ತೀಡುತಿರು ಹೃದಯ ಸಾಣೆಗೆ ಚಂದನವ ಸಖಿ
ನೀಡುತಿರು ಒಲವ ಭಾಷೆ ಸ್ಪಂದನವ ಸಖಿ

ನಿನ್ನ ಕಣ್ಣೋಟದ ಕಡಲ ಮೀನಾಗಿದೆ ಮನ
ಒಲವ ಸುಧೆಯೊಳು ಇಳಿಸಿ ಬಿಡಿಸು ಬಂಧನವ ಸಖಿ

ಚಪಲದ ಚಿಟ್ಟೆಗೆ ಆಸೆಯ ರೆಕ್ಕೆ ಮೂಡುತಿವೆ
ತೋರಿಸು ಇರುಳ ಕನಸಲಾದರು ನಂದನವ ಸಖಿ

ಹರೆಯದ ಚಿತ್ತ ಚಾಂಚಲ್ಯ ಕೆಣಕದಿರು ಮತ್ತೆ
ನೀಡು ಉಸಿರಾಗಿ ಅನುರಾಗದ ಇಂಧನವ ಸಖಿ

ಮಾಯೆ ಬೇಂಬತ್ತಿದವನ ಬರಸೆಳೆದು ಬಿಡು ಒಮ್ಮೆ
‘ಆರಾಧ್ಯ’ ನಿನ್ನ ಮಡಿಲ ಮುಗ್ಧ ಕಂದನವ ಸಖಿ

                🔆🔆🔆                   

✍️ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ವಿಜಯಪೂರ