ಕಣ್ಣ ಕನಸಲಿ ರಂಗನಿಟ್ಟವನು ನೀನೇನಾ
ಬೆಣ್ಣೆ ಮಾತಲಿ ಒಲವಕೊಟ್ಟವನು ನೀನೇನಾ

ಮೋಹ ಕರೆಯಲಿ ಸೆಳೆದು ಬಳಿಯಲಿ
ಬಿಸಿ ಉಸಿರಿಗೆ
ಪಿಸು ಧ್ವನಿಯಲಿ ಮಧುವನಿಟ್ಟವನು ನೀನೇನಾ

ಆಸೆಯ ಚಿಟ್ಟೆಗೆ ಭಾವಬಣ್ಣದೋಕುಳಿ
ನೀಲಾಗಸಕೆ ಹಾರಿಸಿಬಿಟ್ಟವನು ನೀನೇನಾ

ಮನದ ಆಲಯದಿ ಒಲವಿನಾ ರಂಗವಲ್ಲಿಗೆ
ಚುಂಬನದ ಚುಕ್ಕೆಗಳನಿಟ್ಟವನು ನೀನೇನಾ

ಎಂದೂ ತೀರದ ‘ಆರಾಧ್ಯೆ’ಯ ಪ್ರೇಮ ಪೂಜೆಗೆ
ಸದಾ ಬೆಳಗೊ ಹಣತೆಯನಿಟ್ಟವನು ನೀನೇನಾ

              🔆🔆🔆

✍️ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪೂರ