ಕನಸಲ್ಲಿ ಕಾಡಿದ
ಕಲ್ಮಳೆಯ ಕಂಪು
ಮನದ ಮರೆಯಲ್ಲಿ
ಇಣುಕಿ ಹೊರಟ ಚಂದ್ರನಂತೆ
ನೆನಪುಗಳೆಂಬ ಹಾಸಿಗೆಯಲ್ಲಿನ ಕಣ್ಣೀರೆಂಬ ಹತ್ತಿಯ ರಾಶಿಗೆ
ಬೆಚ್ಚಗಿನ ಹೊದಿಕೆಯೇ
ಕಣ್ಣೊರೆಸುವ ಕೈಗಳು
ತೂತಿನ ಮಡಕೆಯಲ್ಲಿ
ಅಕ್ಕಿಯನ್ನಿರಿಸಿ
ಬೇಯದ ಗಂಜಿಗೆ
ಪಾತ್ರೆಯನ್ನು ದೂರಿದಂತೆ
ಮಿಂಚಿಹೋದ ಗಳಿಗೆಯ
ಕಳೆದುಕೊಂಡ ಸಮಯವ
ಸಿಗದಿರುವ ಭಾಗ್ಯವ
ನೆನಸಿದರೇನು ಪ್ರಯೋಜನ
🔆🔆🔆
✍️ಜ್ಯೋತಿ. ಭಟ್ ಎಸ್.ಡಿ.ಎಂ. ಕಾಲೇಜು, ಉಜಿರೆ