ಜಾಡು ಹಿಡಿದಿದೆ ಮನ ಸಂತೋಷದ ಜಾಡು
ಬಯಕೆಗಳ ಆಲಾಪ ಹಿಡಿದು
ಜಯದ ಘೋಷ ಮೊಳಗಲೆಂಬ ಮೋಹಕೆ
ಕ್ಷಣಿಕ ಸುಖಕೆ ತಡಕಾಡಿ
ಅರ್ಥಹೀನ ಬದುಕಿಗೆ ಓಗೊಡುತ

ಶಾಂತಿ ಸಂಯಮಕೆ ಬೆಲೆಕೊಡದೆ
ಆಧ್ಯತೆಯ ಅನುಸಾರಕೆ ಸಂಬಂಧ
ತಾತ್ವಿಕ ತಳಹದಿಯ ಮರೆತು
ಜಾತಿಯ ಜಿಡ್ಡುಗಟ್ಟುತನದಿ
ಜಾಗತೀಕ ಸಂಕಷ್ಟ ಲೆಕ್ಕಿಸದೆ‌

ಸುಲಭ ಖರೀದಿಯ ಆವೇಗ ಹೆಚ್ಚಿ
ಭ್ರಮೆಯಲಿ ಅವ್ಯವಹಾರದ ಪ್ರೇರಣೆ
ಚಂಚಲತೆಯಲಿ ಸ್ಥಿತ್ಯಂತರದ ಸಾಧ್ಯತೆ
ಮೌಲ್ಯಯುತ ಬದುಕೇ ಮರಿಚೀಕೆಯಾಗಿಸಿದೆ
ಮಾನಸೀಕ ಗೀಳನು ತುಂಬುತಿದೆ.

ಬಾಹ್ಯ ಸಂತೋಷ ಅದೃಷ್ಟದ ಅಡಿಯಾಳು
ಸಂತೋಷದ ಹುಡುಕಾಟ ಬರೀ ಓಳು
ನಿಯಂತ್ರಣವ ಅನುಕರಿಸೋಣ
ಆಂತರಿಕ ಸದೃಢತೆಯ ಪರಿಪಾಲಿಸಿ
ಶಾಶ್ವತ ಸಂತೋಷ ಕಂಡುಕೊಳ್ಳೋಣ.

         🔆🔆🔆

✍️ ರೇಷ್ಮಾ ಕಂದಕೂರ, ಸಿಂಧನೂರ