ಶಾಲಾ,ಕಾಲೇಜುಗಳಲ್ಲಿ ಹಾಜರಾತಿ ಎಂಬುದು ನಾವು ತರಗತಿಗಳಲ್ಲಿ ಇರುತ್ತೇವೆ ಎಂಬುದಕ್ಕೆ ಸಾಕ್ಷಿಯ ಪುಸ್ತಕ.ಶಾಲೆಗಳಲ್ಲಿ ಹೋಗುವಾಗ ಅಲ್ಲಿ ವರ್ಷದ ಕೊನೆಯಲ್ಲಿ ಉತ್ತಮ ಮತ್ತು ಅತ್ಯುತ್ತಮ ಹಾಜರಾತಿ ಎಂದು ಪ್ರಶಸ್ತಿ ಪತ್ರಗಳು ದೊರೆಯುತ್ತಿ ದ್ದವು.ಆ ಪ್ರಶಸ್ತಿಯನ್ನು ಪಡೆಯುವುದಕ್ಕಾ ಗಿಯೇ ಎಷ್ಟೇ ಅನಾರೋಗ್ಯವಿದ್ದರೂ ತರಗತಿಯನ್ನು ಮಿಸ್ ಮಾಡ್ತಾನೇ ಇರಲಿಲ್ಲ.
‘ಬರ್ತಾ ಬರ್ತಾ ರಾಯನ್ ಕುದುರೆ ಕತ್ತೆ ಆಯ್ತು’ ಅನ್ನುವ ಗಾದೆಯಂತೆ ಕಾಲೇಜ್ ಎಂಬ ಮೆಟ್ಟಿಲನ್ನು ಏರಿದ ಕೂಡಲೇ ತರಗತಿಗಳೇ ಬೋರಿಂಗ್ ಆಗಿ ಬಂಕ್ ಕಡೆ ಮನಸ್ಸು ವಾಲುತ್ತವೆ. ಇಂತಿಷ್ಟು ಶೇಕಡ ಒಂದೊಂದು ಸಬ್ಜೆಕ್ಟ್ ಗಳಿಗೆ ಇರಬೇಕು, ಇಲ್ಲಂದರೆ ಪರೀಕ್ಷೆಗೆ ಕೂರಲು ಬಿಡುವುದಿಲ್ಲ ಇಂತ ನಿಯಮಗಳಿರುತ್ತವೆ, ಅದಕ್ಕೆ ಅಷ್ಟಷ್ಟೇ ಶೇಕಡಗಳು ಆಗುವಂತೆ ಹೋಗುವ ವಿಧ್ಯಾರ್ಥಿಗಳು ಇರುತ್ತಾರೆ.
ಈ ಅಟೆoಡರ್ ಗಳಲ್ಲಿ ನಮ್ಮಹಾಜರಾತಿಯ ಭವಿಷ್ಯ ಇರುತ್ತದೆ,ಒಂದೊಂದು ಕ್ಲಾಸನಲ್ಲಿ ಒಂದೊಂದು ನಿಮಿಷವೂ ಒಂದೊಂದು ಗಂಟೆ ಕಳೆದ ಹಾಗೆ ಭಾಸವಾಗುತ್ತದೆ.ಇಂತಹ ಸಮಯದಲ್ಲಿ ನಮಗೆ ಲೆಕ್ಚರ್ಸ್ ಗಳು ನೀಡುರುವಂತಹ ಈ ಹಾಜಾರತಿಯನ್ನು ಕೊಂಡೊಯ್ಯಲು ಅಟೆoಡರ್ ಗಳು ಬರುತ್ತಾರೆ,ಆಗ 3,4 ನಿಮಿಷಗಳ ಕಾಲ ರೆಸ್ಟ್ ಸಿಗುತ್ತದೆ. ಅವರು ಬಂದಾಗ ಆಗುವಂತಹ ಖುಷಿ ಮುಗಿಲೆತ್ತರ.ಬೋರಿಂಗ್ ಅಲ್ಲಿ ಸ್ವಲ್ಪ ರೆಸ್ಟ್, ಅದು ಎಷ್ಟೋ ಲೋಟ ಹಾಲು ಕುಡಿದ ರೀತಿ ಆಗುತ್ತದೆ.ಅವರು ನಮ್ಮ ಹಾಜರಾತಿ ತೆಗೆದುಕೊಂಡು ಹೋಗುವಾಗ ಅವರೊಟ್ಟಿಗೆ ಹೋಗೋಣ ಎಂದೆನಿಸುತ್ತದೆ.
ಅದೆಷ್ಟು ದೊಡ್ಡ ದೊಡ್ದ ಕಟ್ಟಡದಕಾಲೇಜಿನ ತುಂಬಾ ಅಟೆಂಡರ್ ಗಳು ಪ್ರತಿಯೊಂದು ಗಂಟೆಗೂ ಪ್ರತಿ ಕ್ಲಾಸ್ ಗಳಿಗೂ ಹೋಗಿ ನಮ್ಮ ಹಾಜರಾತಿ ಯನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ಅದನ್ನು ರಿಜಿಸ್ಟರ್ ಮಾಡುತ್ತಾರೆ.ನಮಗೆ ಒಂದೆರೆಡು ಬಾರಿ ಮೆಟ್ಟಿಲನ್ನು ಹತ್ತಿ ಉಳಿದರೆ ಉಫ್ ಇನ್ನು ಆಗುವುದಿಲ್ಲ ಎಂದು ಸುಸ್ತಾಗುತ್ತೇವೆ.ಆದರೆ ಇವರು ಯಾವ ಮೆಟ್ಟಿಲಿಗೊ ಅಂಜದೆ ಸುಸ್ತನ್ನು ಓಡಿಸಿ ಕೆಲಸ ಮಾಡುತ್ತಾರೆ. ಹಾಜರಾತಿ ಗಳು ಮಾತ್ರ ಅಲ್ಲದೆ ನಮ್ಮ ಪರೀಕ್ಷಾ ಉತ್ತರ ಪತ್ರಿಕೆಯನ್ನು ಜೋಪಾನ ಮಾಡಿ ಸಬ್ಜೆಕ್ಟ್ ಗಳಿಗೆ ಸರಿಯಾದ ಕ್ರಮದಲ್ಲಿ ಅಚ್ಚುಕಟ್ಟಾಗಿ ಇಡುತ್ತಾರೆ.ಅವರು ಕೇವಲ ತಮ್ಮ ಸಂಬಳಕ್ಕಾಗಿ ಕೆಲಸ ಮಾಡುವು ದಲ್ಲದೆ ಆಸಕ್ತಿಯುತ ವಾಗಿ ತಮ್ಮನ್ನ ತಾವು ತೊಡಗಿಸಿಕೊಂಡು ನಿರ್ವಹಿಸುತ್ತಾರೆ. ವಿಧ್ಯಾರ್ಥಿಗಳಾದ ನಾವು ಅವರನ್ನು ಒಮ್ಮೆ ನಾವು ಅವರಲ್ಲಿ ಮಾತನಾಡಿಸಬೇಕು, ಲವಲವಿಕೆ ಇಂದ ಅತಿ ಸಂತಸದಿಂದ ಮಾತನಾಡುತ್ತಾರೆ ಹಾಗೂ ಸಂತೋಷಿಸು ತ್ತಾರೆ.

ಅಟೆoಡರ್ ಗಳು ಸಾಮಾನ್ಯ ಕೆಲಸಕ್ಕೆ ಮಾತ್ರ ಸೀಮಿತವಲ್ಲದೆ ಅವರಲ್ಲಿ ನಾನಾರೀತಿಯ ಪ್ರತಿಭೆಗಳು ಅಡಗಿರುತ್ತವೆ. ಪ್ರತಿಭೆಯನ್ನು ಅನವಾರಣ ಗೊಳಿಸಲು ಅವರಿಗೆ ಸಂದರ್ಭ ಒದಗಬೇಕು ಅಷ್ಟೇ. ಶಿಕ್ಷಕರ ದಿನದಂದು ಆಚರಣೆಯಲ್ಲಿ ಶಿಕ್ಷಕರ ,ಲೆಕ್ಚರ್ಸ್ ಗಳ ಪ್ರತಿಭೆ ಪ್ರದರ್ಶನದ ಜೊತೆಗೆ ಈ ನಮ್ಮ ಅಟೆoಡರ್ ಗಳಿಗೂ ಅವಕಾಶವನ್ನು ಕೊಟ್ಟರೆ ಅದ್ಭುತವಾಗಿರು ತ್ತದೆ. ನಮ್ಮ ಕಾಲೇಜಿನಲ್ಲಿ ನಮಗೆ ನೋಡುವಂತಹ ಭಾಗ್ಯವೂ ಇದೆ, ಅವರ ಪ್ರತಿಭೆಯನ್ನು ನೋಡುತ್ತಾ ಮೈಮರೆಯು ತ್ತೇವೆ.

ಕಾಲೇಜಿನಲ್ಲಿ ಅವರಿಗೆ ಆದಂತಹ ಒಂದು ಸಮವಸ್ತ್ರ ವನ್ನು ಧರಿಸಿ ನಮಗೂ ಖುಷಿಯನ್ನು ನೀಡಿ, ಸಮಯಕ್ಕೆ ಸರಿಯಾಗಿ ಅವಧಿಯ ಬೆಲ್ ಮಾಡಿ ನಮಗೆ ರೆಸ್ಟ್ ಕೊಡುವ ವಿದ್ಯಾರ್ಥಿಗಳ ಸ್ನೇಹಿತರಾದ ಅಟೆಂಡರ್ ಗಳಿಗೆ ಸಲಾಂ ಹಾಗೂ ವೆರಿ ವೆರಿ ಥ್ಯಾಂಕ್ ಯೂ………

        🔆🔆🔆

ಹರ್ಷಿತಾ ಹೆಬ್ಬಾರ್ ಎಸ್.ಡಿ.ಎಂ. ಕಾಲೇಜ್ ಉಜಿರೆ