ಮೊದಲ ನೋಟದಲ್ಲೇ ದೋಚಿರುವೆ ನೀ
ಜೋಪಾನವಾಗಿ ಕಾದಿರಿಸಿಟ್ಟಿದ್ದ ಈ ನನ್ನ ಹೃದಯ
ಹಠಹಿಡಿಯುತಿದೆ ಮನವು ಇದೀಗ
ನೀನೇ ಬೇಕೆಂದು ಓ ಇನಿಯ..

ಕಾಡುವ ನಿನ್ನ ಕಣ್ಗಳಲ್ಲಿನ ಕುತೂಹಲ
ನನ್ನೀ ಮನಕ್ಕೆ ಹಾಕಿಹುದು ಗಾಳ
ನೀ ತೆರೆದಿರುವೆ ಹೃದಯದ ಕಿಟಕಿಯ
ನಾ ಬರೆಯುವೆನು ಪ್ರೀತಿಯ ಓಲೆಯ

ಅರೆಕ್ಷಣ ನೀ ಮರೆಯಾದರೂ
ಏನನ್ನೋ ಕಳೆದುಕೊಂಡ ಭಾಸ ನನ್ನಲ್ಲಿ
ಜಾರುವುದು ಹನಿಯೊಂದು ಕಣ್ಣಲ್ಲಿ
ನೀನಿಲ್ಲದ ಆ ಮೌನ ಪಥದಲ್ಲಿ

ಪ್ರೇಮ ದೇವಾಲಯದ ತೇರು ನೀನು
ಅದನೆಳೆಯಲು ನಿಂತಿರುವ ಭಕ್ತೆನಾನು
ಸ್ವೀಕರಿಸೆನ್ನ ಮನವಿಯ ಪ್ರಾರ್ಥನೆ
ಕರುಣಿಸು ಅದಕೆ ಒಪ್ಪಿಗೆಯ ಸೂಚನೆ

                🔆🔆🔆

✍️ ಕೀರ್ತನ
ಆಳ್ವಾಸ್ ಕಾಲೇಜು,ಮೂಡಬಿದರೆ