂಧರ ಪಾಲಿಗೂ ಇರುತ್ತವೆ, ಆದರೂ ಎಷ್ಟೋ ಸಲ ಆದಷ್ಟು ಕನಸುಗಳ ಚಿತ್ರಣ ನಮಗೆ ಎಚ್ಚರ ಆದಮೇಲು ಪುನರಾವರ್ತನೆ ಆದಾಗ ಮಾತ್ರ ಮನಸ್ಸು ಚಿಂತೆಯ ಗೂಡಾಗುತ್ತದೆ.

ನಮ್ಮ ಕನಸ್ಸಿನಲ್ಲಿ ಯಾವುದೋ ವಸ್ತು ನೇತಾಡುತ್ತಿದ್ದಂತೆ ಕಾಣುವುದು ಅಥವಾ ಬೇರೆ ಯಾವುದೋ ವ್ಯಕ್ತಿಯ ವಸ್ತುಗಳು ಜೋತಾಡುತ್ತಿದ್ದಂತೆ ಕಂಡರೆ, ನೀವು ಯಾವುದೋ ಸಂಗತಿಗಳಿಗೆ ತಪ್ಪು ನಿರ್ಧಾರವನ್ನು ಕೈಗೊಂಡಿದ್ದೀರಿ ಅಥವಾ ನೀವು ತಪ್ಪಾದ ಕಲ್ಪನೆಯನ್ನು ಹೊಂದಿದ್ದೀರಿ ಎನ್ನುವ ಅರ್ಥವನ್ನು ನೀಡುವುದು. ಕನಸಿನಲ್ಲಿ ನೀವೇ ನಿಮ್ಮ ತಲೆಗೆ ಗುಂಡನ್ನು ಹಾರಿಸಿಕೊಂಡಿದ್ದೀರಿ, ಅದನ್ನು ಯಾರೋ ಬೇರೆ ವ್ಯಕ್ತಿ ನೋಡಿದ್ದಾರೆ ಎನ್ನುವಂತೆ ಕಂಡು ಬಂದರೆ ಅದು ನಿಮಗೆ ಸಾಕಷ್ಟು ಆತಂಕ ಹಾಗೂ ಭಯವನ್ನು ಉಂಟು ಮಾಡುವುದು. ಇಂತಹ ಕನಸನ್ನು ನೀವು ಕಂಡಿದ್ದೀರಿಎಂದಾದರೆ,ನೀವು ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದೀರಿ, ಅದನ್ನು ಯಾವುದೋ ವ್ಯಕ್ತಿಯಿಂದ ಮರೆಮಾಚು ತ್ತಿದ್ದೀರಿ ಎನ್ನುವುದನ್ನು ತೋರಿಸುವುದು.

   🔆🔆🔆

✍️ ಆಕರ್ಷ ಆರಿಗ
ಎಸ್ ಡಿ ಎಮ್ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ