ಎಂದಿನಂತೆ ನಾನು ಆ ದಿನ ಮದುವೆಯಲ್ಲಿ ಫೊಟೊ ತೆಗೆಯಲು ಹೋಗಿದ್ದೆ. ಅದೃಷ್ಟ ವೆಂಬಂತೆ ಅವಳೂ ಆ ವಿವಾಹಕ್ಕೆ ಬಂದಿದ್ದಳು. ಈ ಮೊದಲು ಅವಳನ್ನು ನಾನು ನೋಡಿದ್ದೆ. ಅವಳ ಮುಖವು ನನ್ನ ಮನಸ್ಸಲ್ಲಿ ಅಚ್ಚೊತ್ತಿತ್ತು. ಏಕೆಂದರೆ ನಾನು ನನ್ನ ಕ್ಯಾಮರಾದಲ್ಲಿ ಅವಳ ಸುಂದರ ಮೊಗದಲ್ಲಿ ಮೂಡಿದ ನಗುವನ್ನು ಸೆರೆಹಿಡಿ ದಿದ್ದೆ. ಅಲ್ಲಿಂದ ಅವಳ ಮುಖ ನನಗೆ ಚಿರಪರಿಚಿತ. ಆ ನಗು ನನ್ನ ಮನಸ್ಸನ್ನು ಆವರಿಸಿತ್ತು.
ಇತ್ತೀಚಿನ ದಿನಗಳಲ್ಲಿ ನಾನು ಹೋಗುವ ಪ್ರತೀ ಕಾರ್ಯಕ್ರಮದಲ್ಲಿ ಅವಳು ಕಾಣಿಸಿ ಕೊಳ್ಳುತ್ತಿದ್ದಾಳೆ. ಇದು ನನ್ನ ಭ್ರಮೆಯೋ ಅಲ್ಲ ನಿಜವಾಗಿಯೂ ಅವಳು ಆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿ ದ್ದಾಳೋ ಗೊತ್ತಿಲ್ಲ. ಅದು ಯಾವ ಸಂಬಂಧ ನಮ್ಮನ್ನು ಒಂದೇ ಕಡೆ ಸೇರುವಂತೆ ಮಾಡಿದೆ ಎಂಬುದು ನನಗೆ ಅರ್ಥವಾಗು ತ್ತಿಲ್ಲ. ಅವಳು ಪ್ರತೀ ದಿನ ನನ್ನನ್ನು ನೋಡಿ ಅಪರಿಚಿತರಂತೆ ವರ್ತಿಸು ತ್ತಿದ್ದಳು, ನಾನು ಕೂಡ ಅದೇ ರೀತಿ ವರ್ತಿಸು ತ್ತಿದ್ದೆ. ಒಮ್ಮೆಯಾದರೂ ಅವಳನ್ನು ಮಾತ ನಾಡಿಸಬೇಕೆಂಬ ಹಂಬಲ ನನಗಿತ್ತು. ಆದರೆ ಮಾತನಾಡಿಸಲು ಅದೇನೊ ಕಳವಳ. ಆದರೆ ಇಂದು ಅವಳು ನನ್ನನ್ನು ನೋಡಿ ನಕ್ಕಳು, ನಾನು ಕೂಡ ಒಮ್ಮೆ ನಕ್ಕು ಮುಂದುವರಿದೆ.
ಫೊಟೊಕ್ಕೆ ಒಂದು ವಿಷೇಷವಾದ ಗುಣ ಇದೆ. ನಾವು ಒಂದು ಫೋಟೊವನ್ನು ಸೆರೆ ಹಿಡಿದರೆ, ಪ್ರತೀಬಾರಿ ಅದನ್ನು ನೋಡು ವಾಗ ಅದು ಆ ಕ್ಷಣವನ್ನು ನೆನಪಿಸುತ್ತದೆ, ಅದನ್ನು ಕ್ಲಿಕ್ಕಿಸುವಾಗ ನಮ್ಮಲ್ಲಿ ಮೂಡಿದ ಭಾವನೆಯನ್ನು ಮೂಡಿಸುತ್ತದೆ. ಆ ದಿನ ನಾನು ಅವಳ ಫೋಟೋಗಳನ್ನು ನೋಡುತ್ತ ಆ ಅಮೃತ ಘಳಿಗೆಯನ್ನು ನೆನಪಿಸುತ್ತಿದ್ದೆ, ಆಗ ಅವಳು ನನ್ನ ಸ್ಟುಡಿಯೊಗೆ ಬಂದಳು. ನನ್ನ ಮನದಲ್ಲಿ ಇವಳು ಎಲ್ಲಿಯವಳು? ನನ್ನ ಸ್ಟುಡಿಯೊಗೆ ಯಾಕೆ ಬಂದಳು? ಎಂಬ ಹಲವಾರು ಪ್ರಶ್ನೆಗಳು ಮೂಡಿದವು. ಕೇಳೋಣವೆಂದರೆ ಮಾತನಾಡಿಸಲು ಅದೇನೋ ಭಯ.
ಅವಳು ಸ್ಟುಡಿಯೊಗೆ ಒಂದು ಆಲ್ಬಮ್ಮಿಗೆ ಫೋಟೊ ತೇಗೆಯಬೇಕೆಂದು ಹೇಳಲು ಬಂದಿದ್ದಳು. ನನ್ನ ಮನದಲ್ಲಿ ಎಲ್ಲಿಲ್ಲದ ಆನಂದ. ಏಕೆಂದರ ನಾನು ನನ್ನ ಕ್ಯಾಮರಾ ದಲ್ಲಿ ಅವಳ ಇನ್ನೊಂದಿಷ್ಟು ಫೋಟೊ ಗಳ ಲನ್ನು ಸೆರೆಹಿಡಿಯಲು ಅವಕಾಶ ದೊರೆತಂತಾಯಿತು ಎಂದು ನಾನು ಆನಂದ ಪಟ್ಟೆ. ಆದರೆ ಅದನ್ನು ವ್ಯಕ್ತಪಡಿಸದೆ “ಆಯಿತು” ಎಂದು ಹೇಳಿದೆ.ಈ ಆಲ್ಬಮ್ಮಿನ ಕಾರಣದಿಂದ ಸುಮಾರು ನಾಲ್ಕು ದಿನಗಳ ಕಾಲ ಜೊತೆಗೆ ಕಾಲ ಕಳೆಯಲು ಸಾಧ್ಯವಾಯಿತು. ಹೀಗೆ ನಮ್ಮ ಮಧ್ಯೆ ಸ್ನೇಹವೆಂಬ ಬಾಂಧವ್ಯ ಬೆಳೆಯಿತು. ಪ್ರೀತಿ ಯಾರ ಮಧ್ಯ ಹೇಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಈ ಪ್ರೀತಿಯು ಕೊನೆಯವರೆಗೂ ಹೀಗೇ ಇರಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ.
🔆🔆🔆
✍️ ಕಿಶನ್ ನೀರ್ಪಾಜೆ
ಎಸ್.ಡಿ.ಎಮ್ ಕಾಲೇಜು
ಉಜಿರೆ
ನಿಮ್ಮ ಪ್ರೀತಿ ಕೊನೆಯವರೆಗೂ ಹೀಗೇ ಇರಲಿ ಎಂಬುದು ಪ್ರಾರ್ಥನೆ ನಮ್ಮದು
LikeLiked by 1 person