ದಾನೇಶ್ವರಿ ಮಹಿಳಾ ಸಂಘ

ಅಕ್ಕಮಹಾದೇವಿಯಕಲ್ಯಾಣ ಮಂಟಪದಲಿ ಸ್ತ್ರೀಶಕ್ತಿಯ ಸಂಘಟನೆಯಾಶ್ರಯದಲಿ ಉದ್ಘಾಟನೆಯಾಯಿತು ದಾನೇಶ್ವರಿ ಮಹಿಳಾ ಸಂಘ ಶರಣೆ ದಾನಮ್ಮ ನಿನಗೆ ನಮ್ಮೆಲ್ಲರ ಶರಣು ಸದಾ ನಮ್ಮೆಲ್ಲರ ಮೇಲಿರಲಿ ನಿನ್ನಯ ಪ್ರಭೆಯು ಸಮಾಜ ಸೇವೆಯಲಿ ತೊಡಗುವೆವು ನಿನ್ನಯ ಆಶೀರ್ವಾದದಿ ದಿಟ್ಟ ಹೆಜ್ಜೆಯ ಹಾಕುವೆವು ಬಿಡುವಿರದ ಚಟುವಟಿಕೆಯಡಿಯಲಿ ಏರುವೆವು ಸಾಧನೆಗಳ ಉತ್ತುಂಗ ಸ್ತ್ರೀ ಶಕ್ತಿಯ ಜಾಗೃತಿಯಲಿ ಹಾಕುವೆವು ಸುರಂಗ ನಡೆಯಲಿ ಮಾನ ಸನ್ಮಾನಗಳು ಸ್ವಾತಿ ಮಳೆ ಸುರಿದಂಗ ಹಸನಾಗಲಿ ಸ್ತ್ರೀಯರ ಬಾಳು ದಾನಮ್ಮ ಮುತ್ತಿನ ಮಳೆಗೆರೆದಂಗ ರಾರಾಜಿಸಲಿ ಸ್ತ್ರೀಶಕ್ತಿ ಮಾಧುರ್ಯ ಸ್ವರದಾಂಗ

🔅🔅

ಹೆಣ್ಣು

ಹೆಣ್ಣು ಒಲಿದರೆ ನಾರಿ

ಮುನಿದರೆ ಮಾರಿ

ಎಲ್ಲರಿಗೂ ಇವಳೇ ಆಧಾರಿ

ನಡೆಯುವಳು ದಿಟ್ಟ ನಡೆ ತೋರಿ

ಮುನ್ನುಗ್ಗುವಳು ದೈವಾನುಸಾರಿ

ಸಹನೆಯ ಸಾಕಾರ ಮೂರುತಿ

ನಾಡಿಗೆಲ್ಲ ಇವಳಿಂದ ಕೀರುತಿ

ಬಿಡುವಿಲ್ಲದೇ ದುಡಿಯುವ ಸಂಚಾರಿ

🔆🔆🔆

✍️ಪೂಜಾ ಗೋಪಶೆಟ್ಟಿ, ಮುನವಳ್ಳಿ ತಾ: ಸವದತ್ತಿ ಜಿ: ಬೆಳಗಾವಿ